ಶಿವಮೊಗ್ಗ: ಕಾಂಗ್ರೆಸ್ ಕಾರ್ಯಕರ್ತರ ದಾಳಿಗೆ ಇಬ್ಬರು ಜೆಡಿಎಸ್ ಕಾರ್ಯಕರ್ತರು ತೀವ್ರವಾಗಿ ಗಾಯಗೊಂಡ ಘಟನೆ ಭದ್ರಾವತಿಯಲ್ಲಿ ನಡೆದಿದೆ.
ಜೆಡಿಎಸ್ ಕಾರ್ಯಕರ್ತರಾದ ರುದ್ರೇಶ್ ಹಾಗೂ ಗೋಪಿ ಎಂಬವರು ಬೈಕಿನಲ್ಲಿ ಬರುವಾಗ ಇವರನ್ನು ಅಡ್ಡಗಟ್ಟಿದ ಶರತ್, ವಿಶ್ವ, ವಿನಯ್, ಸುನೀಲ್, ಮಲ್ಲಿಕಾ, ತೇಜ, ರಾಜೇಶ್ ಇನ್ನಿತರರು ಅಡ್ಡಗಟ್ಟಿ ದಾಳಿ ಮಾಡಿದ್ದಾರೆ. ಚಾಕು ಹಾಗೂ ಮಚ್ಚಿನಿಂದ ಮನಸೋ ಇಚ್ಛೆ ಹೊಡೆದು ಪರಾರಿ ಆಗಿದ್ದಾರೆ.
ತೀವ್ರವಾಗಿ ಗಾಯಗೊಂಡಿರುವ ರುದ್ರೇಶ್ ಹಾಗೂ ಗೋಪಿ ಅವರಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈಯಕ್ತಿಕ ಹಾಗೂ ರಾಜಕೀಯ ದ್ವೇಷವೇ ಹಲ್ಲೆಗೆ ಕಾರಣ ಎನ್ನಲಾಗಿದೆ. ಗಾಯಗೊಂಡ ಇಬ್ಬರೂ ಜೆಡಿಎಸ್ ನಾಯಕ, ಮಾಜಿ ಶಾಸಕ ಅಪ್ಪಾಜಿ ಗೌಡರ ಬೆಂಬಲಿಗರು, ಇವರ ಮೇಲೆ ಹಲ್ಲೆ ಮಾಡಿದವರು ಹಾಲಿ ಶಾಸಕ ಕಾಂಗ್ರೆಸ್ ನ ಬಿ.ಕೆ.ಸಂಗಮೇಶ್ ಬೆಂಬಲಿಗರು ಎನ್ನಲಾಗಿದೆ.
ಈ ಸಂಬಂಧ ಭದ್ರಾವತಿ ಹಳೇ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv