ಚಿಕ್ಕಬಳ್ಳಾಪುರ: ಉಪಚುನಾವಣೆ ಕಣ ದಿನೇ ದಿನೇ ರಂಗೇರುತ್ತಿದ್ದು, ರ‍್ಯಾಲಿಗಳಲ್ಲಿ ಅಭ್ಯರ್ಥಿಗಳಿಗೆ ಸೇಬು ಹಣ್ಣಿನ ಹಾರ ಹಾಕುವ ಟ್ರೆಂಡ್ ಕೂಡ ಶುರುವಾಗಿದೆ. ಆದರೆ ಹಾರವನ್ನು ಹಾಕಿ ತೆಗೆದ ಬಳಿಕ ಈ ಸೇಬಿನ ಹಾರದ ಗತಿ ಏನಾಗುತ್ತೆ ಎಂಬುದು ಚಿಕ್ಕಬಳ್ಳಾಪುರದಲ್ಲಿ ಕೈ ಕಾರ್ಯಕರ್ತರು, ಬೆಂಬಲಿಗರು ತೋರಿಸಿದ್ದಾರೆ.
Advertisement
ಹೌದು. ಉಪಚುನಾವಣೆ ಹಿನ್ನೆಲೆ ಕೇವಲ ವೋಟಿಗಾಗಿ ಮಾತ್ರವಲ್ಲ ಸೇಬಿಗಾಗಿಯೂ ಬಿಗ್ ಫೈಟ್ ನಡೆದಿದೆ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಂಜನಪ್ಪಗೆ ಹಾಕಿದ್ದ ಸೇಬಿನ ಹಾರದ ಗತಿ ಏನಾಯ್ತು ಎಂದು ನೋಡಿದರೆ ನಗು ಬರುತ್ತೆ. ನಾಮಪತ್ರ ಸಲ್ಲಿಕೆ ರ‍್ಯಾಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಂಜನಪ್ಪ ಅವರಿಗೆ ಪ್ರೀತಿಯಿಂದ ಸೇಬಿನ ಬೃಹತ್ ಹಾರ ಹಾಕಿದ್ದರು. ಆದರೆ ಹಾರವನ್ನು ಹಾಕಿ ತೆಗೆದ ಬಳಿಕ ಆ ಸೇಬಿಗಾಗಿ ಅಲ್ಲಿದ್ದ ಕಾರ್ಯಕರ್ತರು, ಅಂಜನಪ್ಪ ಬೆಂಬಲಿಗರು ತಾ ಮುಂದು, ನಾ ಮುಂದು ಎಂದು ಹಾರವನ್ನು ಎಳೆದಾಡಿ, ಸೇಬು ಹಣ್ಣಿಗಾಗಿ ಕಿತ್ತಾಡಿದ್ದಾರೆ. ಕೊನೆಗೆ ದಾರವನ್ನು ಮಾತ್ರ ಉಳಿಸಿದ್ದಾರೆ. ಈ ವಿಡಿಯೋ ಸದ್ಯ ಸಖತ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ನೋಡಿ ನೆಟ್ಟಿಗರು ಕಾಂಗ್ರೆಸ್ ಕಾಲೆಳೆಯುತ್ತಿದ್ದಾರೆ.
Advertisement
Advertisement
ಅಂಜನಪ್ಪ ಅವರಿಗೆ ಕ್ರೇನ್ ಮೂಲಕ ಸೇಬಿನ ಹಾರ ಹಾಕಿ ತೆಗೆಯಲಾಯಿತು. ಬಳಿಕ ಆ ಹಾರದಲ್ಲಿದ್ದ ಸೇಬು ಹಣ್ಣಿಗಾಗಿ ಕಾರ್ಯಕರ್ತರು, ಬೆಂಬಲಿಗರು ಕಿತ್ತಾಡಿದ ಪರಿ ನೋಡಿದರೆ ನಗು ಬರುತ್ತೆ. ಹಾರವನ್ನು ಕೆಳಗೆ ಇಳಿಸಿದ್ದೇ ತಡ ಜನರು ಸೇಬು ಹಣ್ಣಿಗಾಗಿ ಕಿತ್ತಾಡಿದ್ದಾರೆ. ಕೆಲವರಂತೂ ಸ್ಥಳದಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆಲ್ಲಾ ಹತ್ತಿ ಕಸರತ್ತು ಮಾಡಿ ಸೇಬನ್ನು ಕಿತ್ತು ಮನೆಗೊಯ್ದಿದ್ದಾರೆ.
Advertisement
ಸೋಮವಾರ ಗೋಕಾಕ್‍ನಲ್ಲಿ ಕೂಡ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ನಾಮಪತ್ರ ಸಲ್ಲಿಕೆ ರ‍್ಯಾಲಿಯಲ್ಲಿ ಕಾರ್ಯಕರ್ತರು ಬೃಹತ್ ಸೇಬಿನ ಹಣ್ಣಿನ ಹಾರವನ್ನು ಹಾಕಿದ್ದರು. ಅಲ್ಲದೆ ಚಿಕ್ಕಬಳ್ಳಾಪುರದಲ್ಲಿ ಅಂಜನಪ್ಪ ಪರ ಡಿ.ಕೆ ಶಿವಕುಮಾರ್ ಅವರು ಪ್ರಚಾರಕ್ಕೆ ಬಂದಾಗಲೂ ಅವರಿಗೆ ಕಾರ್ಯಕರ್ತರು ಸೇಬಿನ ಹಾರ ಹಾಕಿ ಪ್ರೀತಿ ಮೆರೆದಿದ್ದರು.
https://www.youtube.com/watch?v=0y6Bp5XdGVY