ನವದೆಹಲಿ: ವಾಟ್ಸಪ್ ಸ್ನೂಪಿಂಗ್‌ನ ರಾಜಕೀಯ ವಿವಾದ ತೀವ್ರಗೊಂಡಿದ್ದು, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ವಿರೋಧ ಪಕ್ಷದ ಮೂವರು ನಾಯಕರ ಫೋನ್‌ಗಳನ್ನು ಸರ್ಕಾರ ಹ್ಯಾಕ್ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಶುಕ್ರವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೇ ರೀತಿ ಆರೋಪ ಮಾಡಿದ್ದರು. ನಂತರ ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್ ಅವರ ಫೋನ್ ಸಹ ಹ್ಯಾಕ್ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದರು.
Advertisement
ಫೋನ್ ಹ್ಯಾಕ್ ಮಾಡಿದ ಎಲ್ಲರಿಗೂ ವಾಟ್ಸಪ್ ಸಂದೇಶ ಕಳುಹಿಸಿದ್ದು, ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಸಹ ಸಂದೇಶ ಸ್ವೀಕರಿಸಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ರಣದೀಪ್ ಸುರ್ಜೆವಾಲಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
Advertisement
Randeep Surjewala, Congress: When WhatsApp sent messages to all those whose phones were hacked, one such message was also received by Priyanka Gandhi Vadra. pic.twitter.com/yIulj78GeY
— ANI (@ANI) November 3, 2019
Advertisement
ಸಂದೇಶ ಬಂದಿದ್ದು ನಿಜ, ನಾವು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಅದನ್ನು ಡಿಲೀಟ್ ಮಾಡಿದೆವು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ತಂಡ ಹೇಳಿಕೊಂಡಿದೆ. ಉದ್ದೇಶಿತ ಬಳಕೆದಾರರಿಂದ ಸ್ವೀಕರಿಸಿದ ವಾಟ್ಸಪ್‌ನಿಂದ ಸುರ್ಜೆವಾಲಾ ಅವರು ಸಂದೇಶವನ್ನು ಫಾರ್ವರ್ಡ್ ಮಾಡಿದಾಗ ಮಾತ್ರ ಅಂತಹ ಸಂದೇಶ ಸ್ವೀಕರಿಸಿದ್ದನ್ನು ನೆನಪಿಸಿಕಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
ಕಳೆದ ವಾರ ವಾಟ್ಸಪ್ ಮೂಲ ಕಂಪನಿಯಾಗಿರುವ ಫೇಸ್‌ಬುಕ್, ಇಸ್ರೇಲಿ ಸೈಬರ್ ಸೆಕ್ಯುರಿಟಿ ಕಂಪನಿ ಎನ್‌ಎಸ್‌ಒ ಸ್ಪೈವೇರ್ ಪೆಗಾಸಸ್ ಹರಡಲು ವಾಟ್ಸಪ್ ಸರ್ವರ್‌ಗಳನ್ನು ಬಳಸಿದೆ ಎಂದು ಆರೋಪಿಸಿತ್ತು.
ಸ್ಪೈವೇರ್ ಮೂಲಕ ಇಸ್ರೇಲ್ ರಾಷ್ಟ್ರೀಯ ಚುನಾವಣೆ ನಡೆಯುವುದಕ್ಕೂ ಮೊದಲು ಬೇಹುಗಾರಿಕೆ ನಡೆಸಲಾಗಿತ್ತು. ಸುಮಾರು 20 ರಾಷ್ಟ್ರಗಳಲ್ಲಿ 1,400 ಬಳಕೆದಾರರನ್ನು ಗುರಿಯಾಗಿಸಿಕೊಂಡವರಲ್ಲಿ 121 ಭಾರತೀಯ ಪತ್ರಕರ್ತರು, ಕಾರ್ಯಕರ್ತರು, ವಕೀಲರು ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳು ಇದ್ದರು.
