ರಾಯಚೂರು: ರಾಯಚೂರಿನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಪವರ್ ಮಿನಿಸ್ಟರ್ ಡಿಕೆ ಶಿವಕುಮಾರ್ ಫುಲ್ ಮಿಂಚುತ್ತಿದ್ದಾರೆ. ಸಚಿವ ಡಿಕೆ ಶಿವಕುಮಾರ್ ವೇದಿಕೆಯಲ್ಲಿ ಭಾಷಣ ಮಾಡಲು ಆಹ್ವಾನಿಸುತ್ತಿದ್ದಂತೆ ಡಿಕೆಶಿ ಅಭಿಮಾನಿಗಳು ಮುಗಿಲು ಮುಟ್ಟುವಂತೆ ಜೈಕಾರ ಕೂಗಿದ್ರು. ಅಲ್ದೆ ಡಿ.ಕೆ ಶಿವಕುಮಾರ್ ಭಾವಚಿತ್ರ ಹಿಡಿದು ಅಭಿಮಾನಿಗಳು ಸಂಭ್ರಮಿಸಿದ್ರು.
ಕಾರ್ಯಕರ್ತರ ಬೃಹತ್ ಸಮಾವೇಶ ಉದ್ದೇಶಿಸಿದ ಭಾಷಣ ಮಾಡಿದ ಡಿ.ಕೆ.ಶಿವಕುಮಾರ್, ಸತ್ಯಕ್ಕೆ ಯಾವಾಗಲೂ ಜಯವಿದೆ. ನುಡಿದಂತೆ ನಾವು ನಡೆದಿದ್ದೇವೆ ನಮಗೆ ಜಯವಿದೆ. ನಾವು ಮತದಾರರಲ್ಲಿ ಮತ ಕೇಳುವ ಶಕ್ತಿ ಹೊಂದಿದ್ದೇವೆ. ನಾವು ಕೆಲಸ ಮಾಡಿದ್ದೇವೆ ಕೂಲಿ ಕೊಡಿ. ಐದು ವರ್ಷ ಬಿಜೆಪಿ ರಾಜ್ಯದಲ್ಲಿ ಏನನ್ನೂ ಮಾಡಲಿಲ್ಲ. ಮೋಡ, ಗ್ರಹಣ, ಕಷ್ಟಗಳು ಬರುತ್ತವೆ ಅದಕ್ಕೆಲ್ಲಾ ಚಿಂತೆ ಮಾಡಬಾರದು. ಕಾಂಗ್ರೆಸ್ ಪಕ್ಷ ರಾಜ್ಯದ ಜನರನ್ನ ಕಾಯುತ್ತದೆ. ರಾಹುಲ್ ಗಾಂಧಿಯನ್ನ ಮುಂದಿನ ಪ್ರಧಾನಿ ಮಾಡಲು ಎಲ್ಲರೂ ಪಣತೊಡಬೇಕಿದೆ ಅಂದ್ರು.
Advertisement
Advertisement
ಇದೇ ವೇಳೆ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಅಂಬಾನಿ ಅದಾನಿ ಸಾಲಮನ್ನ ಮಾಡುವ ಸರ್ಕಾರಕ್ಕೆ ರೈತರು ಕಾಣುತ್ತಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಸಾಲ ಮನ್ನಾ ಮಾಡಿದ್ರೆ ಆರ್ಥಿಕ ವ್ಯವಸ್ಥೆ ಹಾಳಾಗುತ್ತೆ ಅಂತಾರೆ. ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಲೂಟಿ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪುನಃ ರಾಜ್ಯದಲ್ಲಿ ಅಧಿಕಾರ ಪಡೆಯುತ್ತದೆ ಅಂದ್ರು.
