ಹಿಂದಿ ಕಿರುತೆರೆಯ ಫೇಮಸ್ ಜೋಡಿ ತೇಜಸ್ವಿ ಪ್ರಕಾಶ್ (Tejasswi Prakash) ಮತ್ತು ಕರಣ್ ಕುಂದ್ರಾ (Karan Kundrra) ಮದುವೆಗೆ (Wedding) ಸಜ್ಜಾಗಿದ್ದಾರೆ. ಕಳೆದ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಈ ಜೋಡಿ ಇದೀಗ ಮದುವೆ ಬಗ್ಗೆ ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟಿದ್ದಾರೆ. ಇದನ್ನೂ ಓದಿ:ಮಗನ ಮುದ್ದಾದ ಫೋಟೋ ಹಂಚಿಕೊಂಡ ‘ಬಿಗ್ ಬಾಸ್’ ಖ್ಯಾತಿಯ ಕವಿತಾ ದಂಪತಿ
ಇತ್ತೀಚೆಗೆ ತಾಯಿಯೊಂದಿಗೆ ‘ಸೆಲೆಬ್ರಿಟಿ ಮಾಸ್ಟರ್ ಶೆಫ್ ಶೋ’ಗೆ ತೇಜಸ್ವಿ ಆಗಮಿಸಿದ್ದರು. ಈ ವೇಳೆ, ನಿರೂಪಕಿ ಮಗಳ ಮದುವೆ ಯಾವಾಗ? ಎಂದು ತೇಜಸ್ವಿ ತಾಯಿಗೆ ಕೇಳಿದ್ದಾರೆ. ಆಗ ಈ ವರ್ಷದ ಅಂತ್ಯದಲ್ಲಿ ಮದುವೆ ಆಗಲಿದ್ದಾರೆ ಎಂದು ತಿಳಿಸಿದ್ದಾರೆ. ಆಗ ನಿರೂಪಕಿ ಅಭಿನಂದನೆಗಳನ್ನು ತಿಳಿಸಿದ್ದಾರೆ. ಅದಕ್ಕೆ ನಟಿ ತೇಜಸ್ವಿ ನಾಚಿ ನೀರಾಗಿದ್ದಾರೆ.
ಇನ್ನೂ ಈ ಹಿಂದೆ ತೇಜಸ್ವಿ ಅವರು ಕರಣ್ ಕುಂದ್ರಾ ಜೊತೆ ಕೋರ್ಟ್ ಮ್ಯಾರೇಜ್ ಆಗೋದಾಗಿ ಹೇಳಿದ್ದರು. ಸರಳ ಮದುವೆ ಬಗ್ಗೆ ಮಾತನಾಡಿದ್ದರು. ಇದನ್ನೂ ಓದಿ:ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ ಚಿತ್ರದ ಸಾಂಗ್ ರಿಲೀಸ್
ಇನ್ನೂ 2021ರ ‘ಬಿಗ್ ಬಾಸ್ ಹಿಂದಿ 15’ರಲ್ಲಿ ತೇಜಸ್ವಿ ಮತ್ತು ಕರಣ್ ಕುಂದ್ರಾ ಸ್ಪರ್ಧಿಗಳಾಗಿದ್ದರು. ಈ ಶೋನಲ್ಲಿ ಇಬ್ಬರಿಗೂ ಪ್ರೇಮಾಂಕುರವಾಯಿತು. ಈಗ ಕಳೆದ 4 ವರ್ಷಗಳಿಂದ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ. ಅಂದಹಾಗೆ, ಈ ಶೋನಲ್ಲಿ ತೇಜಸ್ವಿ ವಿನ್ನರ್ ಆಗಿದ್ದಾರೆ.