ಫೇಸ್‌ಬುಕ್ ಎನ್‌ಎಸ್‌ಒ ವಿರುದ್ಧ ಮೊಕದ್ದಮೆ ಹೂಡಿದೆ. ಅದು ತನ್ನ ಉತ್ಪನ್ನಗಳ ಪರಿಶೀಲನೆ ಮತ್ತು ಕಾನೂನುಬದ್ಧ ಸರ್ಕಾರಿ ಸಂಸ್ಥೆಗಳಿಗೆ ಮಾತ್ರ ಪರವಾನಗಿ ನೀಡಿದೆ ಎಂದು ಫೇಸ್‌ಬುಕ್ ತಿಳಿಸಿದೆ.
ಬಿಜೆಪಿ ಸರ್ಕಾರದ ಕೃತ್ಯವನ್ನು ಬಹಿರಂಗಪಡಿಸಲಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಬಿಜೆಪಿಯನ್ನು ಭಾರತೀಯ ಜಾಸೂಸ್ ಪಾರ್ಟಿ ಎಂದು ಕರೆದ ಸುರ್ಜೆವಾಲಾ, ಈ ಬಗ್ಗೆ ಸರ್ಕಾರ ಯಾಕೆ ಮೌನವಾಗಿದೆ ಎಂದು ಪ್ರಶ್ನಿಸಿದರು.
ಸೆಪ್ಟೆಂಬರ್ 12ರಂದು ಐಟಿ ಸಚಿವರು ಫೇಸ್‌ಬುಕ್ ಉಪಾಧ್ಯಕ್ಷರನ್ನು ಭೇಟಿಯಾಗಿದ್ದು, ಹ್ಯಾಕಿಂಗ್ ಕುರಿತು ಚರ್ಚಿಸಿಲ್ಲ. ನಿಗೂಢ ಮೌನ ವಹಿಸಿದ್ದರು. ಸರ್ಕಾರ ಈ ಕುರಿತು ಸುಳ್ಳು ಹೇಳಿದೆ ಎಂದ ಅವರು, ಮೇ ತಿಂಗಳಲ್ಲಿ ವಾಟ್ಸಪ್ ಈ ಕುರಿತು ಸರ್ಕಾರವನ್ನು ಎಚ್ಚರಿಸಿದೆ. ಆದರೆ ಅಕ್ಟೋಬರ್ 31ರಂದು ಈ ಕುರಿತು ಗಮನಕ್ಕೆ ಬಂದಿದೆ ಎಂಬ ಸರ್ಕಾರದ ಹೇಳಿಕೆ ನಿಜವಲ್ಲ ಎಂದು ಸುರ್ಜೆವಾಲಾ ಆರೋಪಿಸಿದ್ದಾರೆ.
ಇನ್ನೂ ಆತಂಕಕಾರಿ ಸಂಗತಿಯೆದರೆ ಸ್ಪೈವೇರ್ ಸೋಂಕಿನ ವ್ಯಾಪ್ತಿ, ಆಸಕ್ತಿದಾಯಕ ಪಟ್ಟಿಯನ್ನು ಹೊಂದಿದೆ. ಭಾರ್ತಿ ಏರ್‌ಟೆಲ್, ಆಟ್ರಿಯಾ ಕನ್ವರ್ಜೆನ್ಸ್, ಹಾಥ್ ವೇ ಕೇಬಲ್ ಇಂಟರ್ನೆಟ್, ಸ್ಟಾರ್ ಬ್ರಾಡ್‌ಬ್ಯಾಂಡ್ ಸೇವೆಗಳು ಹಾಗೂ ಸರ್ಕಾರಿ ಸ್ವಾಮ್ಯದ ಎಂಟಿಎನ್‌ಎಲ್ ಸೇರಿದಂತೆ ಹಲವು ಪೂರೈಕೆದಾರರ ಹೆಸರನ್ನು ಸುರ್ಜೆವಾಲಾ ಉಲ್ಲೇಖಿಸಿದ್ದಾರೆ. ಅಲ್ಲದೆ ರಾಷ್ಟ್ರೀಯ ಇಂಟರ್ನೆಟ್ ಬೆನ್ನೆಲುಬಿಗೂ ಈ ಸೋಂಕು ತಗುಲಿತ್ತು ಎಂದರು.