ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಈಗ ಮೂರು ಪಕ್ಷ, 3 ದಿನ, 3 ಪ್ಲಾನ್ ನಡೀತಾ ಇದೆ. ದೋಸ್ತಿ ಸರ್ಕಾರ ವಿಶ್ವಾಸಮತದ ವಿಶ್ವಾಸದಲ್ಲಿರುವ ಕಾರಣ ಬಿಜೆಪಿ ಶಾಕ್‍ಗೆ ಒಳಗಾಗಿ ರಿವರ್ಸ್ ಆಪರೇಷನ್ ಭಯದಿಂದ ರೆಸಾರ್ಟ್ ರಾಜಕಾರಣದ ಮೊರೆ ಹೋಗಿದೆ. ಇತ್ತ ದೋಸ್ತಿಗಳು ಕೂಡ ಮತ್ತೆ ಯಾವ ಶಾಸಕರು ಕೈಕೊಡಬಾರದೆನ್ನುವ ಉದ್ದೇಶದಿಂದ ತಮ್ಮ ತಮ್ಮ ಶಾಸಕರನ್ನು ರೆಸಾರ್ಟ್, ಹೋಟೆಲ್‍ಗಳಲ್ಲಿ ಇರಿಸಿದ್ದಾರೆ. ರೆಸಾರ್ಟ್ ರಾಜಕಾರಣದ ಮೊರೆ ಹೋಗಿರುವ ಮೂರು ಪಕ್ಷಗಳ ಅಸಲಿ ಆಟದ ಸ್ಟೋರಿ ಇಲ್ಲಿದೆ.
Advertisement
ಜೆಡಿಎಸ್ ಪ್ಲಾನ್ ಏನು?
ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮೂವರನ್ನು ಗಣನೆಗೆ ತೆಗೆದುಕೊಳ್ಳದಿರುವುದು. ಅಷ್ಟೇ ಅಲ್ಲದೆ ಈ ಮೂವರನ್ನು ಬಿಟ್ಟು ಉಳಿದವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವುದು. ಅಂದರೆ ಉಳಿದವರು ರಾಜೀನಾಮೆ ಕೊಡದಿರುವಂತೆ ಅವರ ವಿಶ್ವಾಸವನ್ನು ಪಡೆದುಕೊಳ್ಳುವುದಾಗಿದೆ. ಕಾಂಗ್ರೆಸ್ಸಿಗೆ ಗುಟ್ಟು ಬಿಟ್ಟು ಕೊಡದೆ ರಿವರ್ಸ್ ಆಪರೇಷನ್‍ಗೆ ಕೈ ಹಾಕುವುದು. ಹಾಗೂ ಕಾಂಗ್ರೆಸ್ ಹೊರಗಿಟ್ಟು ಸ್ವತಃ ಜೆಡಿಎಸ್ ಅವರೇ ಅತೃಪ್ತ ಕಾಂಗ್ರೆಸ್ಸಿನ ಇಬ್ಬರು ಶಾಸಕರನ್ನ ಮನವೊಲಿಸುವ ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಕಾಂಗ್ರೆಸ್ ಪ್ಲಾನ್ ಏನು?:
ರಾಮಲಿಂಗಾ ರೆಡ್ಡಿ, ರೋಷನ್ ಬೇಗ್ ಜೊತೆ ಚರ್ಚೆ ಮಾಡಿದ ಬಳಿಕ ವಿಶ್ವಾಸ ಹೆಚ್ಚಿದೆ. ಹೀಗಾಗಿ ರಾಮಲಿಂಗಾ ರೆಡ್ಡಿ, ರೋಷನ್ ಬೇಗ್ ಇಬ್ಬರು ಹೈಕಮಾಂಡ್‍ಗೆ ಆಪ್ತರಾಗಿರುವುದರಿಂದ ಅವರ ಮನವೊಲಿಕೆ ಹೈಕಮಾಂಡ್‍ಗೆ ಬಿಡುವುದು. ಈ ಇಬ್ಬರ ಮೂಲಕ ನಾಲ್ವರು ಅತೃಪ್ತರ ಮನವೊಲಿಕೆ ಮಾಡಿಸುವ ಪ್ಲಾನ್ ಮಾಡಿದೆ. ಎಸ್‍ಬಿಎಂ ಟೀಂ ಅಂದರೆ ಬೈರತಿ ಬಸವರಾಜು, ಮುನಿರತ್ನ, ಎಸ್.ಟಿ ಸೋಮಶೇಖರ್, ಸುಧಾಕರ್, ಎಂಟಿಬಿ ನಾಗರಾಜ್ ಮನವೊಲಿಕೆಯನ್ನ ಸಿದ್ದರಾಮಯ್ಯಗೆ ವಹಿಸುವುದು.
