ನವದೆಹಲಿ: INDIA ಕೂಟದಲ್ಲಿ ನಾಯಕತ್ವ ಸಮರ ನಡೆಯುತ್ತಿರುವ ಸಮಯದಲ್ಲೇ ಇಂಡಿಕೂಟದ ನಾಯಕತ್ವ ತ್ಯಜಿಸಲು ಕಾಂಗ್ರೆಸ್ ಪಕ್ಷ ಸಜ್ಜಾಗಿ ಇರಬೇಕು ಎಂದು ಮಾಜಿ ಕೇಂದ್ರ ಮಂತ್ರಿ ಮಣಿಶಂಕರ್ ಅಯ್ಯರ್ (Mani Shankar Aiyar) ಸಲಹೆ ನೀಡಿದ್ದಾರೆ.
ಇಂಡಿ ಕೂಟದ ಇನ್ನೊಂದು ಪಕ್ಷ ನಾಯಕತ್ವದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಇಂಡಿ ಕೂಟದ ಪ್ರಮುಖ ಪಕ್ಷವಾಗಿರುವ ಟಿಎಂಸಿಯ ಮಮತಾ ಬ್ಯಾನರ್ಜಿ ಸೇರಿ ಇತರೆ ಪಕ್ಷಗಳ ನಾಯಕರಿಗೆ ಮೈತ್ರಿಕೂಟದ ಚುಕ್ಕಾಣಿ ಹಿಡಿಯುವ ಸಾಮರ್ಥ್ಯವಿದೆ ಎಂದು ಮಣಿಶಂಕರ್ ಅಯ್ಯರ್ ಅಭಿಪ್ರಾಯಪಟ್ಟಿದ್ದಾರೆ.
Advertisement
Advertisement
INDIA ಒಕ್ಕೂಟವನ್ನು ಮುನ್ನಡೆಸುವ ಕುರಿತು ಕಾಂಗ್ರೆಸ್ ಗಂಭೀರವಾಗಿ ಚಿಂತಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಮೈತ್ರಿಕೂಟದ ಬೇರೆ ಪಕ್ಷಗಳು ನಾಯಕತ್ವ ವಹಿಸಬಹುದೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ಮಣಿಶಂಕರ್, ಕಾಂಗ್ರೆಸ್ ನಾಯಕತ್ವದ ವರ್ಗಾವಣೆಗೆ ಚಿಂತನೆ ಮಾಡಬೇಕಿದೆ ಎಂದು ಹೇಳುವ ಮೂಲಕ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ. ಇದನ್ನೂ ಓದಿ: ಡಿಕೆಶಿ ಕೇಸ್‌ನಲ್ಲಿ ಹಿನ್ನಡೆ| ಕ್ರಿಮಿನಲ್ ಪಿತೂರಿ ಒಂದನ್ನೇ ಗಮನಿಸಿ PMLA ಅಡಿ ಕೇಸ್ ದಾಖಲಿಸಬೇಡಿ: ಸಿಬ್ಬಂದಿಗೆ ಇಡಿ ಬಾಸ್ ಸೂಚನೆ
Advertisement
ಲೋಕಸಭೆ ಚುನಾವಣೆ ಬಳಿಕ ನಡೆದ ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ INDIA ಕೂಟದ ಸಾಧನೆ ಅಷ್ಟೇನು ಉತ್ತಮವಾಗಿಲ್ಲ. ಹೀಗಾಗಿ ಕಾಂಗ್ರೆಸ್ ಬಣದ ನಾಯಕತ್ವದ ಬಗ್ಗೆ ಹೆಚ್ಚು ಚಿಂತಿಸದೇ, ಮೈತ್ರಿಕೂಟದ ಸಾಮರ್ಥ್ಯ ಹೆಚ್ಚಿಸುವ ಬಗ್ಗೆ ಕೆಲಸ ಮಾಡಬೇಕು ಎಂದು ಅಯ್ಯರ್ ಸಲಹೆ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ 2012 ರಲ್ಲಿ ಪ್ರಣಬ್ ಮುಖರ್ಜಿ (Pranab Mukherjee) ಅವರನ್ನು ಪ್ರಧಾನಿಯಾಗಿ ನೇಮಿಸಿದ್ದರೆ 2014 ರಲ್ಲಿ ಯುಪಿಎ-3 ಅಧಿಕಾರಕ್ಕೆ ಖಂಡಿತ ಬರುತ್ತಿತ್ತು ಎಂದು ಹೇಳಿದ್ದರು.
Advertisement
2012ರಲ್ಲಿ ಸೋನಿಯಾ ಗಾಂಧಿ (Sonia Gandhi) ಅವರು ಪ್ರಣಬ್‌ರನ್ನು ಕರೆದು ನೀವು ಪ್ರಧಾನಿಯಾಗಬಹುದು ಎಂದು ಆಫರ್ ನೀಡಿದ್ದರು. ಸೋನಿಯಾ ನೀಡಿದ್ದ ಆಫರ್ ನೋಡಿ ನನಗೆ ಅಚ್ಚರಿಯಾಗಿದೆ ಎಂದು ಪ್ರಣಬ್ ಅವರು ನನ್ನ ಬಳಿ ಹೇಳಿದ್ದರು ಎಂದು ತಿಳಿಸಿದ್ದರು.