ನಿಮ್ಮ ಜಿಲ್ಲೆಯಲ್ಲಿ ಯಾರಿಗೆ ಸಚಿವ ಸ್ಥಾನ? – 24 ಮಂದಿ ಮಂತ್ರಿಗಳ ಪಟ್ಟಿ ರಿಲೀಸ್‌

Public TV
2 Min Read
congress flag

ನವದೆಹಲಿ: ಸಿದ್ದರಾಮಯ್ಯ ಸರ್ಕಾರ ಸಚಿವ ಸಂಪುಟ ವಿಸ್ತರಣೆ (Cabinet Expansion) ಕಸರತ್ತು ಅಂತ್ಯವಾಗಿದೆ. ಕಳೆದ 3 ದಿನಗಳಿಂದ ದೆಹಲಿಯಲ್ಲಿ ಠಿಕಾಣಿ ಹಾಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಹೈಕಮಾಂಡ್ ನಾಯಕರ ಜೊತೆಗೆ ಸರಣಿ ಸಭೆ ನಡೆಸಿ ಅಂತಿಮವಾಗಿ ಪಟ್ಟಿ ಸಿದ್ಧಪಡಿಸಿದ್ದಾರೆ.

ಹಿರಿಯ ನಾಯಕರನ್ನು ಸಂಪುಟದಿಂದ ಕೈ ಬಿಡುವುದು, ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡುವುದು ಸೇರಿ ಕೆಲವು ಸಮಸ್ಯೆಗಳ ಬಗ್ಗೆ ವೇಣುಗೋಪಾಲ್, ಸುರ್ಜೇವಾಲ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗಿದೆ. ಈ ನಿರ್ಣಯದಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆ (Mallikarjun Kharge) ಅವರ ಕೆಲವು ಸಲಹೆಗಳನ್ನು ಪರಿಗಣಿಸಲಾಗಿದೆ. ಮಹತ್ವದ ಸಭೆಗಳ ನಡುವೆ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಇಂದು ಪ್ರತ್ಯೇಕವಾಗಿ ಸೋನಿಯಾಗಾಂಧಿ (Sonia Gandhi) ಮತ್ತು ರಾಹುಲ್ ಗಾಂಧಿ (Rahul Gandhi) ಅವರನ್ನು ಭೇಟಿಯಾಗಿದೆ ಚರ್ಚೆ ನಡೆಸಿದರು.

ಹೊಸ ಸರ್ಕಾರಕ್ಕೆ ಶುಭಾಶಯ ಕೋರಿದ ಸೋನಿಯಾಗಾಂಧಿ ಉತ್ತಮ ಆಡಳಿತ ನೀಡುವಂತೆ ಸೂಚಿಸಿದ್ದಾರೆ. ಒಟ್ಟಾರೆ ಎಲ್ಲ ಬೆಳವಣಿಗೆ ಬಳಿಕ 23 ಹೆಸರುಗಳನ್ನು ಅಂತಿಮಗೊಳಿಸಿದ್ದು ನಾಳೆ ಬೆಳಗ್ಗೆ 11:45 ಕ್ಕೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 23 ಜನರಿಗೆ ಈಗಾಗಲೇ ದೂರವಾಣಿ ಕರೆ ಮೂಲಕ ಮಾಹಿತಿ ಕೊಡಲಾಗಿದೆ.

ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವವರು: ಶಿವಾನಂದ ಪಾಟೀಲ್ – ಲಿಂಗಾಯತ ( ಬಸವನಬಾಗೇವಾಡಿ), ಎಸ್‍ಎಸ್ ಮಲ್ಲಿಕಾರ್ಜುನ್- ಲಿಂಗಾಯತ (ದಾವಣಗೆರೆ ಉತ್ತರ), ಹೆಚ್.ಕೆ.ಪಾಟೀಲ್ – ರೆಡ್ಡಿ ಲಿಂಗಾಯತ (ಗದಗ), ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ – ಒಕ್ಕಲಿಗ (ಬ್ಯಾಟರಾಯನಪುರ), ಚಲುವರಾಯ ಸ್ವಾಮಿ -ಒಕ್ಕಲಿಗ (ನಾಗಮಂಗಲ), ಕೆ. ವೆಂಕಟೇಶ್- ಒಕ್ಕಲಿಗ (ಪಿರಿಯಾಪಟ್ಟಣ), ಎಚ್.ಸಿ ಮಹದೇವಪ್ಪ – ಎಸ್‍ಸಿ -ಬಲಗೈ (ಟಿ.ನರಸೀಪುರ), ಈಶ್ವರ್ ಖಂಡ್ರೆ – ಲಿಂಗಾಯತ (ಭಾಲ್ಕಿ), ಕೆ.ಎನ್ ರಾಜಣ್ಣ- ಎಸ್‍ಟಿ (ಮಧುಗಿರಿ), ಶರಣ ಬಸಪ್ಪ ದರ್ಶನಾಪೂರ್, ಆರ್. ಬಿ ತಿಮ್ಮಾಪೂರ್, ಶಿವರಾಜ್ ತಂಗಡಗಿ, ಶರಣ ಪ್ರಕಾಶ್ ಪಾಟೀಲ್- ಲಿಂಗಾಯತ (ಸೇಡಂ), ಮಂಕಾಳ ವೈದ್ಯ – ಮೊಗವೀರ ( ಭಟ್ಕಳ), ಲಕ್ಷ್ಮಿ ಹೆಬ್ಬಾಳ್ಕರ್- ಲಿಂಗಾಯತ (ಬೆಳಗಾವಿ ಗ್ರಾ.), ರಹೀಂ ಖಾನ್ – ಮುಸ್ಲಿಂ (ಬೀದರ್ ಉತ್ತರ), ಎಂ.ಸಿ ಸುಧಾಕರ್ – ಒಕ್ಕಲಿಗ (ಚಿಂತಾಮಣಿ), ಡಿ ಸುಧಾಕರ್, ಸಂತೋಷ್ ಲಾಡ್ -ಮರಾಠ (ಕಲಘಟಗಿ), ಬೋಸರಾಜು – ಕ್ಷತ್ರೀಯ (ಮಾಜಿ ಎಂಎಲ್‍ಸಿ), ಬೈರತಿ ಸುರೇಶ್ – ಕುರುಬ (ಹೆಬ್ಬಾಳ), ಮಧು ಬಂಗಾರಪ್ಪ- ಈಡಿಗ (ಸೊರಬ) ಹಾಗೂ ಬಿ. ನಾಗೇಂದ್ರ.

Share This Article