ಲಕ್ನೋ: ಸೋನಿಯಾ ಗಾಂಧಿ ಅವರ ನೇತೃತ್ವದ ಕಾಂಗ್ರೆಸ್ ಪಕ್ಷವು ದೇಶಕ್ಕೆ ಮಾರಕ. ಭ್ರಷ್ಟಾಚಾರದ ಬೇರು ಎಂದು ಕಾಂಗ್ರೆಸ್ ವಿರುದ್ಧ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹರಿಹಾಯ್ದಿದ್ದಾರೆ.
Advertisement
ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ರಾಯ್ ಬರೇಲಿಯಲ್ಲಿ ಬಿಜೆಪಿ ಶುಕ್ರವಾರ ಆಯೋಜಿಸಿದ್ದ ಜನ ವಿಶ್ವಾಸ ಯಾತ್ರೆ ಸಮಾರಂಭದಲ್ಲಿ ಯೋಗಿ ಆದಿತ್ಯನಾಥ್, ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ (ಎಸ್‌ಪಿ) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಮಾಜವಾದಿ ಪಕ್ಷ ಆಡಳಿತದಲ್ಲಿದ್ದಾಗ ಗೂಂಡಾಗಿರಿ ನಡೆಯುತ್ತಿತ್ತು: ಅಮಿತ್ ಶಾ
Advertisement
ರಾಯ್ ಬರೇಲಿಯ ಕಾಂಗ್ರೆಸ್‌ನ ಸಾರ್ವಜನಿಕ ಮುಖಂಡರು ಬಿಜೆಪಿಗೆ ಸೇರುತ್ತಿದ್ದು, ಕಾಂಗ್ರೆಸ್ ನೆಲಕಚ್ಚಲಿದೆ. ಕಾಂಗ್ರೆಸ್ ದೇಶಕ್ಕೆ ಸಮಸ್ಯೆಯಾಗಿದೆ. ರಾಯ್ ಬರೇಲಿ ಎಂದಿಗೂ ವಿದೇಶಿ ಆಡಳಿತವನ್ನು ಒಪ್ಪಲ್ಲ. ಭಾರತದಲ್ಲಿ ಭಯೋತ್ಪಾದನೆ, ಅರಾಜಕತೆ ಮತ್ತು ಭ್ರಷ್ಟಾಚಾರದ ಮೂಲ ಕಾಂಗ್ರೆಸ್. ದೇಶದಲ್ಲಿ ಜಾತೀಯತೆ, ಭಾಷಾಭೇದವನ್ನು ಹರಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
Advertisement
Advertisement
ರಾಜ್ಯಕ್ಕೆ ಎಸ್‌ಪಿ ಮತ್ತು ಬಿಎಸ್‌ಪಿ ಕೂಡ ಮಾರಕವಾಗಿವೆ. ಸಮಾಜವಾದಿ ಪಕ್ಷದ ಚಿಹ್ನೆಯಾಗಿರುವ ಸೈಕಲ್ ಹಿಂದೆ ಗೂಂಡಾಗಳು ಕೂತಿರುತ್ತಾರೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ನಮ್ಮ ಸರ್ಕಾರ ಜನರಿಗಾಗಿ ಕೆಲಸ ಮಾಡುತ್ತಿದೆ. ಜನತೆಯ ನಂಬಿಕೆಗಳನ್ನು ಗೌರವಿಸುತ್ತದೆ. ಇದನ್ನು ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ ಮಾಡಲು ಸಾಧ್ಯವೇ? ರಾಮ ಮತ್ತು ಕೃಷ್ಣ ಕಾಲ್ಪನಿಕ ಎಂದು ಹೇಳುವವರು ಮಂದಿರ ಕಟ್ಟಲು ಸಾಧ್ಯವೇ? ರಾಮನ ಭಕ್ತರ ಮೇಲೆ ಗುಂಡು ಹಾರಿಸುವವರು ಮಂದಿರ ಕಟ್ಟಬಹುದೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆ ಮುನ್ಸೂಚನೆ ನೀಡಲು ಹವಾಮಾನ ಇಲಾಖೆಯಿಂದ ಸಾಧ್ಯವಾಗಿಲ್ಲ: ಎಂ.ಕೆ.ಸ್ಟಾಲಿನ್
ಈ ಮೂರು ಪಕ್ಷಗಳು ಭ್ರಷ್ಟಾಚಾರದ ಗುಹೆಗಳು ಎಂದು ಟೀಕಾಪ್ರಹಾರ ನಡೆಸಿದ್ದಾರೆ. ಸೋನಿಯಾ ಗಾಂಧಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರ ರಾಯ್ ಬರೇಲಿ. ಈ ಕ್ಷೇತ್ರದಲ್ಲಿ 834 ಕೋಟಿ ರೂ. ಮೊತ್ತದ 381 ಯೋಜನೆಗಳಿಗೆ ಯೋಗಿ ಆದಿತ್ಯನಾಥ್ ಶಿಲಾನ್ಯಾಸ ನೆರವೇರಿಸಿದ್ದಾರೆ.