ರಾಷ್ಟ್ರಧ್ವಜ ಬದಲಿಸುವುದು ಕಾಂಗ್ರೆಸ್‌ ಅಜೆಂಡಾ, ಸಾಕ್ಷಿ ಇಲ್ಲಿದೆ ನೋಡಿ: ಬಿಜೆಪಿ

Public TV
2 Min Read
bjp - congress

ಬೆಂಗಳೂರು: ರಾಷ್ಟ್ರಧ್ವಜ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್‌ ಪಕ್ಷದ ವಿರುದ್ಧ ಬಿಜೆಪಿ ಹರಿಹಾಯ್ದಿದೆ. ರಾಷ್ಟ್ರಧ್ವಜ ಬದಲಾಯಿಸುವುದು ಕಾಂಗ್ರೆಸ್‌ ಪಕ್ಷದ ಹಿಡನ್‌ ಅಜೆಂಡಾ ಎಂದು ಬಿಜೆಪಿ ಟ್ವೀಟ್‌ ಮೂಲಕ ಗಂಭೀರ ಆರೋಪ ಮಾಡಿದೆ.

ಬಿಜೆಪಿ ಟ್ವೀಟ್‌ನಲ್ಲೇನಿದೆ?
ಹಿಜಾಬ್ ಪರವಾಗಿ ಕೆಪಿಸಿಸಿ ಕಚೇರಿಯಿಂದಲೇ ಸೂಚಿತವಾಗಿರುವ ವ್ಯಕ್ತಿಗಳು ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿದ್ದಾರೆ. ಹಿಜಾಬ್‌ ಧರಿಸಲು ಅವಕಾಶ ಇಲ್ಲವಾದರೆ, ಹಿಂದೂ ಧರ್ಮೀಯರು ಕೂಡಾ ಬಳೆ, ಹೂವು, ಕುಂಕುಮ ಇಡಬಾರದಂತೆ. ಹಿಂದೂ ಧರ್ಮ ಈ ನೆಲದ ಸಂಸ್ಕೃತಿ, ಅದನ್ನೇ ಇಂದು ಕಾಂಗ್ರೆಸ್‌ ವಿರೋಧಿಸುತ್ತಿದೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಹೋಗಿ ಅಂತಾರೆ, ಪಾಕ್ ಇವರಪ್ಪನ ಮನೆನಾ..? – ರಾಜಕಾರಣಿಗಳ ವಿರುದ್ಧ ಉಡುಪಿ ವಿದ್ಯಾರ್ಥಿನಿಯರ ಕಿಡಿ

ಹಿಜಾಬ್‌ ವಿವಾದ ನ್ಯಾಯಾಲಯದ ಮೆಟ್ಟಿಲೇರುವ ಹಿಂದೆ ಕಾಂಗ್ರೆಸ್‌ ಪಕ್ಷದ ಶ್ರಮವಿದೆ. ಕಾಂಗ್ರೆಸ್‌ ಪಕ್ಷದ ಪದಾಧಿಕಾರಿಗಳೇ ಹಿಜಾಬ್‌ ಪರವಾಗಿ ನ್ಯಾಯಾಲಯಕ್ಕೆ ಅರ್ಜಿಯ ಮೇಲೆ ಅರ್ಜಿ ಸಲ್ಲಿಸುತ್ತಿದ್ದಾರೆ. ಕಾಂಗ್ರೆಸ್ ಹಿಜಾಬ್‌ ಪರವಾಗಿ ಇರುವುದಕ್ಕಿಂತ ಹೆಚ್ಚಾಗಿ ಕುಂಕುಮ, ಬಳೆ, ಹೂವು ಮುಡಿಯುವುದರ ವಿರುದ್ದವಿದೆ. ಹಿಂದೂ ವಿರೋಧಿ ಕಾಂಗ್ರೆಸ್‌.

ಹಿಜಾಬ್‌ ಪರವಾಗಿರುವ ಕಾಂಗ್ರೆಸ್‌, ಶೈಕ್ಷಣಿಕ ವಾತವಾರಣದಲ್ಲಿ ಹಿಜಾಬ್‌ ಧರಿಸಲು ಅವಕಾಶ ನಿರಾಕರಿಸುವುದೇ ಆದಲ್ಲಿ, ಹಿಂದೂಗಳು ಕುಂಕುಮ ಇಡಬಾರದು, ಬಳೆ, ಹೂವು ಮುಡಿಯಬಾರದು ಎನ್ನುವ ಅಸಮಂಜಸ ವಾದವನ್ನು ಸಮಾಜದ ಮುಂದಿಡುತ್ತಿದೆ. ಹಿಂದೂ ಸಂಸ್ಕೃತಿ, ಹಿಂದೂಗಳ ಬಗ್ಗೆ ಕಾಂಗ್ರೆಸ್‌ ಪಕ್ಷಕ್ಕೇಕೆ ಇಷ್ಟೊಂದು ಅಸಹನೆ?

