ಕೋಲ್ಕತ್ತಾ: ಪಶ್ಚಿಮ ಬಂಗಾಳದ ದುರ್ಗಾಪೂಜೆ ಹಬ್ಬಕ್ಕೆ ಯುನೆಸ್ಕೋ ಬುಧವಾರ ಪಾರಂಪರಿಕ ಸ್ಥಾನಮಾನವನ್ನು ನೀಡಿದೆ.
ಈ ಕುರಿತು ಯುನೆಸ್ಕೋ ಸಂಸ್ಥೆ ಟ್ವಿಟ್ಟರ್‌ನಲ್ಲಿ ದುರ್ಗಾ ದೇವಿ ವಿಗ್ರಹದ ಫೋಟೋವನ್ನು ಹಾಕಿ ‘ಕೋಲ್ಕತ್ತಾದಲ್ಲಿನ ದುರ್ಗಾಪೂಜೆಯನ್ನು ಅಮೂರ್ತ ಪರಂಪರೆಯ ಪಟ್ಟಿಯಲ್ಲಿ ಬರೆಯಲಾಗಿದೆ. ಅಭಿನಂದನೆಗಳು ಭಾರತ’ ಎಂದು ಬರೆದು ಟ್ವೀಟ್ ಮಾಡಿದೆ. ಈ ಹಿನ್ನೆಲೆ ಕೊಲ್ಕತ್ತಾದ ಜನರೆಲ್ಲರೂ ಸಂತೋಷನ್ನು ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಸೆಮಿಕಂಡಕ್ಟರ್ ಉತ್ಪಾದನೆಗೆ 76,000 ಕೋಟಿ – ಕೇಂದ್ರ ಸಂಪುಟ ಅನುಮೋದನೆ
Advertisement
A matter of great pride and joy for every Indian!
Durga Puja highlights the best of our traditions and ethos. And, Kolkata’s Durga Puja is an experience everyone must have. https://t.co/DdRBcTGGs9
— Narendra Modi (@narendramodi) December 15, 2021
Advertisement
ಪ್ರಧಾನಿ ನರೇಂದ್ರ ಮೋದಿ ಅವರು, ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಹೆಮ್ಮೆ ಮತ್ತು ಸಂತೋಷದ ವಿಷಯ ಎಂದು ಯುನೆಸ್ಕೋದ ಟ್ವೀಟ್ ಅನ್ನು ರೀ-ಟ್ವೀಟ್ ಮಾಡಿ ಶ್ಲಾಘಿಸಿದ್ದಾರೆ.
Advertisement
Advertisement
ರಾಜ್ಯ ಪಾರಂಪರಿಕ ಆಯೋಗದ ಅಧ್ಯಕ್ಷ ಸುವಪ್ರಸನ್ನ ಈ ಕುರಿತು ಮಾತನಾಡಿದ್ದು, ದುರ್ಗಾಪೂಜೆ ಉತ್ಸವದ ಬಗ್ಗೆ ಅದರ ವೈಭವದ ಬಗ್ಗೆ ವಿಶ್ವದಾದ್ಯಂತ ಹೆಚ್ಚಿನ ಜನರಿಗೆ ಅರಿವು ಮೂಡಿಸಿದೆ ಎಂದು ಸಂತೋಷವನ್ನು ಹಂಚಿಕೊಂಡಿದ್ದಾರೆ.