ಬೆಂಗಳೂರು: ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದವರು ಮತ್ತು ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟವರು ಕಾಂಗ್ರೆಸ್ ಕಾರ್ಯಕರ್ತರು ಎಂದು ಬಿಜೆಪಿ ಟ್ವಿಟ್ಟರ್ ಮೂಲಕ ಕಾಂಗ್ರೆಸ್ ವಿರುದ್ಧ ನೇರ ಆರೋಪ ಹೊರಿಸಿದೆ.
Advertisement
Advertisement
ಟ್ವೀಟ್‍ನಲ್ಲಿ ಏನಿದೆ?
ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟವರು ಕಾಂಗ್ರೆಸ್ ಕಾರ್ಯಕರ್ತರು. ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಂಚು ನಡೆಸಿದ್ದೂ ಕಾಂಗ್ರೆಸ್ ಕಾರ್ಯಕರ್ತರು. ಇವರ ಕೃತ್ಯ, ಉದ್ದೇಶ ಹಾಗೂ ಹಿಂದಿರುವ ಶಕ್ತಿಗಳು ಕಾಂಗ್ರೆಸ್ಸಿಗರೇ ಎನ್ನುವ ಸಂಶಯ ರಾಜ್ಯದ ಜನತೆಯನ್ನು ಕಾಡುತ್ತಿದೆ. ಇದನ್ನೂ ಓದಿ: ಕನ್ನಡ ಧ್ವಜಕ್ಕೆ ಬೆಂಕಿ – ಕನ್ನಡ ದ್ರೋಹಿಗಳ ವಿರುದ್ಧ ಕಠಿಣ ಕ್ರಮಕ್ಕೆ ಹೆಚ್‍ಡಿಕೆ ಆಗ್ರಹ
Advertisement
ಸಿದ್ದರಾಮಯ್ಯನವರೇ,
ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದವರು ಯಾರಿಗೆ ಆಪ್ತರು ಎನ್ನುವುದನ್ನು ಗಮನಿಸಿ!
ಈಗ ನಿಮ್ಮ "ಕ್ರಿಯೆಗೆ ತಕ್ಕ ಪ್ರತಿಕ್ರಿಯೆ" ಏನು? pic.twitter.com/aoBLyQFweW
— BJP Karnataka (@BJP4Karnataka) December 18, 2021
Advertisement
ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದ ಪ್ರಕರಣ ಹಾಗೂ ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟಿದ್ದಕ್ಕೆ ಡಿಕೆಶಿ ಅವರು ಏಕೆ ಪ್ರತಿಕ್ರಿಯೆ ನೀಡಿಲ್ಲ ಎನ್ನುವುದಕ್ಕೆ ಕಾರಣ ಸ್ಪಷ್ಟವಾಗಿದೆ. ಎಲ್ಲದಕ್ಕೂ ಉತ್ತರ ಒಂದೇ. ಅದರ ಹಿಂದಿರುವ ವ್ಯಕ್ತಿಗಳೆಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೆಪಿಸಿಸಿ ಅಧ್ಯಕ್ಷರ ಹಿಂದೆ ನಿಂತವರು. ಸಿದ್ದರಾಮಯ್ಯನವರೇ, ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದವರು ಯಾರಿಗೆ ಆಪ್ತರು ಎನ್ನುವುದನ್ನು ಗಮನಿಸಿ! ಈಗ ನಿಮ್ಮ “ಕ್ರಿಯೆಗೆ ತಕ್ಕ ಪ್ರತಿಕ್ರಿಯೆ” ಏನು?. ಇದನ್ನೂ ಓದಿ: ಕನ್ನಡ ಧ್ವಜ ಸುಟ್ಟ ದ್ರೋಹಿಗಳ ವಿರುದ್ಧ ಆಕ್ರೋಶ: ಪಕ್ಷಬೇಧ ಮರೆತು ಖಂಡನಾ ನಿರ್ಣಯ
In the race to gain control over the party in the State, it appears that CONgress leaders are indulging in creating communal riots in Karnataka.
Does CM @OfficeofUT has the guts to question his partner Sonia Gandhi for insulting the great Chhatrapati Shivaji Maharaj?
— BJP Karnataka (@BJP4Karnataka) December 18, 2021