– ಧರ್ಮಸ್ಥಳ ಕೇಸ್‌ನಲ್ಲಿ ಸತ್ಯ ಹೊರಗೆ ಬರಬೇಕಾದ್ರೆ ಎನ್‌ಐಎ ತನಿಖೆ ಆಗಲೇಬೇಕು
– ಭೋವಿ ನಿಗಮದ ಅಕ್ರಮದ ಬಗ್ಗೆ ರಾಹುಲ್, ಸಿಎಂ ಮಾತನಾಡಬೇಕು
ಬೆಂಗಳೂರು: ಕಾಂಗ್ರೆಸ್ (Congress) ಯಾವಾಗಲು ಬೇರೆ ಧರ್ಮದ ಪರವಾಗಿ ಇದ್ದೇವೆ ಅಂತ ಅನೇಕ ಸಮಯದಲ್ಲಿ ತೋರಿಸಿದೆ ಎಂದು ಕಾಂಗ್ರೆಸ್ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಕಿಡಿಕಾರಿದ್ದಾರೆ.
ಸೆಪ್ಟೆಂಬರ್ 5 ರಂದು ಬೆಂಗಳೂರಿನಲ್ಲಿ ಮುಸ್ಲಿಂ ಧರ್ಮದ ಕಾರ್ಯಕ್ರಮ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಅವರು ಬೇರೆ ಧರ್ಮದ ಪರವಾಗಿ ಇದ್ದೇವೆ ಎಂದು ಅನೇಕ ಸಮಯದಲ್ಲಿ ಸಾಬೀತು ಮಾಡೋಕೆ ಹೊರಟಿದ್ದಾರೆ. ದಸರಾ (Mysuru Dasra) ಉದ್ಘಾಟನೆ ಬಾನು ಮುಷ್ತಾಕ್ ಅವರಿಂದ ಮಾಡೋ ಅವಶ್ಯಕತೆ ಇರಲಿಲ್ಲ. ಬಹಳ ಜನ ಸಾಧಕರು ಸಮಯದಲ್ಲಿ ಇದ್ದರು. ಬೇರೆಯವರನ್ನ ಕರೆದು ಮಾಡಬಹುದಿತ್ತು. ಆದರೆ ಈ ಸರ್ಕಾರದ ಹಿಂದಿನ ಉದ್ದೇಶಗಳೇನು ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಅಂಜನಾದ್ರಿ ಬೆಟ್ಟ ಸೇರಿ ರಾಜ್ಯದ 11 ಪ್ರವಾಸಿತಾಣಗಳ ರೋಪ್ ವೇಗೆ ಸರ್ಕಾರ ಅನುಮೋದನೆ
ಸಮಾಜಕ್ಕೆ ಯಾವ ಸಂದೇಶ ರವಾನೆ ಮಾಡುವ ಕೆಲಸ ರಾಜ್ಯದ ಸಿಎಂ ಹಾದಿಯಾಗಿ ಎಲ್ಲರು ಮಾಡ್ತಿದ್ದಾರೆ ಎಂಬುದನ್ನ ಆಲೋಚನೆ ಮಾಡಬೇಕು. ಧರ್ಮ ಧರ್ಮದ ಬಗ್ಗೆ ಕಿಚ್ಚು ಹಬ್ಬಿಸಿ, ಒಬ್ಬರಿಗೊಬ್ಬರ ಮಧ್ಯೆ ದ್ವೇಷ ಕ್ರಿಯೇಟ್ ಮಾಡಿ ಇದರ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳೋ ಕೆಲಸ ಆಗಬಾರದು. ಇದು ನಿಜಕ್ಕೂ ಖಂಡನೀಯ. ಅವರ ಧರ್ಮಕ್ಕೂ ನಾವು ಗೌರವ ಕೊಡೋಣ. ನಮ್ಮ ಧರ್ಮವನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ. ಇವತ್ತು ಧರ್ಮಸ್ಥಳ ಆಯ್ತು, ನಾಳೆ ಚಾಮುಂಡಿ ಬೆಟ್ಟ (Chamundi Hills) ಆಗುತ್ತದೆ. ಹೀಗೆ ಧಾರ್ಮಿಕ ಸ್ಥಳಗಳನ್ನ ಟಾರ್ಗೆಟ್ ಮಾಡಿಕೊಂಡು ಹೊರಟರೇ ಹಿಂದುಗಳಾಗಿ ನಾವು ಕೈಕಟ್ಟಿ ಕೂರೋಕೆ ಆಗಲ್ಲ. ಸರ್ಕಾರದ ಪೊಲಿಟಿಕಲ್ ಅಜೆಂಡಾ ನೂರಾರು ಇರಬಹುದು. ಇದರಿಂದ ಸಮಾಜದ ಮೇಲೆ ಆಗೋ ಡ್ಯಾಮೇಜ್ ಏನು ಎಂಬುದರ ಬಗ್ಗೆ ಆಲೋಚನೆ ಮಾಡಬೇಕು. ಸಿಎಂ ಅವರು ಇದರ ಬಗ್ಗೆ ಯೋಚನೆ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನಾವು ಸಿದ್ದರಾಮಯ್ಯ ಶಿಷ್ಯರೇ, ಬ್ರೈನ್ ಮ್ಯಾಪಿಂಗ್‌ಗೆ ನಾನು ರೆಡಿ – ರಾಜಣ್ಣ ವಿರುದ್ಧ ಮತ್ತೆ ಕಿಡಿಕಾರಿದ ಮಾಗಡಿ ಬಾಲಕೃಷ್ಣ