Advertisement
ಸಮಾವೇಶದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ರಾಯಚೂರಿಗೆ ಬಂದಿಳಿದ ನಂತರ ಸಿಎಂ ಹಾಗೂ ಪರಮೇಶ್ವರ್ ಸೇರಿದಂತೆ ನಾಯಕರು ಸ್ವಾಗತ ಮಾಡಿದ್ರು. ಜಿಂದಾಲ್ ಏರ್‍ಪೋರ್ಟ್‍ನಿಂದ ರಾಹುಲ್ ಗಾಂಧಿ ಜೊತೆ ಉಸ್ತುವಾರಿ ವೇಣುಗೋಪಾಲ್ ಕೂಡಾ ರಾಯಚೂರಿಗೆ ತೆರಳಿದ್ರು. ಈ ನಡುವೆ ಜಿಂದಾಲ್ ಏರ್‍ಪೋರ್ಟ್‍ಗೆ ರಾಹುಲ್ ಗಾಂಧಿ ಬಂದಿಳಿದಾಗ ಸಚಿವ ಸಂತೋಷ್ ಲಾಡ್, ರಾಹುಲ್ ಗಾಂಧಿ ಕಾಲಿಗೆ ಬಿದ್ದು ನಮಸ್ಕರಿಸಿದ್ರು. ಇದು ಕಾಂಗ್ರೆಸ್‍ನ ಕೆಲ ನಾಯಕರು ಅಚ್ಚರಿ ಪಡುವಂತೆ ಮಾಡಿತು.
Advertisement
ಸಮಾವೇಶಕ್ಕೆ ಕಾಲೇಜು ಬಿಡಿಸಿ ವಿದ್ಯಾರ್ಥಿಗಳನ್ನ ಕರೆತರಲಾಗಿದೆ. ಒಂದು ಲಕ್ಷಕ್ಕೂ ಅಧಿಕ ಜನರನ್ನ ಸೇರಿಸುವ ಉದ್ದೇಶ ಹೊಂದಿರುವ ಪ್ರದೇಶ ಕಾಂಗ್ರೆಸ್, ವಿವಿಧ ಕಾಲೇಜು ವಿದ್ಯಾರ್ಥಿಗಳನ್ನ ಬಸ್‍ನಲ್ಲಿ ಕೆರೆದುಕೊಂಡು ಬಂದಿದೆ. ವಸತಿ ನಿಲಯ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಿ ಕರೆದುಕೊಂಡು ಬರಲಾಗಿದೆ.
ಇದನ್ನೂ ಓದಿ: ನಟ ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಡಿಕೆಶಿ ಹೀಗಂದ್ರು
ರಾಯಚೂರಿನ ಕೃಷಿ ವಿಶ್ವವಿದ್ಯಾಲಯ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ಹಾಗೂ ಕಲಂ 371 ಜೆ ಜಾರಿ ಹಿನ್ನೆಲೆ ರಾಹುಲ್ ಗಾಂಧಿಗೆ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 2 ಲಕ್ಷ ಚದರಡಿ ಜಾಗದಲ್ಲಿ ಸಮಾವೇಶಕ್ಕೆ ವ್ಯವಸ್ಥೆ ಮಾಡಲಾಗಿದ್ದು, 70 ಸಾವಿರ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. 4000 ಸಾವಿರ ಪೊಲೀಸ್ ಸಿಬ್ಬಂದಿಯನ್ನ ಭದ್ರತೆಗೆ ನೇಮಿಸಲಾಗಿದೆ.
ನಟ ಉಪೇಂದ್ರ ರಾಜಕೀಯ ಪ್ರವೇಶಕ್ಕೆ ಡಿಕೆಶಿ ಹೀಗಂದ್ರು https://t.co/LSJFLoAlBE @nimmaupendra @IamDKShivakumar @priyankauppi pic.twitter.com/Vr0rTbh2bb
— PublicTV (@publictvnews) August 12, 2017
Congress VP Rahul Gandhi arrives in Raichur, will address the Samanatha Samavesha shortly.#ಸಮಾನತೆ_ಸಮಾವೇಶ #RGinRaichur pic.twitter.com/HvPea4Fshg
— Congress (@INCIndia) August 12, 2017
"For Hyd-Ktk region, my Govt has already spent Rs.2500 cr. This yr, Rs.1500 cr is being spent": @CMofKarnataka #ಸಮಾನತೆ_ಸಮಾವೇಶ#RGinRaichur pic.twitter.com/2xLSVs0ur7
— Karnataka Congress (@INCKarnataka) August 12, 2017
Welcome @OfficeOfRG to this historic #ಸಮಾನತೆ_ಸಮಾವೇಶ rally in Raichur where more than a lakh ppl have assembled: @CMofKarnataka #RGinRaichur pic.twitter.com/JtDdGqfP7o
— Karnataka Congress (@INCKarnataka) August 12, 2017