ಬಾಗಲಕೋಟೆ: ರಾಜ್ಯದ ಗಮನ ಸೆಳೆದಿದ್ದ ವೋಟರ್ ಐಡಿ ಗೋಲ್ಮಾಲ್ ಈಗ ಮತ್ತೆ ಸದ್ದು ಮಾಡಿದೆ. ಬಾಗಲಕೋಟೆ (Bagalkote) ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬಸವೇಶ್ವರ ಸಂಘದ ವಸತಿ ನಿಲಯದ ವಿದ್ಯಾರ್ಥಿಗಳನ್ನು (Student) ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ (Congress) ಆರೋಪ ಮಾಡಿದೆ.
ಇತ್ತೀಚೆಗೆ ವೋಟರ್ ಐಡಿ (Voter ID) ಗೋಲ್ಮಾಲ್ ಪ್ರಕರಣ ರಾಜ್ಯದ ಗಮನ ಸೆಳೆದಿತ್ತು. ಆ ಪ್ರಕರಣದಲ್ಲಿ ಇಬ್ಬರು ಹಿರಿಯ ಐಎಎಸ್ ಅಧಿಕಾರಗಳ ತಲೆದಂಡ ಸಹ ಆಗಿತ್ತು. ಆದರೆ ಇದೀಗ ಬಾಗಲಕೋಟೆಯಲ್ಲಿ ವೋಟರ್ ಐಡಿ ಗೋಲ್ಮಾಲ್ ಆರೋಪ ಕೇಳಿ ಬರುತ್ತಿದೆ. ಕಳೆದ ತಿಂಗಳಷ್ಟೇ ಜಿಲ್ಲೆಯಾದ್ಯಂತ 68 ಸಾವಿರ ಮತದಾರರನ್ನು ಡಿಲಿಟ್ ಮಾಡಲಾಗಿದೆ. ಅದು ಕಾಂಗ್ರೆಸ್ ಮತದಾರರನ್ನೇ ಉದ್ದೇಶ ಪೂರ್ವಕವಾಗಿ ತೆಗೆದುಹಾಕಲಾಗಿದೆ ಎಂದು ಕೈ ನಾಯಕರು ಆರೋಪಿಸಿದರು.
Advertisement
Advertisement
ಆದರೆ ಇದೀಗ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ 147 ಜನರನ್ನ ಸೇರಿಸಿರಿವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಇದರ ಹಿಂದೆ ಸ್ಥಳೀಯ ಜನಪ್ರತಿನಿಧಿಗಳ ಪ್ರಭಾವ ಇದೆ ಎಂದು ಜಿಲ್ಲಾ ಕಾಂಗ್ರೆಸ್ ಮುಖಂಡರು ತಿಳಿಸಿದರು. ಇದನ್ನೂ ಓದಿ: ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿರ- ಭಕ್ತರಿಗೆ ದರ್ಶನ
Advertisement
Advertisement
147 ವಿದ್ಯಾರ್ಥಿಗಳ ಅರ್ಜಿಯಲ್ಲೂ ಲೀಗಲ್ ಗಾರ್ಡಿಯನ್ ಎಂದು ಹಾಸ್ಟೆಲ್ ವಾರ್ಡನ್ ಪ್ರಕಾಶ್ ತಿಮ್ಮನಗೌಡ ಹೆಸರು ಉಲ್ಲೇಖ ಆಗಿದೆ. ಬಾಗಲಕೋಟೆ ಬಸವೇಶ್ವರ ವಿದ್ಯಾವರ್ಧಕ ಸಂಘದ ಎಂಜಿನಿಯರಿಂಗ್ ಕಾಲೇಜಿಗೆ ಶಾಸಕ ವೀರಣ್ಣ ಚರಂತಿಮಠ ಕಾರ್ಯಾಧ್ಯಕ್ಷ ಆಗಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಗಾಗಿ ವಿದ್ಯಾರ್ಥಿ ಮತಕ್ಕೆ ಪ್ಲಾನ್ ಮಾಡಿದ್ದಾರೆ ಎಂಬುದು ಕೈ ನಾಯಕರ ಆರೋಪವಾಗಿದೆ. ಈ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಕೊರೊನಾ ಆತಂಕದ ಮಧ್ಯೆ ವೈಕುಂಠ ಏಕಾದಶಿ- ಹೊಸ ವರ್ಷದಲ್ಲಿ ದೇವಸ್ಥಾನಕ್ಕೆ ಭಕ್ತಸಾಗರ