ವಿಜಯಪುರ: ಮಾಜಿ ಸಚಿವ ಎಂ. ಬಿ ಪಾಟೀಲ್ ವಿರುದ್ಧ ಮಹಿಳೆಯೊಬ್ಬರು ಅಶ್ಲೀಲ ಪದ ಬಳಕೆ ಮಾಡಿದ್ದರೆಂದು ಕಾಂಗ್ರೆಸ್ ಕಾರ್ಯಕರ್ತೆಯರು ಮಸಿ ಬಳಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿ ಹತ್ತಿರವಿರುವ ಗಗನ ಮಹಲ್ ಹತ್ತಿರ ಮಹಿಳೆಯ ಮುಖಕ್ಕೆ ಮಸಿ ಬಳಿದು ಕಾರ್ಯಕರ್ತೆಯರು ಪಾಠ ಕಲಿಸಿದ್ದಾರೆ.
Advertisement
ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ರಬಕವಿ ಗ್ರಾಮದ ಚಂದ್ರೆವ್ವ ಎಂಬ ಮಹಿಳೆಯ ವಿರುದ್ಧ ಕಾರ್ಯಕರ್ತೆಯರು ಮಂಗಳವಾರ ಜಾಥಾದ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
Advertisement
ಇತ್ತೀಚೆಗೆ ನಡೆದ ವಿಜುಗೌಡ ಪಾಟೀಲ್ ನೇತೃತ್ವದಲ್ಲಿ ನಡೆದ ಬಿಜೆಪಿ ಪ್ರತಿಭಟನೆ ವೇಳೆ ಚಂದ್ರೆವ್ವ, ಎಂ.ಬಿ.ಪಾಟೀಲ್ ವಿರುದ್ಧ ಅಶ್ಲೀಲ ಪದ ಬಳಸಿದ್ದರು ಎಂದು ಮನವಿಯಲ್ಲಿ ತಿಳಿಸಿದ್ದರು. ಸದ್ಯ ಕಾರ್ಯಕರ್ತೆಯರು ಮಸಿ ಬಳಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.