Advertisement
ಇವರೆಲ್ಲರೂ ಸಿದ್ದರಾಮಯ್ಯ ಅವರ ಆಪ್ತರಾಗಿದ್ದು, ಅವರ ಮಾತಿಗೆ ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಹೀಗಾಗಿ ಇವರ ಮನವೊಲಿಕೆಯ ಜವಬ್ದಾರಿಯನ್ನು ಸಿದ್ದರಾಮಯ್ಯ ಅವರಿಗೆ ವಹಿಸುವುದಾಗಿದೆ. ಇತ್ತ ಅಸಮಾಧಾನಗೊಂಡಿರುವ ಮತ್ತು ಆಪರೇಷನ್ ಲಿಸ್ಟ್‍ನಲ್ಲಿ ಬಾಕಿ ಉಳಿದಿರುವ ಶಾಸಕರನ್ನ ಮನವೊಲಿಸುವುದು ಕಾಂಗ್ರೆಸ್ ಪ್ಲಾನ್ ಆಗಿದೆ ಎನ್ನಲಾಗಿದೆ.
ಬಿಜೆಪಿ ಪ್ಲಾನ್ ಏನು?:
ಬಿಜೆಪಿ ಅವರು ಸುಪ್ರೀಂಕೋರ್ಟ್ ತೀರ್ಪನ್ನು ಕಾದು ನೋಡುವುದು. ಸುಪ್ರೀಂ ಕೋರ್ಟ್ ಶುಕ್ರವಾರ ಯಾವುದೇ ತೀರ್ಪನ್ನು ಕೊಡದೆ ಎಲ್ಲವನ್ನು ಯಥಾಸ್ಥಿಯಲ್ಲಿ ಇರುವಂತೆ ಸೂಚಿಸಿದೆ. ಹೀಗಾಗಿ ಕೋರ್ಟ್ ತೀರ್ಪು ಬರುವವರೆಗೂ ಬಿಜೆಪಿ ಅವರು ಕಾಯಬೇಕಾಗಿದೆ. ಬಿಜೆಪಿ ಶಾಸಕರನ್ನ ಕಾವಲಿನಲ್ಲಿಡುವುದು. ಅಂದರೆ ರೆಸಾರ್ಟ್ ರಾಜಕಾರಣ ಮುಂದುವರಿಕೆ ಮಾಡುವುದಾಗಿದೆ. ಅತೃಪ್ತ ಶಾಸಕರನ್ನ ಮುಂಬೈನಲ್ಲಿಯೇ ಇರುವಂತೆ ನೋಡಿಕೊಳ್ಳುವುದು. ಅವರಿಗೆ ಎಲ್ಲಾ ರೀತಿ ಸೌಲಭ್ಯವನ್ನು ಕೊಟ್ಟು ಚೆನ್ನಾಗಿ ನೋಡಿಕೊಳ್ಳುವುದಾಗಿದೆ.
ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ ರಕ್ಷಣೆ ಕೊಡುವುದನ್ನು ಮುಂದುವರಿಸುವುದು. ಈಗಾಗಲೇ ಡಿ.ಕೆ ಶಿವಕುಮಾರ್ ಅತೃಪ್ತ ಶಾಸಕರನ್ನು ಮನವೊಲಿಸಿ ಕರೆದುಕೊಂಡು ಬರುವ ವಿಶ್ವಾಸದಿಂದ ಮುಂಬೈಗೆ ಹೋಗಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಹೀಗಾಗಿ ಮತ್ತೆ ಆ ರೀತಿಯ ಘಟನೆ ನಡೆಯದಂತೆ ರಕ್ಷಣೆ ಕೊಟ್ಟು ನೋಡಿಕೊಳ್ಳುವುದಾಗಿದೆ.ಸೋಮವಾರ ವಿಧಾನಸಭೆಯಲ್ಲಿ ಸಿಎಂ ವಿಶ್ವಾಸಮತ ಯಾಚನೆ ಹೇಳಿಕೆ ಬಗ್ಗೆ ಸ್ಪಷ್ಟನೆ ಕೇಳುವುದು ಮತ್ತು ವಿಶ್ವಾಸ ಮತಯಾಚನೆ ಖಾತ್ರಿಪಡಿಸಿಕೊಳ್ಳುವುದು ಬಿಜೆಪಿಯವರ ಪ್ಲಾನ್ ಆಗಿದೆ ಎಂಬುದಾಗಿ ತಿಳಿದುಬಂದಿದೆ.