ಚಿಕ್ಕೋಡಿ: ಪೊಲೀಸರ ನಿರ್ಲಕ್ಷ್ಯಕ್ಕೆ ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ರೋಡ್ ಶೋಗಳು (Road Show) ಮುಖಾಮುಖಿಯಾಗಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿರುವ ಘಟನೆ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.
ಪೊಲೀಸರ ಕಾರ್ಯಕ್ಷಮತೆಯ ಕೊರತೆಯಿಂದ ಎರಡು ಪಕ್ಷಗಳ ರೋಡ್ ಶೋಗಳು ಒಂದೇ ರೋಡಿನಲ್ಲಿ ಎದುರಾದ ಪರಿಣಾಮ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.
Advertisement
Advertisement
ಹುಕ್ಕೇರಿ (Hukkeri) ಪಟ್ಟಣದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷದಿಂದ ಎಬಿ ಪಾಟೀಲ್ ಮೊದಲು ನಾಮಪತ್ರ ಸಲ್ಲಿಸಲು ರೋಡ್ ಶೋ ಮೂಲಕ ಆಗಮಿಸಿದ್ದರು. ನಾಮಪತ್ರ ಸಲ್ಲಿಕೆ ಬಳಿಕ ಅವರ ರೋಡ್ ಶೋ ವಾಪಸ್ ಬರುತ್ತಿರುವಾಗಲೇ ಈ ಕಡೆಯಿಂದ ಬಿಜೆಪಿ ರೋಡ್ ಶೋಗೆ ಪೊಲೀಸರು ಅವಕಾಶ ಕೊಟ್ಟರು. ಇದನ್ನೂ ಓದಿ: ಸಿದ್ದು ಕುಟುಂಬದ ಮೂರನೇ ತಲೆಮಾರು ರಾಜಕೀಯ ಫೀಲ್ಡ್‌ಗೆ ಎಂಟ್ರಿ
Advertisement
ಬಿಜೆಪಿ ಅಭ್ಯರ್ಥಿ ನಿಖಿಲ್ ಕತ್ತಿ ಹಾಗೂ ಕಾಂಗ್ರೆಸ್ ಪಕ್ಷದ ಎಬಿ ಪಾಟೀಲ್‌ರ ಎರಡು ರೋಡ್ ಶೋಗಳಲ್ಲಿ ಭಾಗವಹಿಸಿದ್ದ ಸಾವಿರಾರು ಜನರು ಮುಖಾಮುಖಿಯಾದರು. ಒಂದು ಕಡೆ ಕಾಂಗ್ರೆಸ್ ಘೋಷಣೆ ಜೋರಾದರೆ ಮತ್ತೊಂದೆಡೆ ಬಿಜೆಪಿಯವರ ಘೋಷಣೆ ಜೋರಾಗಿತ್ತು.
Advertisement
ಈ ಸಮಯದಲ್ಲಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಪೊಲೀಸರಿಗೂ ಜಗ್ಗದ ಎರಡು ಪಕ್ಷಗಳ ಕಾರ್ಯಕರ್ತರನ್ನು ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಬೇಕು ಎನ್ನುವಷ್ಟರಲ್ಲಿ ಪರಿಸ್ಥಿತಿ ತಿಳಿಗೊಂಡಿತು. ಇದನ್ನೂ ಓದಿ: ಸುಮಲತಾ ದುರಹಂಕಾರದ ಮಾತನ್ನಾಡುತ್ತಿದ್ದಾರೆ: ಹೆಚ್‌ಡಿಕೆ ವಾಗ್ದಾಳಿ