ವಿಜಯಪುರ: ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ಬರೆದಿದ್ದರಿಂದ ಗೊಂದಲ ಸೃಷ್ಟಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ (MB Patil) ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ರೈತರ ಅಸ್ತಿಯಲ್ಲಿ ವಕ್ಫ್ ಬೋರ್ಡ್ ಸೇರ್ಪಡೆ ವಿಚಾರವಾಗಿ ಯಾರು ಭಯಪಡುವ ವಿಚಾರ ಇಲ್ಲ. ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ಬರೆದಿದ್ದರಿಂದ ಗೊಂದಲ ಸೃಷ್ಟಿಯಾಗಿದೆ. ಹೊನವಾಡ ಗ್ರಾಮದಲ್ಲಿ ಕೇವಲ 10 ಎಕರೆ ಮಾತ್ರ ವಕ್ಫ್ ಆಸ್ತಿ ಇದೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ಮಾಡಿ ಮತ್ತೆ ಮಾತನಾಡುತ್ತೇನೆ ಎಂದು ತಿಳಿಸಿದರು.ಇದನ್ನೂ ಓದಿ: ಸ್ವೀಟಿ ಫ್ಯಾನ್ಸ್‌ಗೆ ಬಿಗ್ ಅಪ್‌ಡೇಟ್- 2 ಸಿನಿಮಾಗಳ ಶೂಟಿಂಗ್ ಮುಗಿಸಿದ ನಟಿ
Advertisement
Advertisement
ವಕ್ಫ್ ಆಸ್ತಿಗಳ ಬಗ್ಗೆ ಜಿಲ್ಲೆಯಲ್ಲಿ ಬಹಳಷ್ಟು ಗೊಂದಲ ಸೃಷ್ಟಿ ಮಾಡಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಈ ವಿಚಾರ ಮಾಧ್ಯಮಗಳಲ್ಲಿ ಬರುತ್ತಿದೆ. ಹೊನವಾಡ ಗ್ರಾಮದಲ್ಲಿ 1200 ಎಕರೆ ರೈತರ ಭೂಮಿ ವಕ್ಫ ಆಗಿದೆ ಎಂದು ಸುದ್ದಿ ಹಬ್ಬಿಸಲಾಗಿದೆ. ಹೊನವಾಡದಲ್ಲಿ ಯಾವುದೇ ರೈತನಿಗೆ ನೋಟಿಸ್ ನೀಡಿಲ್ಲ. ಗೆಜೆಟ್‌ನಲ್ಲಿ ಗೊಂದಲ ಉಂಟಾಗಿ ಈ ರೀತಿಯಾಗಿದೆ. 10 ಎಕರೆ ಮಾತ್ರ ವಕ್ಫ್ ಆಸ್ತಿ ಹೊನವಾಡದಲ್ಲಿದೆ. 124 ನೋಟಿಸ್ ಜಿಲ್ಲೆಯಲ್ಲಿ ನೀಡಲಾಗಿದೆ. 433 ರೈತರಿಗೆ ನೋಟಿಸ್ ನೀಡಲಾಗಿದೆ. ಚಡಚಣ, ಇಂಡಿ ತಹಶೀಲ್ದಾರರ್ ನೋಟಿಸ್ ನೀಡದೇ ಸರ್ವೇ ನಂಬರ್ ಹಾಕಿದ್ದಾರೆ. ಎಸಿ ಅವರು ಈ ಬಗ್ಗೆ ತನಿಖೆ ಮಾಡುತ್ತಾರೆ ಎಂದರು.
Advertisement
ವಿಜಯಪುರದಲ್ಲಿ ಒಟ್ಟು 14,201 ಎಕರೆ ಆಸ್ತಿಯಿದೆ. 12,083 ಎಕರೆಯಲ್ಲಿ 70% ಮುಸ್ಲಿಂರ ಆಸ್ತಿಯಿದೆ. ಹಿಂದೂಗಳಿಗೆ 30% ಜಾಗ ಮಾರಾಟ ಮಾಡಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಯರಗಲ್ ಗ್ರಾಮದಲ್ಲಿ ಸರ್ವೇನಂಬರ್ 138ನಲ್ಲಿ 13 ಎಕರೆ 1974ರಲ್ಲಿ ಗೆಜೆಟ್ ನೋಟಿಪಿಕೇಷನ್ ಮಾಡಲಾಗಿದೆ. ಇದನ್ನ ವಕ್ಫ್ ಮಂಡಳಿಯವರು ಸರಿ ಪಡಿಸುತ್ತಿದ್ದಾರೆ. 1 ಎಕರೆ 36 ಗುಂಟೆಯಿರುವ ಗುರುಲಿಂಗ ವಿರಕ್ತಮಠ ಆಸ್ತಿ ಬಗ್ಗೆ ಮಾಹಿತಿ ತಪ್ಪಾಗಿದೆ. 1029 ಬದಲಾಗಿ 1020 ಆಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಮಾಡಲಾಗಿದೆ. 1974ರ ಮೊದಲು ಏನಾದರೂ ಬದಲಾಗಿದೆ ಎಂದು ಚೆಕ್ ಮಾಡುತ್ತಾರೆ ಎಂದು ತಿಳಿಸಿದರು.ಇದನ್ನೂ ಓದಿ: ಬೇಲೆಕೇರಿ ಅದಿರು ಲೂಟಿಯಾಗಿದ್ದು ಬಿಜೆಪಿ ಟೈಂನಲ್ಲಿ: ಹೊಸ ಬಾಂಬ್ ಸಿಡಿಸಿದ ಹೆಚ್.ಕೆ.ಪಾಟೀಲ್