ಬೆಂಗಳೂರು/ ಬಳ್ಳಾರಿ: ಸಂಡೂರು ಉಪ ಚುನಾವಣೆ (Sanduru By Election) ರಾಜಕೀಯ ಜೋರಾಗಿದೆ. ಬಿಜೆಪಿ (BJP) ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಸಂಸದ ದೇವೇಂದ್ರಪ್ಪ ಪರ ರಮೇಶ್ ಜಾರಕಿಹೊಳಿ, ಬಂಗಾರು ಹನುಮಂತು ಪರ ಜನಾರ್ದನ ರೆಡ್ಡಿ, ಕೆಎಸ್ ದಿವಾಕರ್ ಪರ ಶ್ರೀರಾಮುಲು ಲಾಬಿ ನಡೆಸಿದ್ದಾರೆ.
ಕಾಂಗ್ರೆಸ್ (Congress) ಟಿಕೆಟ್ ಹೆಚ್ಚು ಕಡಿಮೆ ಸಂಸದ ತುಕಾರಾಂ ಪತ್ನಿ ಇಲ್ಲವೇ ಪುತ್ರಿಗೆ ಸಿಗುವ ಸಾಧ್ಯತೆ ಹೆಚ್ಚಿದೆ. ಇದು ಸಂಡೂರು ಕಾಂಗ್ರೆಸ್‌ನ ಕೆಲ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಇಂದು ತೋರಣಗಲ್‌ನಲ್ಲಿ ತುಮಟಿ ಲಕ್ಷ್ಮಣ್ ಪ್ರತ್ಯೇಕ ಸಭೆ ನಡೆಸಿದ್ದಾರೆ. ಇದನ್ನೂ ಓದಿ: ನಾನೇನು ತಪ್ಪು ಮಾಡಿಲ್ಲ- ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ನಾಗೇಂದ್ರ ಕಣ್ಣೀರು
ಇತ್ತ, ವಾಲ್ಮೀಕಿ ನಿಗಮದ ಹಗರಣ ಪ್ರಸ್ತಾಪಿಸಿದ ಜನಾರ್ದನ ರೆಡ್ಡಿ (Janardhan Reddy) ಮಾಜಿ ಮಂತ್ರಿ ನಾಗೇಂದ್ರ (Nagendra) ವಿರುದ್ಧ ಹರಿಹಾಯ್ದಿದ್ದಾರೆ. ಶುಕ್ರವಾರ ಸಂಡೂರಲ್ಲಿ ಮನೆ ಮಾಡುವ ಮೂಲಕ ಮತ ಸಂಗ್ರಾಮಕ್ಕೆ ಜನಾರ್ದನ ರೆಡ್ಡಿ ಧುಮುಕಲಿದ್ದಾರೆ.
ಬಳ್ಳಾರಿಗೆ ಮಾಜಿ ಮಂತ್ರಿ ನಾಗೇಂದ್ರ ಎಂಟ್ರಿ ಕೊಟ್ಟಿದ್ದು, ಅವರಿಗೆ ಬೆಂಬಲಿಗರಿಂದ ಅದ್ಧೂರಿ ಸ್ವಾಗತ ಸಿಕ್ಕಿದೆ. ಜನಾರ್ದನ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ನಾಗೇಂದ್ರ, ಅವರು ಎಲ್ಲೇ ಮನೆ ಮಾಡಿದರೂ ಗೆಲ್ಲುವುದು ನಮ್ ಪಕ್ಷ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.