ಬೆಂಗಳೂರು: ರಾಜ್ಯ ಸರ್ಕಾರ ಬಜೆಟ್‍ನಲ್ಲಿ (Budget) ಘೋಷಿಸಿರುವ 100 ಕಿ.ಮೀ ವೈಟ್ ಟ್ಯಾಪಿಂಗ್ ರಸ್ತೆ ನಿರ್ಮಾಣ ವಿಚಾರವಾಗಿ ಮಾಜಿ ಸಿಎಂ ಹೆಚ್‍ಡಿ ಕಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ (Congress) ಸರ್ಕಾರದ ATM ಹಾಗೂ YST ಟ್ಯಾಕ್ಸ್‌ನ ಮುಂದುವರಿದ ಭಾಗ ಇದು. ಈ ಟ್ಯಾಕ್ಸ್‍ಗೆ ಅನುಕೂಲವಾಗುವಂತೆ ವೈಟ್ ಟ್ಯಾಪಿಂಗ್ ರೆಸ್ತೆ ಘೋಷಣೆ ಮಾಡಲಾಗಿದೆ. ಇದು ಇವರಿಗೆ ಬೇಕಾಗಿತ್ತಾ ಎಂದು ಪ್ರಶ್ನೆ ಎತ್ತಿದ್ದಾರೆ. ಇದನ್ನೂ ಓದಿ: ಕೋರ್ಟ್ ಆದೇಶ ಬಂದ ಬಳಿಕ ನೇಮಕಾತಿ – ಶಿಕ್ಷಕರ ಮನವೊಲಿಕೆಗೆ ಮುಂದಾದ ಮಧು ಬಂಗಾರಪ್ಪ
ನುಡಿದಂತೆ ನಡೆದಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಯಾವುದರಲ್ಲಿ ಇವರು ನುಡಿದಂತೆ ನಡೆದಿದ್ದಾರೆ? ಚುನಾವಣೆ ಪೂರ್ವದಲ್ಲಿ ಗ್ಯಾರಂಟಿ ಬಗ್ಗೆ ದೊಡ್ಡ ಜಾಹೀರಾತುಗಳನ್ನು ಕೊಟ್ಟಿದ್ದರು. ಆದರೆ ಈಗ ಅದರ ಪ್ರಕಾರ ನಡೆದುಕೊಂಡಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ಗ್ಯಾರಂಟಿಗಳನ್ನು, ಒಂದು ವರ್ಗಕ್ಕೆ ಕೊಟ್ಟು ಇನ್ನೊಂದು ವರ್ಗಕ್ಕೆ ಟೋಪಿ ಹಾಕಿದ್ದಾರೆ. ಯುವನಿಧಿ ಎಲ್ಲರಿಗೂ ಎಂದಿದ್ದರು. ಆದರೆ ಈಗ 2022-23ರ ಅವಧಿಯಲ್ಲಿ ಪಾಸ್ ಆದವರಿಗೆ ಮಾತ್ರ ಎನ್ನುತ್ತಿದ್ದಾರೆ. ಈ ವರ್ಷಕ್ಕೆ ಯುವನಿಧಿ ಯೋಜನೆ ಜಾರಿಗೆ ಬರುವುದಿಲ್ಲ. ಗೃಹಲಕ್ಷ್ಮಿ ಯೋಜನೆ ಹೇಗೆ ಕೊಡುತ್ತಾರೋ ಗೊತ್ತಿಲ್ಲ, ಹಣ ಪಡೆಯಲು ಹೊಡೆದಾಟಗಳು ನಡೆಯುತ್ತವೆಯೋ ಏನೋ ಎಂದು ವ್ಯಂಗ್ಯ ಮಾಡಿದ್ದಾರೆ.
ಕಾಂಗ್ರೆಸ್ ಹೇಳಿದ್ದೇ ಒಂದು ಮಾಡುತ್ತಿರುವುದೇ ಇನ್ನೊಂದು. ದಿನ ಪೂರ್ತಿ ಶ್ರಮಪಟ್ಟು ಕೆಲಸ ಮಾಡಿ ಸಂಜೆ ಕುಡಿಯೋ ಜನರ ಮೇಲೆ ತೆರಿಗೆ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕುಸ್ತಿಪಟುಗಳಿಗೆ ಕಿರುಕುಳ ಆರೋಪ – ಬ್ರಿಜ್ ಭೂಷಣ್‍ಗೆ ಸಮನ್ಸ್ ಜಾರಿಗೊಳಿಸಿದ ಕೋರ್ಟ್
Web Stories