Cricket

ಟೀಂ ಇಂಡಿಯಾ ಮೆಂಟರ್ ಸ್ಥಾನ ಸಿಗುತ್ತಿದ್ದಂತೆ ಧೋನಿಗೆ ಸ್ವಹಿತಾಸಕ್ತಿ ಸಂಕಷ್ಟ

Published

on

Share this

ಮುಂಬೈ: ಭಾರತ ಟಿ20 ವಿಶ್ವಕಪ್ ತಂಡದ ಮೆಂಟರ್ ಆಗಿ ಆಯ್ಕೆಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿರುದ್ಧ ಸ್ವಹಿತಾಸಕ್ತಿ ದೂರು ದಾಖಲಾಗಿದೆ.

ಬಿಸಿಸಿಐ ಟಿ20 ವಿಶ್ವಕಪ್‍ಗಾಗಿ ಭಾರತ ತಂಡವನ್ನು ಆಯ್ಕೆ ಮಾಡುವ ಜೊತೆ ಮೆಂಟರ್ ಆಗಿ ಧೋನಿಯನ್ನು ಆಯ್ಕೆ ಮಾಡಲಾಗಿತ್ತು. ಈ ಬಗ್ಗೆ ಆಕ್ಷೇಪ ಎತ್ತಿರುವ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಸದಸ್ಯ ಸಂಜೀವ್ ಗುಪ್ತಾ, ಬಿಸಿಸಿಐ ಅಪೆಕ್ಸ್ ಕೌನ್ಸಿಲ್‍ಗೆ ಧೋನಿ ನೇಮಕಾತಿ ಸ್ವಹಿತಾಸಕ್ತಿ ಸಂಘರ್ಷ ನಿಯಮಾವಳಿಯ ಉಲ್ಲಂಘನೆಯಾಗಿದೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ. ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಆಡಿದ ಸಿಎಂ

ಲೋಧಾ ಸಮಿತಿಯ ಸ್ವಹಿತಾಸಕ್ತಿ ಸಂಘರ್ಷ ನಿಯಮದ ಪ್ರಕಾರ ಒಬ್ಬರು ಒಂದೇ ಹುದ್ದೆ ಹೊಂದಿರಬೇಕು. ಆದರೆ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿದ್ದಾರೆ. ಹೀಗಿದ್ದಾಗ ಟಿ20 ವಿಶ್ವಕಪ್ ತಂಡಕ್ಕೆ ಮೆಂಟರ್ ಸ್ಥಾನ ನೀಡಿದ್ದಲ್ಲಿ ಅವರು 2 ಹುದ್ದೆಯನ್ನು ಹೊಂದಿದಂತಾಗುತ್ತದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ಬಿಗ್ ರಿಲೀಫ್

ಬಿಸಿಸಿಐ ಮೂಲಗಳ ಪ್ರಕಾರ ಈ ಬಗ್ಗೆ ಮುಂದಿನ ದಿನಗಳಲ್ಲಿ ಪರಿಶೀಲಿಸಲಾಗುವುದು ಎಂದು ತಿಳಿಸಿದೆ. ಧೋನಿ ಮೆಂಟರ್ ಆಗಿದ್ದರು ಆಡುವ ಬಳಗದ ಆಯ್ಕೆಯಲ್ಲಿ ಅವರ ಪಾತ್ರ ಇರುವುದಿಲ್ಲ ಮತ್ತು ಈ ಬಾರಿಯ ಐಪಿಎಲ್ ಬಳಿಕ ಅವರ ನಿರ್ಧಾರ ಸ್ಪಷ್ಟವಾಗಲಿದೆ. ಹಾಗಾಗಿ ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿಯಾಗಿದೆ.

Click to comment

Leave a Reply

Your email address will not be published. Required fields are marked *

Advertisement
Advertisement