ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮತ್ತೊಂದು ರಾಜಕೀಯ ಫೈಟ್ ನಡೆಯುತ್ತಿದೆ. ಪರಶುರಾಮ ಮೂರ್ತಿಯ (Parashurama Statue) ಹೆಸರಿನಲ್ಲಿ ಕಾಂಗ್ರೆಸ್-ಬಿಜೆಪಿ ಜಟಾಪಟಿ ನಡೆಸುತ್ತಿದೆ.
ಕಾರ್ಕಳ ತಾಲೂಕಿನ ಪರಶುರಾಮ ಥೀಂ ಪಾರ್ಕ್ ಒಟ್ಟು 14 ಕೋಟಿ ರೂಪಾಯಿಯ ಪ್ರಾಜೆಕ್ಟ್. ಸರ್ಕಾರದಿಂದ ಬಿಡುಗಡೆಯಾಗಿರುವುದು ಸುಮಾರು ಆರು ಕೋಟಿ ಚಿಲ್ಲರೆ. ಚುನಾವಣೆಯ ತರಾತುರಿಯಲ್ಲಿ ಬಿಜೆಪಿ (BJP) ಕಂಚು ಮತ್ತು ಫೈಬರ್ ಮಿಶ್ರಿತ ಮೂರ್ತಿಸ್ಥಾಪನೆ ಮಾಡಿ ಯೋಜನೆಯನ್ನು ಉದ್ಘಾಟಿಸಿತು. ಬಾಕಿ ಉಳಿದ ಕಾಮಗಾರಿಗೆ ಚಾಲನೆ ಸಿಗುತ್ತಿದ್ದಂತೆ ಕಾಂಗ್ರೆಸ್ (Congress) ಬಿಜೆಪಿ ನಡುವೆ ದೊಡ್ಡ ಜಟಾಪಟಿ ನಡೆಯುತ್ತಿದೆ.
Advertisement
Advertisement
ಕಳೆದ ಎರಡು ತಿಂಗಳಿನಿಂದ ಈಚೆಗೆ ಈ ವಿಚಾರ ಸಾಮಾಜಿಕ ಜಾಲತಾಣ ಮತ್ತು ಬಹಿರಂಗವಾಗಿ ಚರ್ಚೆಯನ್ನು ಹುಟ್ಟು ಹಾಕಿದೆ. ಕಾಂಗ್ರೆಸ್ ಮೂರ್ತಿಯ ಸತ್ಯತೆಯ ಬಯಲಿಗೆ ಇಳಿದಿತ್ತು. ಇಷ್ಟಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಮೂರ್ತಿಯ ರಿಯಾಲಿಟಿ ಚೆಕ್ ಮಾಡಲು ಹೊರಟಿದ್ದಾರೆ. ಸುತ್ತಿಗೆಗಳ ಜೊತೆ ಬೆಟ್ಟ ಹತ್ತಿ ಕಂಚಿನ ಮೂರ್ತಿ ಎಂದು ಮನದಟ್ಟು ಮಾಡಲು ಸುತ್ತಿಗೆಯಿಂದ ಪರಶುರಾಮ ದೇವರ ಕಾಲಿಗೆ ಮನಬಂದಂತೆ ಬಡಿದಿದ್ದಾರೆ. ಕಾಂಗ್ರೆಸ್ ಮೇಲಿನ ಕೋಪವನ್ನು ಮೂರ್ತಿ ಮೇಲೆ ತೋರಿಸಿದ್ದಾರೆ.
Advertisement
ಈ ಮೂಲಕ ಸರ್ಕಾರದ ಸ್ವತ್ತು ನಾಶದ ಜೊತೆ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ದಿವ್ಯಾ ನಾಯಕ್ ದೂರು ನೀಡಿದ್ದು, ಕಾರ್ಕಳ ನಗರ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದನ್ನೂ ಓದಿ: ಸಿಡಿಮದ್ದು ತಾಲೀಮು ವೇಳೆ ಅವಘಡ- ವ್ಯಕ್ತಿ ಆಸ್ಪತ್ರೆಗೆ ದಾಖಲು
Advertisement
ಪರಶುರಾಮ ಮೂರ್ತಿಯ ವಿನ್ಯಾಸ ಬದಲಿಸುವ ಸ್ಪಷ್ಟನೆಯನ್ನು ಬಿಜೆಪಿ, ನಿರ್ಮಿತಿ ಕೇಂದ್ರ ನೀಡಿದೆ. ಸರ್ಕಾರದಿಂದ ಬರಬೇಕಾದ ಬಾಕಿ ಏಳು ಕೋಟಿ ರೂಪಾಯಿ ಬಿಡುಗಡೆಯಾದರೆ ಥೀಂ ಪಾರ್ಕ್ ಕೆಲಸ ಕಂಪ್ಲೀಟಾಗಿ ಬೈಲೂರು ಸುಂದರ ಪ್ರವಾಸೋಧ್ಯಮ ಕೇಂದ್ರವಾಗುತ್ತದೆ. ಕೆಟ್ಟ ರಾಜಕೀಯ ಮುಂದುವರೆದರೆ ಜನರ ತೆರಿಗೆ ದುಡ್ಡು ನೀರಲ್ಲಿಟ್ಟ ಹೋಮವಾಗುತ್ತದೆ.
Web Stories