ಪ್ಲಾಟ್‌ಫಾರ್ಮ್‌, ರೈಲು ಹೆಸರಿನಲ್ಲಿ ಉಂಟಾದ ಗೊಂದಲವೇ ಕಾಲ್ತುಳಿತಕ್ಕೆ ಕಾರಣ: ದೆಹಲಿ ಪೊಲೀಸ್‌

Public TV
2 Min Read
Delhi Railway Station Stampede 1

– ಉನ್ನತಮಟ್ಟದ ಸಮಿತಿಯಿಂದ ತನಿಖೆ ಶುರು

ನವದೆಹಲಿ: ಕೊನೇ ಕ್ಷಣದಲ್ಲಿ ಪ್ಲಾಟ್‌ಫಾರ್ಮ್‌ ಹಾಗೂ ರೈಲು ಹೆಸರಿನಲ್ಲಿ ಉಂಟಾದ ಗೊಂದಲವೇ ಕಾಲ್ತುಳಿತಕ್ಕೆ ಕಾರಣವಾಗಿರಬಹುದು ಎಂದು ಹಿರಿಯ ದೆಹಲಿ ಪೊಲೀಸ್‌ (Delhi Police) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನವದೆಹಲಿ ರೈಲು ನಿಲ್ದಾಣದ (Delhi Railway Station) ಪ್ಲಾಟ್‌ಫಾರ್ಮ್ ಸಂಖ್ಯೆ 13 ಮತ್ತು 14 ಜನದಟ್ಟಣೆಯಿಂದ ಕೂಡಿತ್ತು. ಅನೇಕ ಜನರು ಎರಡು ರೈಲುಗಳನ್ನು ಹತ್ತಲು ಕಾಯುತ್ತಿದ್ದರು. ಮಾಗ್ಧ್ ಎಕ್ಸ್‌ಪ್ರೆಸ್‌ ಮತ್ತು ಜಮ್ಮು ಕಡೆಗೆ ಹೋಗುವ ಇನ್ನೊಂದು ರೈಲು ವಿಳಂಬವಾಯಿತು. ಈ ಮಧ್ಯೆ, ಮಹಾ ಕುಂಭಕ್ಕಾಗಿ ವಿಶೇಷ ರೈಲು, ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್‌, ರಾತ್ರಿ 10:10ಕ್ಕೆ ಪ್ಲಾಟ್‌ಫಾರ್ಮ್ ಸಂಖ್ಯೆ 14 ರಿಂದ ಹೊರಡಬೇಕಿತ್ತು. ಪ್ರಯಾಗ್‌ರಾಜ್‌ಗೆ ರೈಲು (Prayagraj Express Train) ಹೋಗುವ ಸಮಯ ಹತ್ತಿರವಾಗುತ್ತಿದ್ದಂತೆ, ಹೆಚ್ಚು ಹೆಚ್ಚು ಜನರು ಪ್ಲಾಟ್‌ಫಾರ್ಮ್‌ಗೆ ಧಾವಿಸಲು ಪ್ರಾರಂಭಿಸಿದರು. ಇದು ಜನದಟ್ಟಣೆಯನ್ನು ಹೆಚ್ಚಿಸಿತು ಎಂದು ಅಧಿಕಾರಿ ಹೇಳಿದ್ದಾರೆ.

dehli Railway Station Stampede

ಪ್ಲಾರ್ಟ್‌ಫಾರ್ಮ್‌ನಲ್ಲಿ ಗೊಂದಲ:
ಪ್ಲಾಟ್‌ಫಾರ್ಮ್ 16ಕ್ಕೆ ಪ್ರಯಾಗ್‌ರಾಜ್ ವಿಶೇಷ ಆಗಮಿಸಲಿದೆ ಎಂಬ ರೈಲ್ವೆ ಸಿಬ್ಬಂದಿಯ ಘೋಷಣೆ ಜನರ ಗೊಂದಲಕ್ಕೆ ಕಾರಣವಾಯಿತು. ಇದರಿಂದ ಕಾಲ್ತುಳಿತ ಸಂಭವಿಸಿದೆ ಎಂದು ದೆಹಲಿ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಶಾಶ್ವತ ರಸ್ತೆಗಾಗಿ ವೈಟ್ ಟ್ಯಾಪಿಂಗ್ ಯೋಜನೆ: ಡಿಕೆಶಿ

