ಲಕ್ನೋ: ದೇಶ ವಿಭಜನೆ ಮುಸ್ಲಿಮರಿಂದ ಅಲ್ಲ, ಬದಲಿಗೆ ಮೊಹಮ್ಮದ್ ಜಿನ್ನಾ ಅವರಿಂದ ಆಗಿದೆ. ದೇಶ ವಿಭಜನೆಗೆ ಅಲ್ಲಿನ ಕಾಂಗ್ರೆಸ್ ಹಾಗೂ ಆ ಸಮಯದಲ್ಲಿದ್ದ ನಾಯಕರೇ ಕಾರಣರಾಗಿದ್ದಾರೆ ಎಂದು ಎಂಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಸುಹೇಲ್‍ದೇವ್ ಹೇಳಿಕೆಗೆ ಮೊರದಬಾದ್‍ನಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡುತ್ತಾ ಓವೈಸಿ ಟೀಕೆ ವ್ಯಕ್ತಪಡಿಸಿದ್ದಾರೆ. ಇತಿಹಾಸವನ್ನು ಓದದ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಭಾರತೀಯ ಜನತಾ ಪಕ್ಷ ಮತ್ತು ಸಮಾಜವಾದಿ ಪಕ್ಷದವರಿಗೆ ನಾನು ಸವಾಲು ಹಾಕುತ್ತೇನೆ.
ಮುಸ್ಲಿಮರಿಂದ ಅಲ್ಲ ಜಿನ್ನಾ ಅವರಿಂದಾಗಿ ದೇಶ ವಿಭಜನೆ ಆಗಿದೆ. ಆ ಸಮಯದಲ್ಲಿ ಕೇವಲ ಮುಸ್ಲಿಮರು ಹಾಗೂ ನವಾಬರು ಮಾತ್ರವೇ ಜಿನ್ನಾ ಅವರಿಗೆ ಮತವನ್ನು ನೀಡಬಹುದಿತ್ತು. ಆ ಸಮಯದಲ್ಲಿ ಗೆದ್ದ ಕಾಂಗ್ರೆಸ್ ನಾಯಕರೇ ವಿಭಜನೆಗೆ ಕಾರಣರಾಗಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೇಂಟಿಂಗ್ ಕೆಲಸಕ್ಕೆ ಬಂದು ಬೀಗ ಹಾಕಿದ ಮನೆಗಳಲ್ಲಿ ಕಳ್ಳತನ- ಖತರ್ನಾಕ್ ಕಳ್ಳ ಅಂದರ್!
ಸುಹೇಲ್‍ದೇವ್ ಹೇಳಿದ್ದೇನು..?
ಬುಧವಾರ ವಾರಣಾಸಿಯಲ್ಲಿ ಮಾತನಾಡಿದ್ದ ಸುಹೇಲ್‍ದೇವ್, ಜಿನ್ನಾ ಅವರನ್ನು ಮೊದಲ ಪ್ರಧಾನಿಯನ್ನಾಗಿ ಮಾಡಿದ್ದರೆ ದೇಶ ವಿಭಜನೆಯಾಗುತ್ತಿರಲಿಲ್ಲ ಎಂದು ಹೇಳಿದ್ದರು. ಈ ಹೇಳಿಕೆಗೆ ಓವೈಸಿ ಮೊರದಾಬಾದ್‍ನಲ್ಲಿ ನಡೆದ ಸಾರ್ವಜನಿಕ ರ‍್ಯಾಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.