ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ‘ಜೈಲರ್ 2’ನಲ್ಲಿ (Jailer 2) ನಟಿಸುತ್ತಾರಾ ಎಂಬ ಸುದ್ದಿಗೆ ಗುಡ್ ನ್ಯೂಸ್ ಸಿಕ್ಕಿದೆ. ಸುದ್ದಿಗೋಷ್ಠಿವೊಂದರಲ್ಲಿ ‘ಜೈಲರ್ 2’ನಲ್ಲಿ ನಟಿಸೋದಾಗಿ ಶಿವಣ್ಣ (Shivanna) ಅಧಿಕೃತವಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ಶ್ರೀದೇವಿ ಬಯೋಪಿಕ್‌ನಲ್ಲಿ ನಟಿಸಲು ಸಿದ್ಧ ಎಂದ ಪೂಜಾ ಹೆಗ್ಡೆ
ಹೈದರಾಬಾದ್‌ನಲ್ಲಿ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ‘ಜೈಲರ್ 2’ನಲ್ಲಿ ನಟಿಸುತ್ತೀರಾ ಎಂದು ಶಿವಣ್ಣಗೆ ವರದಿಗಾರರೊಬ್ಬರು ಕೇಳಿದ್ದಾರೆ. ಅದಕ್ಕೆ ನಟ ಮಾತನಾಡಿ, ನಾನು ‘ಜೈಲರ್ 2’ ಸಿನಿಮಾದ ಭಾಗವಾಗಲಿದ್ದೇನೆ. ಈ ಕುರಿತು ನಿರ್ದೇಶಕ ನೆಲ್ಸನ್ ನನ್ನ ಬಳಿ ಮಾತನಾಡಿದ್ದಾರೆ. ಈಗಾಗಲೇ ಇದರ ಶೂಟಿಂಗ್ ಶುರುವಾಗಿದೆ. ಆದರೆ ನನ್ನ ಭಾಗದ ಶೂಟಿಂಗ್ ಶುರು ಆಗಿಲ್ಲ. ‘ಜೈಲರ್’ನಲ್ಲಿ ನಾನು ನಟಿಸಿದ ಪಾತ್ರಕ್ಕೆ ಅಷ್ಟೊಂದು ಮಹತ್ವ ಸಿಗುತ್ತೆ ಎಂದು ನಾನು ಅಂದುಕೊಂಡಿರಲಿಲ್ಲ. ಇದನ್ನೂ ಓದಿ:RCB ಅಂದ್ರೆ ಜೀವ, ನಮ್ಮ ಪ್ರಾಣ: ಶಿವಣ್ಣ ಗುಣಗಾನ
ನಾನು ಈ ಸಿನಿಮಾ ಮಾಡಲು ರಜನಿಕಾಂತ್ (Rajinikanth) ಅವರೇ ಕಾರಣ. ಅವರು ನನ್ನ ಕುಟುಂಬವಿದ್ದಂತೆ. ಚಿಕ್ಕ ವಯಸ್ಸಿನಿಂದ ಅವರನ್ನು ನೋಡುತ್ತಾ ಬೆಳೆದಿದ್ದೇವೆ. ಜೈಲರ್‌ನಲ್ಲಿ ನಟಿಸಲು ಕೇಳಿದಾಗ ಕಥೆಯನ್ನು ಕೇಳದೇ ಸಿನಿಮಾ ಒಪ್ಪಿಕೊಂಡೆ. ರಜನಿಕಾಂತ್ ಸಿನಿಮಾದಲ್ಲಿ ಒಂದು ಕ್ಷಣ ಕಾಣಿಸಿಕೊಳ್ಳುವ ಪಾತ್ರವಾದರೂ ನಟಿಸಲು ಸಿದ್ಧನಿದ್ದೆ ಎಂದಿದ್ದಾರೆ. ಜೈಲರ್‌ನಲ್ಲಿ ನನ್ನನ್ನು ಅತ್ಯುತ್ತಮವಾಗಿ ತೋರಿಸಿದ ಛಾಯಾಗ್ರಾಹಕರಿಗೆ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್‌ಗೆ ನನ್ನ ಧನ್ಯವಾದಗಳು ಎಂದಿದ್ದಾರೆ.
ಈ ವೇಳೆ, ‘ಜೈಲರ್ 2’ನಲ್ಲಿ ಬಾಲಯ್ಯ ಅವರು ನಟಿಸುವ ಬಗ್ಗೆ ಶಿವಣ್ಣಗೆ ಕೇಳಲಾಗಿದೆ. ನನಗೆ ಇದರ ಬಗ್ಗೆ ತಿಳಿದಿಲ್ಲ. ಒಂದು ವೇಳೆ ಬಾಲಯ್ಯ ನಟಿಸೋದಾದ್ರೆ, ಅವರೊಂದಿಗೆ ತೆರೆಹಂಚಿಕೊಳ್ಳಲು ಖುಷಿಯಿದೆ ಎಂದಿದ್ದಾರೆ. ಸದ್ಯ ನಟನ ‘ಜೈಲರ್ 2’ ಅಪ್‌ಡೇಟ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.