ಧರ್ಮಸ್ಥಳ ಕೇಸ್‌ನಲ್ಲಿ (Dharmasthala Case) ಪ್ರತಿಭಟನೆ ಮಾಡೋಕೆ ಬಿಜೆಪಿ-ಜೆಡಿಎಸ್‌ಗೆ ಎಲ್ಲಿಂದ ಹಣ ಬಂತು ಈ ಬಗ್ಗೆ ತನಿಖೆ ಆಗಬೇಕು ಎಂಬ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಧರ್ಮಸ್ಥಳ ಕೇಸ್‌ನಲ್ಲಿ ಸತ್ಯ ಹೊರಗೆ ಬರಬೇಕಾದರೆ ಎನ್‌ಐಎ (NIA) ತನಿಖೆ ಆಗಲೇಬೇಕು. ಸಿಎಂ ಹೇಳಿದ ಹಾಗೆ ತನಿಖೆ ಆಗಲೇಬೇಕು. ನಾವು ಹೇಳ್ತಿರೋದು ಎನ್‌ಐಎಯಿಂದ ತನಿಖೆ ಆಗಲಿ. ಯಾಕೆ ಎನ್‌ಐಎ ಅಂದರೆ ಕೆಲವು ಯೂಟ್ಯೂಬರ್‌ಗಳು, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿ ಬಂತು. ಇವರಿಗೆ ಫಂಡ್ ಮಾಡಿದ್ದು ಯಾರು, ಬೇರೆ ರಾಜ್ಯದಿಂದ, ಬೇರೆ ದೇಶದಿಂದ ಫಂಡ್ ಮಾಡಿದ್ದಾರಾ ಎಂಬುದು ಗೊತ್ತಾಗಬೇಕು. ಎಸ್‌ಐಟಿ ಮೂಲಕ ಸತ್ಯ ಹೊರಬರುತ್ತೆ ಅಂತ ನಂಬಿಕೆ ಜನರಿಗೆ ಇಲ್ಲ. ಹೀಗಾಗಿ ಎನ್‌ಐಎ ತನಖೆಗೆ ಕೊಡಿ ಅಂತಿರೋದು ಎಂದು ತಿಳಿಸಿದರು. ಇದನ್ನೂ ಓದಿ: ಮುಂದಿನ ಮೂರ್ನಾಲ್ಕು ದಿನ ಬೆಂಗ್ಳೂರಿಗೆ ಮಳೆ ಅಲರ್ಟ್
ಎಡಪಂಥೀಯ ಸಂಘಟನೆ ಇದರಲ್ಲಿ ಇವೆ ಎಂದು ಚರ್ಚೆ ಆಗುತ್ತಿದೆ. ಅದಕ್ಕಾಗಿ ಎನ್‌ಐಎ ತನಿಖೆ ಆಗಬೇಕು. ಈ ವಿಷಯದಲ್ಲಿ ನಾವು ರಾಜಕೀಯ ಬೆರೆಸೋ ಪ್ರಶ್ನೆ ಇಲ್ಲ. ರಾಜಕೀಯ ಮಾಡೋಕೆ ಬೇರೆ ವಿಷಯ ಇವೆ. ಸರ್ಕಾರ ನಮಗೆ ಸಾಕಷ್ಟು ವಿಷಯ ಕೊಡುತ್ತಿದೆ. ಧಾರ್ಮಿಕ ವಿಷಯದಲ್ಲಿ ರಾಜಕೀಯ ಮಾಡೋ ಅವಶ್ಯಕತೆ ಜೆಡಿಎಸ್‌ಗೆ ಇಲ್ಲ. ಎನ್‌ಐಎ ತನಿಖೆ ಆಗಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ದೆಹಲಿಯಲ್ಲಿ ಭಾರೀ ಮಳೆ – ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಯಮುನಾ
ಭೋವಿ ನಿಗಮದಲ್ಲಿ ಅಕ್ರಮ (Bhovi Scam) ವಿಚಾರವಾಗಿ ಮಾತನಾಡಿದ ಅವರು, ಭೋವಿ ನಿಗಮದ ಅಕ್ರಮದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯ ಮಾತಾಡಬೇಕು. ಹಿಂದೆ ವಾಲ್ಮೀಕಿ ನಿಗಮದಲ್ಲಿ ಅಕ್ರಮ ಆಯ್ತು. ಈಗ ಭೋವಿ ನಿಗಮದಲ್ಲಿ ಅಕ್ರಮ. ಈ ಸರ್ಕಾರ ಎಸ್‌ಸಿಎಸ್‌ಪಿ ಟಿಎಸ್‌ಪಿ ಹಣವನ್ನು ಗ್ಯಾರಂಟಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದುರ್ಬಳಕೆ ಆಗುತ್ತಿದೆ. ಭೋವಿ ನಿಗಮದ ಅಧ್ಯಕ್ಷರು ಹಣಕ್ಕೆ ಡಿಮ್ಯಾಂಡ್ ಇಡುತ್ತಾರೆ. ಆ ಅಧ್ಯಕ್ಷ ಕಾಂಗ್ರೆಸ್ ಸದಸ್ಯ. ಸಿಎಂ ಅವರು ನಾವು ಹಿಂದುಳಿದವರ ಪರ, ಎಸ್‌ಸಿ-ಎಸ್ಟಿ ಜನರ ಪರ ಅಂತಾರೆ. ಆದರೆ ಎಸ್‌ಸಿ-ಎಸ್ಟಿ ಜನರಿಗೆ ಇವರು ನ್ಯಾಯ ಕೊಡೋಕೆ ಆಗಿದೆಯಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅಲೆಮಾರಿ ಸಮುದಾಯಕ್ಕೆ 1% ಮೀಸಲಾತಿ ಮಾಡಿಸಿ ಕೊಡ್ತೀನಿ – ರಾಯರೆಡ್ಡಿ ಭರವಸೆ
ವಾಲ್ಮೀಕಿ ಹಗರಣದ ಹಣ ಎಲ್ಲಿಗೆ ಹೋಯಿತು? ಇಡಿ ಕೂಡಾ ಎಂಟ್ರಿ ಆಯಿತು. ಸದನದಲ್ಲಿ ಸಿಎಂ ಅವರೇ ಅಕ್ರಮ ಒಪ್ಪಿಕೊಂಡಿದ್ದರು. ವಾಲ್ಮೀಕಿ ಆಯ್ತು, ಈಗ ಭೋವಿ ನಿಗಮ. ಸಮುದಾಯದ ಸಬಲೀಕರಣಕ್ಕೆ ಇರೋ ಹಣ ಹೀಗೆ ಅಕ್ರಮ ಆಗುತ್ತಿರೋದು ಸರಿಯಲ್ಲ. ಇವರು ಕಮೀಷನ್ ಏಜೆಂಟ್ ರೀತಿ ವರ್ತನೆ ಮಾಡುತ್ತಿದ್ದಾರೆ. ಇಷ್ಟು ದಿನ ಬೇಕಾ ಸಿಎಂ ಕ್ರಮ ತೆಗೆದುಕೊಳ್ಳೋಕೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಛತ್ತೀಸ್‌ಗಢ | ಬಲರಾಂಪುರದಲ್ಲಿ ಅಣೆಕಟ್ಟು ಕುಸಿದು ಪ್ರವಾಹ – ನಾಲ್ವರು ಸಾವು, ಮೂವರು ನಾಪತ್ತೆ
ರಾಹುಲ್ ಗಾಂಧಿ ವಿರುದ್ಧ ಮಾತನಾಡಿದ್ರು ಅಂತ ಪ್ರಭಾವಿ ನಾಯಕ ರಾಜಣ್ಣರನ್ನ ವಜಾ ಮಾಡಿದ್ರು. ವಾಲ್ಮೀಕಿ ಪ್ರಭಾವಿ ನಾಯಕನನ್ನ ಕಾಂಗ್ರೆಸ್ ವಜಾ ಮಾಡಿದರು. ವಾಸ್ತವ ಮಾತಾಡಿದ್ರೆ ವಜಾ ಮಾಡುತ್ತಾರೆ. ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ. ರಾಹುಲ್ ಗಾಂಧಿ ಮಾತೆತ್ತಿದರೆ ಅಂಬೇಡ್ಕರ್ ಅವರ ಸಂವಿಧಾನ ಪುಸ್ತಕ ಇಟ್ಟುಕೊಂಡು ಓಡಾಡುತ್ತಾರೆ. ಅದರ ಒಳಗೆ ಏನಿದೆ ಅಂತ ತಿಳಿದುಕೊಂಡಿದ್ದಾರಾ? ರಾಹುಲ್ ಗಾಂಧಿ, ಸಿಎಂ ಇದ್ದಕ್ಕೆ ಉತ್ತರ ಕೊಡಬೇಕು ಎಂದರು. ಇದನ್ನೂ ಓದಿ: ವಿದೇಶಿ ಪ್ರಜೆಗಳಿಗೆ ಬಾಡಿಗೆ ನೀಡುವ ಮನೆ ಮಾಲೀಕರಿಗೆ ಗೈಡ್‌ಲೈನ್ಸ್ ಜಾರಿ – ಮಾರ್ಗಸೂಚಿ ಏನು?