ರಾಷ್ಟ್ರ ಧ್ವಜವೇ ಇರದಿದ್ದ ಸ್ಥಂಭದಲ್ಲಿ, ರಾಷ್ಟ್ರ ಧ್ವಜವನ್ನು ಇಳಿಸಿ ಕೇಸರಿ ಧ್ವಜ ಹಾರಿಸಲಾಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಿದ್ದು ತಿರಂಗಕ್ಕೆ ಮಾಡಿದ ಅವಮಾನವಲ್ಲವೇ? ತಿರಂಗಕ್ಕೆ ಅವಮಾನ ಮಾಡಿ, ಸದನದಲ್ಲಿ ರಾಜಕೀಯ ಕಾರಣಕ್ಕಾಗಿ ತಿರಂಗ ಬಳಸಿದ್ದು ದೇಶದ್ರೋಹವಲ್ಲದೆ ಮತ್ತೇನು? ಇದನ್ನೂ ಓದಿ: ಸಂಘ ಪರಿವಾರದ ತಾಳಕ್ಕೆ ಕುಣಿಯುತ್ತಾ ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣ ಕಸಿಯುತ್ತಿದೆ ಬಿಜೆಪಿ: ಸಿದ್ದು

ರಾಷ್ಟ್ರ ಧ್ವಜವನ್ನು ಕಾಂಗ್ರೆಸ್ ಧ್ವಜವಾಗಿ ಪರಿವರ್ತಿಸಲು ಹೊರಟಿರುವ ಕಾಂಗ್ರೆಸ್ಸಿಗರಿಗೆ ಏನನ್ನಬೇಕು!? ಡಿಕೆಶಿ ಅವರ ಸಂಬಂಧಿ ಡಾ. ರಂಗನಾಥ್ ಅವರು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡುತ್ತಿದ್ದಾರೆ. ಸಚಿವರ ಹೇಳಿಕೆ ಹಿಡಿದುಕೊಂಡು ಕಲಾಪಕ್ಕೆ ಅಡ್ಡಿ ಮಾಡಿದ ಕಾಂಗ್ರೆಸ್ಸಿಗರು ಇದಕ್ಕೇನು ಹೇಳುತ್ತಾರೆ?

ರಾಷ್ಟ್ರ ಧ್ವಜವನ್ನು ಕೆಳಗಿಳಿಸಿ ಕೇಸರಿ ಧ್ವಜ ಹಾರಿಸಿದ್ದಾರೆ ಎಂದು ಡಿಕೆಶಿ ಸುಳ್ಳು ಪ್ರಚಾರ ನಡೆಸಿದರು. ಕಾಂಗ್ರೆಸ್‌ ಶಾಸಕ ಡಾ. ರಂಗನಾಥ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ರಾಷ್ಟ್ರಧ್ವಜದಲ್ಲಿನ ಅಶೋಕ ಚಕ್ರವನ್ನೇ ಪಲ್ಲಟಗೊಳಿಸಿ ಕಾಂಗ್ರೆಸ್ ಚಿಹ್ನೆ ಹಾಕಿದ್ದಾರೆ. ಇದಕ್ಕಿಂತ ದೊಡ್ಡ ಬೇರೆ ದೇಶದ್ರೋಹ ಬೇರೇನಿದೆ? ಇದನ್ನೂ ಓದಿ: ವಿಧಾನ ಪರಿಷತ್ ಕಲಾಪದಲ್ಲಿ ಜೈಶ್ರೀರಾಮ್, ಭಾರತ್ ಮಾತಾಕಿ ಜೈ ಘೋಷಣೆ

ರಾಷ್ಟ್ರ ಧ್ವಜ ಬದಲಾಯಿಸುವುದು ಕಾಂಗ್ರೆಸ್ ಪಕ್ಷದ ಹಿಡನ್ ಅಜೆಂಡಾ ಎಂಬುದಕ್ಕೆ ಇಲ್ಲಿ ಸಾಕ್ಷಿ ಇದೆ ನೋಡಿ. ತಿರಂಗ ಧ್ವಜದಲ್ಲಿ ಕಾಂಗ್ರೆಸ್ ಚಿಹ್ನೆ ಹಾಕಿದ್ದಾರೆ. ಹಾಗಾದರೆ ದೇಶದ್ರೋಹಿಗಳು ಯಾರು ಎಂದು ಬಿಜೆಪಿ ಪ್ರಶ್ನಿಸಿದೆ.

Share This Article
Leave a Comment

Leave a Reply

Your email address will not be published. Required fields are marked *