ಫ್ರೀ ಕರೆಂಟ್, ಮಹಿಳೆಯರಿಗೆ ತಿಂಗಳಿಗೆ 2,500 ರೂ., ಉಚಿತ ಬಸ್ ಪ್ರಯಾಣ: ತೆಲಂಗಾಣದಲ್ಲೂ ಕಾಂಗ್ರೆಸ್ ಗ್ಯಾರಂಟಿ ಘೋಷಣೆ

Public TV
1 Min Read
telangana congress guarantee

ಹೈದರಾಬಾದ್: ತೆಲಂಗಾಣದಲ್ಲಿ (Telangana) ಈ ಬಾರಿ ಅಧಿಕಾರಕ್ಕೆ ಬರಲೇಬೇಕು ಅಂತ ಶಪಥ ತೊಟ್ಟಿರುವ ಕಾಂಗ್ರೆಸ್, ಕರ್ನಾಟಕ ಮಾದರಿ ಗ್ಯಾರಂಟಿ (Congress Guarantee) ಬ್ರಹ್ಮಾಸ್ತ್ರ ಪ್ರಯೋಗಿಸಿದೆ.

ತೆಲಂಗಾಣದಲ್ಲೂ ಕಾಂಗ್ರೆಸ್ ಸರ್ಕಾರ ನೋಡುವುದು ನನ್ನ ಕನಸು ಎಂದಿರುವ ಸೋನಿಯಾ ಗಾಂಧಿ (Sonia Gandhi), 6 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಮಹಾಲಕ್ಷ್ಮಿ ಹೆಸರಿನಲ್ಲಿ ಮಹಿಳೆಯರಿಗೆ 2,500 ಹಾಗೂ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್, ಮಹಿಳೆಯರಿಗೆ ಫ್ರೀ ಬಸ್, ಕ್ವಿಂಟಾಲ್ ಭತಕ್ಕೆ 500 ಬೋನಸ್, 200 ಯೂನಿಟ್ ಫ್ರೀ ಕರೆಂಟ್, ಮನೆ ಇಲ್ಲದವರಿಗೆ ಇಂದಿರಮ್ಮ ಗೃಹ ಯೋಜನೆ ಸೇರಿದಂತೆ ಹಲವು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ರಜೆಯಲ್ಲಿದ್ದ ಯೋಧನ ಮನೆಗೆ ನುಗ್ಗಿ ಕಿಡ್ನ್ಯಾಪ್‌ ಮಾಡಿ ಹತ್ಯೆ

Karnataka Budget 2023 4 pre poll congress guarantee schemes to cost 57910 crore CM Siddaramaiah

ತುಕ್ಕುಗೂಡದ ‘ವಿಜಯಭೇರಿ’ ಸಾರ್ವಜನಿಕ ಸಭೆಯಲ್ಲಿ ಭಾನುವಾರ ತೆಲಂಗಾಣಕ್ಕೆ ಆರು ಗ್ಯಾರಂಟಿಗಳನ್ನು ಸೋನಿಯಾ ಗಾಂಧಿ ಘೋಷಿಸಿದ್ದಾರೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ, ತಕ್ಷಣ ಯೋಜನೆಗಳು ಜಾರಿಯಾಗಲಿವೆ ಎಂದು ಭರವಸೆ ನೀಡಿದ್ದಾರೆ.

ತೆಲಂಗಾಣ ವಿಧಾನಸಭೆಯ 119 ಸ್ಥಾನಗಳಿಗೆ ಡಿಸೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ಕರ್ನಾಟಕ ಚುನಾವಣೆ ಸಂದರ್ಭದಲ್ಲೂ ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ರಾಜ್ಯದಲ್ಲಿ ಗೆಲುವಿಗೆ ಕಾರಣವಾಗಿದ್ದ ಗ್ಯಾರಂಟಿಗಳ ಸೂತ್ರವನ್ನು ತೆಲಂಗಾಣದಲ್ಲೂ ಜಾರಿಗೊಳಿಸಲು ಕಾಂಗ್ರೆಸ್ ಮುಂದಾಗಿದೆ. ಇದನ್ನೂ ಓದಿ: ಜನ್ಮದಿನದಂದು ದೆಹಲಿಯಲ್ಲಿ ಮೋದಿ ಮೆಟ್ರೋ ರೈಡ್ – ಪ್ರಯಾಣಿಕರೊಂದಿಗೆ ಸೆಲ್ಫಿ

Web Stories

Share This Article