ಅಧಿವೇಶನದಲ್ಲಿ ಜೆಡಿಎಸ್ ಮುಂದೆ ಭವಿಷ್ಯ ಇಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಅವರು ಬೆಳೆದು ಬಂದ ಹಾದಿ ಮರೆತಿದ್ದಾರೆ. ಯಾರಿಂದ ಬೆಳೆದ್ರು, ಯಾರ ಜೊತೆ ಇದ್ದರು ಅವೆಲ್ಲವನ್ನು ಮರೆತಿದ್ದಾರೆ. ಸಿದ್ದರಾಮಯ್ಯ ಅವರಿಂದ ಯಾರು ಬಜೆಟ್ ಮಂಡನೆ ಮಾಡಿಸಿದ್ದು ಅಂತ ಜನರಿಗೆ ಗೊತ್ತಿದೆ. ಅವರ ಪರ ದೇವೇಗೌಡರು ನಿಂತಿದ್ದರು. ಸಿದ್ದರಾಮಯ್ಯ ಅವರನ್ನ ಡಿಸಿಎಂ ಮಾಡಿದ್ದೇ ಜೆಡಿಎಸ್, ದೇವೇಗೌಡರು ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: 2024ಕ್ಕೂ ಮುನ್ನ ದಾಖಲೆಗಳಿಲ್ಲದೇ ಪಾಕ್, ಅಫ್ಘಾನ್, ಬಾಂಗ್ಲಾದಿಂದ ಬಂದ ಅಲ್ಪಸಂಖ್ಯಾತರಿಗೆ ಭಾರತದಲ್ಲಿ ಉಳಿಯಲು ಅವಕಾಶ
ಸಿದ್ದರಾಮಯ್ಯ ಅವರು ಅವರಪ್ಪನಾ ಆಣೆ ಸಿಎಂ ಆಗಲ್ಲ ಅಂತ ಕುಮಾಕುಮಾರಸ್ವಾಮಿಗೆ ಅಂದರು. ಆಗ ಕುಮಾರಸ್ವಾಮಿ ಸಿಎಂ ಆದರು. ಸಿದ್ದರಾಮಯ್ಯ ಅವರು ಉದ್ಧಟತನ ಮಾತು ಆಡೋ ಅವಶ್ಯಕತೆ ಇಲ್ಲ. ನಮ್ಮ ಬಗ್ಗೆ ಮಾತಾಡೋದು ಬಿಟ್ಟು ರಾಜ್ಯದ ಜನತೆ ಪರ ಕೆಲಸ ಮಾಡಲಿ. ಜೆಡಿಎಸ್ ಭವಿಷ್ಯದ ಬಗ್ಗೆ ಸಿಎಂ, ಡಿಸಿಎಂ ಚಿಂತನೆ ಮಾಡಿ ಸಮಯ ವೇಸ್ಟ್ ಮಾಡೋದು ಬೇಡ ಎಂದು ಹರಿಹಾಯ್ದರು. ಇದನ್ನೂ ಓದಿ: ತೆಲಂಗಾಣ | ಅಮಾನತು ಬೆನ್ನಲ್ಲೇ BRS ಪಕ್ಷ ತೊರೆದ ಕೆಸಿಆರ್ ಪುತ್ರಿ ಕವಿತಾ – MLC ಸ್ಥಾನಕ್ಕೂ ರಾಜೀನಾಮೆ