ಏಕೆಂದರೆ ಪ್ರಯಾಗರಾಜ್ ಎಕ್ಸ್‌ಪ್ರೆಸ್ ವಿಶೇಷ ರೈಲು ಆಗಲೇ ಪ್ಲಾಟ್‌ಫಾರ್ಮ್ 14 ರಲ್ಲಿತ್ತು. ಈ ವೇಳೆ 16ನೇ ಪ್ಲಾಟ್‌ಫಾರ್ಮ್‌ಗೆ ತಲುಪಲಿದೆ ಎಂಬ ಘೋಷಣೆಯೊಂದು ಹೊರಬಿದ್ದಿತು. ಪ್ಲಾಟ್‌ಫಾರ್ಮ್ 14 ರಲ್ಲಿ ತಮ್ಮ ರೈಲನ್ನು ತಲುಪಲು ಸಾಧ್ಯವಾಗದ ಜನರು 16ಕ್ಕೆ ಆಗಮಿಸುತ್ತಿದೆ ಎಂದು ಭಾವಿಸಿ ಅತ್ತ ನುಗ್ಗಲು ಪ್ರಾರಂಭಿಸಿದ್ರು. ಇದರಿಂದಾಗಿ ಕಾಲ್ತುಳಿತ ಸಂಭವಿಸಿರಬಹುದು ಎಂದು ಹೇಳಿದ್ದಾರೆ.

new delhi railway station stampede

ಘಟನೆಯ ಕುರಿತು ತನಿಖೆ ನಡೆಸಲು ರೈಲ್ವೆಯು ಇಬ್ಬರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ಕೂಡ ರಚಿಸಿದೆ. ಉತ್ತರ ರೈಲ್ವೆಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ನರಸಿಂಗ್ ದೇವು ಮತ್ತು ಉತ್ತರ ರೈಲ್ವೆಯ ಪ್ರಧಾನ ಮುಖ್ಯ ಭದ್ರತಾ ಆಯುಕ್ತ ಪಂಕಜ್ ಗಂಗ್ವಾರ್ ಸಮಿತಿಯ ಭಾಗವಾಗಿದ್ದಾರೆ. ತನಿಖೆ ಆರಂಭಿಸಿರುವ ಸಮಿತಿಯು, ನವದೆಹಲಿ ರೈಲು ನಿಲ್ದಾಣದ ಎಲ್ಲಾ ವಿಡಿಯೋ ತುಣುಕನ್ನು ಪಡೆದುಕೊಳ್ಳಲು ಆದೇಶ ನೀಡಿದೆ. ಇದನ್ನೂ ಓದಿ: ಮುಂಬೈ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ – ಇಬ್ಬರು ಕಾರ್ಮಿಕರು ಸಜೀವ ದಹನ

ನಿನ್ನೆ ರಾತ್ರಿ ನವದೆಹಲಿ ರೈಲು ನಿಲ್ದಾಣದಲ್ಲಿ ಎರಡು ರೈಲುಗಳು ವಿಳಂಬವಾಗಿ ಬಂದ ಕಾರಣ ಮತ್ತು ಮಹಾ ಕುಂಭಮೇಳಕ್ಕೆ ತೆರಳಲು ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ ವಿಳಂಬವಾದ ಪರಿಣಾಮ ಕಾಲ್ತುಳಿತ ಉಂಟಾಯಿತು. ಪರಿಣಾಮ 11 ಮಹಿಳೆಯರು ಮತ್ತು ಐದು ಮಕ್ಕಳು ಸೇರಿದಂತೆ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: 422 ವಸ್ತುಗಳನ್ನು ಗುರುತಿಸಿ, ನೊಬೆಲ್ ವರ್ಲ್ಡ್ ರೆಕಾರ್ಡ್ ಪುಟ ಸೇರಿದ 9 ತಿಂಗಳ ಐರಾ

Share This Article