ChamarajanagarDistrictsKarnatakaLatestMain Post

ಶವಕ್ಕಾಗಿ ಪತ್ನಿ, ಪ್ರೇಯಸಿಯ ನಡುವೆ ಕಿತ್ತಾಟ – ಇಕ್ಕಟ್ಟಿಗೆ ಸಿಲುಕಿದ ಪೊಲೀಸರು

Advertisements

ಚಾಮರಾಜನಗರ: ಮೃತ ವ್ಯಕ್ತಿಯ ಶವಕ್ಕಾಗಿ ಪತ್ನಿ ಹಾಗೂ ಪ್ರೇಯಸಿ ಇಬ್ಬರೂ ಕಿತ್ತಾಟ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ.

ಅನಾರೋಗ್ಯದಿಂದ ಮೃತಪಟ್ಟಿದ್ದ ದೊಡ್ಡತುಪ್ಪೂರು ಗ್ರಾಮದ ವಕೀಲ ಪಾಪಣ್ಣಶೆಟ್ಟಿ ಪತ್ನಿ ನಿಮಿತಾಳಿಂದ ದೂರವಿದ್ದು, ಪ್ರೇಯಸಿ ಮಹದೇವಮ್ಮನೊಂದಿಗೆ ವಾಸವಿದ್ದ. ಪತಿ ಪಾಪಣ್ಣ ಶೆಟ್ಟಿ, ತನ್ನ ತಂದೆಯಿಂದ ಆಸ್ತಿ ಬರೆದುಕೊಂಡು ಮೋಸ ಮಾಡಿದ್ದಾನೆ ಎಂದು ನಿಮಿತಾ ನ್ಯಾಯಾಲಯದ ಮೆಟ್ಟಿಲೇರಿದ್ದಳು. ಈ ನಡುವೆ ಪಾಪಣ್ಣಶೆಟ್ಟಿ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇದನ್ನೂ ಓದಿ: ನರ್ಸ್ ಎಡವಟ್ಟು – ತಪ್ಪಾದ ಚುಚ್ಚು ಮದ್ದು ನೀಡಿದ್ದರಿಂದ ರೋಗಿ ಸಾವು

ಪಾಪಣ್ಣಶೆಟ್ಟಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನಿಮಿತಾ, ಇದು ಅಸ್ವಾಭಾವಿಕ ಸಾವು ಎಂದು ದೂರು ನೀಡಿದ್ದಾರೆ. ಆಕೆಯ ದೂರಿನ ಮೇರೆಗೆ ಶವಪರೀಕ್ಷೆ ನಡೆಸಲಾಗಿತ್ತು. ಶವಪರೀಕ್ಷೆಯ ಬಳಿಕ ನಿಮಿತಾ ಗಂಡನ ಶವವನ್ನು ತನಗೆ ನೀಡುವಂತೆ ಒತ್ತಾಯಿಸಿದ್ದು, ಇದಕ್ಕೆ ಮಹದೇವಮ್ಮ ಆಕ್ಷೇಪಿಸಿದ್ದಾರೆ. ಇದನ್ನೂ ಓದಿ: Well done, #TeamCongress! – ಕರ್ನಾಟಕ ಕಾಂಗ್ರೆಸ್‌ ಬೆನ್ನು ತಟ್ಟಿದ ರಾಹುಲ್‌ ಗಾಂಧಿ, ಸುರ್ಜೇವಾಲಾ

ಇವರಿಬ್ಬರ ಕಿತ್ತಾಟದಿಂದ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದು, ಇಬ್ಬರಿಗೂ ನ್ಯಾಯಾಲಯದ ಮೊರೆ ಹೋಗುವಂತೆ ಪೊಲೀಸರು ಸೂಚಿಸಿದ್ದಾರೆ. ನಂತರ ಪಾಪಣ್ಣಶೆಟ್ಟಿ ಶವವನ್ನು ಶವಾಗಾರಕ್ಕೆ ರವಾನಿಸಿದ್ದಾರೆ.

Leave a Reply

Your email address will not be published.

Back to top button