ಕೋಲಾರ: 2013ರ ವಿಧಾನಸಭಾ ಚುನಾವಣೆ ವೇಳೆ ಮತಗಟ್ಟೆ ಬಳಿ ಕೋಲಾರ ನಗರದಲ್ಲಿ ಲಾಂಗು ಮಚ್ಚು ಪ್ರದರ್ಶಿಸಿದ ಪ್ರಕರಣವನ್ನ ಖುಲಾಸೆಗೊಳಿಸಿ 1ನೇ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
2013ರ ಮೇ 5ರಂದು ವಿಧಾನಸಭಾ ಚುನಾವಣೆ ವೇಳೆ ಕೋಲಾರದ ಜೂನಿಯರ್ ಕಾಲೇಜು ಮತಗಟ್ಟೆ ಬಳಿ ಕಾಂಗ್ರೆಸ್ ಮತ್ತು ವರ್ತೂರ್ ಪ್ರಕಾಶ್ ಬೆಂಬಲಿಗರಿಂದ ಲಾಂಗು, ಮಚ್ಚು ಪ್ರದರ್ಶನ ನಡೆದಿತ್ತು. ಈ ವೇಳೆ ನಗರಸಭಾ ಸದಸ್ಯ ಪ್ರಸಾದ್ ಬಾಬು ಸೇರಿದಂತೆ ಐದು ಜನರ ವಿರುದ್ಧ ಅಂದಿನ ನಗರಠಾಣೆ ಇನ್ಸ್ ಪೆಕ್ಟರ್ ಜಗದೀಶ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ರು.
Advertisement
ಪ್ರಕರಣವನ್ನ ಕೈಗೆತ್ತಿಕೊಂಡ ಕೋಲಾರದ 1ನೇ ಜಿಲ್ಲಾ ಸತ್ರ ಮತ್ತು ಹೆಚ್ಚುವರಿ ನ್ಯಾಯಾಲಯದ ಎದುರು ಸಾಕ್ಷ್ಯಾಧಾರಗಳನ್ನ ಸಾಬೀತುಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಕೇಸ್ ಖುಲಾಸೆಗೊಳಿಸಿದೆ. ಅಂದು ಯಾವುದೇ ಗಲಾಟೆ ನಡೆದಿಲ್ಲ. ಅದೊಂದು ರಾಜಕೀಯ ಪ್ರೇರಿತ ಗಲಾಟೆ ಎಂದು ಆರೋಪಿತರ ಪರ ಹಿರಿಯ ವಕೀಲ ಮೊಹಮ್ಮದ್ ಹನೀಫ್ ಅವರು ವಾದ ಮಂಡಿಸಿದರು.
Advertisement
ಪೊಲೀಸರು, ಪ್ರತ್ಯಕ್ಷದರ್ಶಿಗಳು ಸೇರಿದಂತೆ 16 ಸಾಕ್ಷ್ಯಾಧಾರವನ್ನ ಪರಿಗಣಿಸಿದ ನ್ಯಾಯಾಧೀಶ ಎನ್‍ವಿ ವಿಜಯ್ ಅವರು ಮೂರು ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನಲೆಯಲ್ಲಿ ಪ್ರಕರಣವನ್ನ ಖುಲಾಸೆಗೊಳಿಸಿದ್ದಾರೆ.