ಬೆಳಗಾವಿ: ನಾನು ಬೇನಾಮಿ ಆಸ್ತಿ ಮಾಡೋದಕ್ಕೆ ನಮ್ಮಪ್ಪ ಸಿಎಂ (Chief Minister) ಆಗಿರಲಿಲ್ಲ ಎಂದು ಬಿಜೆಪಿ (BJP) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (CT Ravi) ಕಾಂಗ್ರೆಸ್ (Congress) ನಾಯಕರಿಗೆ ತಿರುಗೇಟು ನೀಡಿದ್ದಾರೆ.
Advertisement
ಅಕ್ರಮ ಆಸ್ತಿ ಮಾಡಿದ್ದಾರೆ ಎಂಬ ಕಾಂಗ್ರೆಸ್ ನಾಯಕರ (Congress Leaders) ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ನಮ್ಮಪ್ಪ ಮುಖ್ಯಮಂತ್ರಿ ಆಗಿರಲಿಲ್ಲ, ಬೇನಾಮಿ ಆಸ್ತಿ (Illegal Properties) ಮಾಡೋದಕ್ಕೆ. ನ್ಯಾಯವಾಗಿ ದುಡಿಯೋ ಸಂಸ್ಕಾರ ಕಲಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾನು ಕಷ್ಟದಲ್ಲಿ ಇದ್ದಾಗ ಬಿಎಸ್‌ವೈ, ಜಗದೀಶ್ ಶೆಟ್ಟರ್ ಬಿಟ್ಟು ಇನ್ಯಾರು ನನ್ನ ಮನೆಗೆ ಬಂದಿರಲಿಲ್ಲ: ಜನಾರ್ದನ ರೆಡ್ಡಿ
Advertisement
Advertisement
ನಾನು ಮಧ್ಯಮ ವರ್ಗದ ರೈತನ (Farmer) ಮಗ. ಪ್ರತಿವರ್ಷ ನಾನು ಆಸ್ತಿ ಘೋಷಣೆ ಮಾಡ್ತಾ ಇದ್ದೀನಿ. ರಾಜಕೀಯಕ್ಕೆ ಬರೋದಕ್ಕೆ ಮುನ್ನವೂ ಆಸ್ತಿ ವಿವರ ಸಲ್ಲಿಸಿದ್ದೀನಿ. ನನ್ನ ಆಸ್ತಿಯೇನು 800 ಪಟ್ಟು ಹೆಚ್ಚಿಗೆ ಆಗಿಲ್ಲ. ನನ್ನ ಬಳಿ ಅಕ್ರಮ ಆಸ್ತಿ ಇರೋದು ದೃಢಪಡಿಸಲಿ. ಅನುಮಾನ ಇರೋರು ಲೋಕಾಯುಕ್ತಕ್ಕೆ (Lokayukta) ಹೋಗಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭ್ರಷ್ಟಾಚಾರದ ಆರೋಪ ಮಾಡಿ ಅರೆಸ್ಟ್ ಆಗಿದ್ದ ಕೆಂಪಣ್ಣಗೆ ಜಾಮೀನು
Advertisement
ನಾನು ಕೊತ್ವಾಲ್ ರಾಮಚಂದ್ರನ ಶಿಷ್ಯ ಅಲ್ಲ. ಗ್ಯಾಂಗ್ ಕಟ್ಟಿಕೊಂಡು ಓಡಾಡಿಲ್ಲ. ನನ್ನ ಟ್ರ್ಯಾಕ್ ರೆಕಾರ್ಡ್ ತೆಗೆದು ಚೆಕ್ ಮಾಡಿಕೊಳ್ಳಲಿ. ಕೆಲವರು ನಾನು ಕುಡಿದು ಮಾತಾಡ್ತೀನಿ ಅಂತಾ ನನ್ನ ಬಗ್ಗೆ ಮಾತಾಡಿದ್ದಾರೆ. ನನ್ನ ಬ್ಲಡ್ ನಲ್ಲಿ ಗಾಂಜಾ, ಮದ್ಯಪಾನ ಮಾಡಿರೋದು ಏನಾದ್ರೂ ಸಿಕ್ಕಿದ್ರೆ, ಆಗ ಮಾತಾಡಲಿ. ಬೇಕಿದ್ರೆ ಅವರು ಯಾರೇ ನನ್ನ ಜೊತೆ ಕಾಂಪಿಟೇಶನ್‌ಗೆ ಬರಲಿ, ಬೆಳಗಾವಿ ತನಕ ಓಡಿ ತೋರಿಸ್ತೀನಿ. ಅವ್ರ ಕೈಲಿ ಓಡೋದಕ್ಕೆ ಆಗುತ್ತಾ ಎಂದು ತೋರಿಸಲಿ ಎಂದು ಸವಾಲ್ ಹಾಕಿದ ಸಿ.ಟಿ ರವಿ, ಕುಡಿದು ಓಡಾಡೋಕ್ಕೆ ಆಗದೇ ಇರೋರು ಯಾರು ಅಂತಾ ಎಲ್ಲರಿಗೂ ಗೊತ್ತು ಎಂದು ಕುಟುಕಿದ್ದಾರೆ.