Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ರಾಯ್‌ – 1 ಗಂಟೆ ಐಟಿ ವಿಚಾರಣೆ ಬಳಿಕ ಆತ್ಮಹತ್ಯೆ; ಆಗಿದ್ದೇನು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ರಾಯ್‌ – 1 ಗಂಟೆ ಐಟಿ ವಿಚಾರಣೆ ಬಳಿಕ ಆತ್ಮಹತ್ಯೆ; ಆಗಿದ್ದೇನು?

Bengaluru City

ದೇಶದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ರಾಯ್‌ – 1 ಗಂಟೆ ಐಟಿ ವಿಚಾರಣೆ ಬಳಿಕ ಆತ್ಮಹತ್ಯೆ; ಆಗಿದ್ದೇನು?

Public TV
Last updated: January 30, 2026 6:44 pm
Public TV
Share
3 Min Read
CJ Roy 2
SHARE

– ಅಧಿಕಾರಿಗಳ ಎದುರಲ್ಲೇ ಎದೆಗೆ ಗುಂಡು ಹಾರಿಸಿಕೊಂಡ ಉದ್ಯಮಿ
– ಸಿಜೆ ರಾಯ್ ಬಳಿ ಗನ್ ಇದ್ರೂ ವಶಕ್ಕೆ ಪಡೆಯದ ಬಗ್ಗೆ ಅನುಮಾನ

ಬೆಂಗಳೂರು: ಕೇರಳ ಮೂಲದ ಖ್ಯಾತ ಉದ್ಯಮಿ ಕಾನ್ಫಿಡೆಂಟ್‌ ಗ್ರೂಪ್‌ ಸಿಇಓ ಸಿ.ಜೆ ರಾಯ್ (Confident Group CEO CJ Roy) ಅವರು ಶುಕ್ರವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆಯಿಂದ ಪದೇ ಪದೇ ಆದ ದಾಳಿಗೆ ಹೆದರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ನಗರದಲ್ಲಿ ಇವರ ಹೆಸರಿನಲ್ಲಿ ಹಲವು ದೊಡ್ಡ ಹೋಟೆಲ್‌ಗಳು (Hotel) ಮತ್ತು ರೆಸಾರ್ಟ್‌ಗಳು ಇದ್ದವು. ಈ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು
ಸಿ.ಜೆ. ರಾಯ್ ಅವರು ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷ ಮತ್ತು ಸಂಸ್ಥಾಪಕರಾಗಿದ್ದರು. ಅವರು ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದು, ಹಲವು ಕ್ಷೇತ್ರಗಳಲ್ಲಿ ತಮ್ಮ ವ್ಯಾಪಾರ ಸಾಮ್ರಾಜ್ಯವನ್ನ ವಿಸ್ತರಿಸಿದ್ದಾರೆ. ಅಲ್ಲದೇ, ಅವರು ಸ್ಲೋವಾಕ್ ಗಣರಾಜ್ಯದ ಗೌರವ ಕಾನ್ಸಲ್ ಆಗಿಯೂ ಕರ್ನಾಟಕ ಮತ್ತು ಕೇರಳದಲ್ಲಿ (Kerala) ಸೇವೆ ಸಲ್ಲಿಸಿದ್ದರು.

CJ Roy

ಕಾರುಗಳ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ರಾಯ್, ದುಬೈ ಮತ್ತು ಭಾರತದಲ್ಲಿ ಹಲವು ದುಬಾರಿ ಐಷಾರಾಮಿ ಮತ್ತು ಸ್ಪೋರ್ಟ್ಸ್ ಕಾರುಗಳನ್ನೂ (Sports Car) ಹೊಂದಿದ್ದರು. ರೋಲ್ಸ್ ರಾಯ್ಸ್‌ಗಳು, ಲ್ಯಾಂಬೋರ್ಗಿನಿಗಳು, ಮತ್ತು ಬಗ್ಗಾಟಿ ವೆರಾನ್‌ನಂತಹ ಕಾರುಗಳು ಅವರ ಗ್ಯಾರೇಜ್‌ನಲ್ಲಿವೆ ಎಂದು ತಿಳಿದುಬಂದಿದೆ.

11 ಸಿನಿಮಾ ನಿರ್ಮಾಣ
ಕಾನ್ಫಿಡೆಂಟ್ ಗ್ರೂಪ್ ಕೇವಲ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಡಾ. ರಾಯ್ ಅವರ ಬಹುಮುಖ ಪ್ರತಿಭೆ ಮತ್ತು ಆಸಕ್ತಿಗಳು ಸಂಸ್ಥೆಯನ್ನ ವಿವಿಧ ಕ್ಷೇತ್ರಗಳಲ್ಲಿ ವಿಸ್ತರಿಸಲು ಕಾರಣವಾಗಿವೆ. ಮಲಯಾಳಂ ಮತ್ತು ಕನ್ನಡದಲ್ಲಿ 11 ಚಿತ್ರಗಳನ್ನು ನಿರ್ಮಿಸಿದ್ದಾರೆ. ‘ಮರಕ್ಕಾರ್’ ಎಂಬ ಅತಿ ದೊಡ್ಡ ಬಜೆಟ್‌ನ ಮಲಯಾಳಂ ಚಿತ್ರವನ್ನು ಸಹ ನಿರ್ಮಿಸಿದ್ದಾರೆ. 2006 ರಲ್ಲಿ, ‘ಐಡಿಯಾ ಸ್ಟಾರ್ ಸಿಂಗರ್’ ಎಂಬ ಜನಪ್ರಿಯ ಟಿವಿ ಕಾರ್ಯಕ್ರಮಕ್ಕೆ ಹಣಕಾಸು ಒದಗಿಸುವ ಮೂಲಕ ಕಾನ್ಫಿಡೆಂಟ್ ಗ್ರೂಪ್ ಅನ್ನು ಪ್ರಚಾರ ಮಾಡುವ ಅವರ ಆಲೋಚನೆ ಯಶಸ್ವಿಯಾಗಿತ್ತು.

CJ Roy

ಆತ್ಮಹತ್ಯೆಗೆ ಕಾರಣವೇನು?
ಸಿ.ಜೆ.ರಾಯ್​​ ಅವರು ಕಾನ್ಫಿಡೆಂಟ್ ಗ್ರೂಪ್​ ಎಂಬ ರಿಯಲ್​ ಎಸ್ಟೇಟ್​ ಕಂಪನಿಯನ್ನ ಹುಟ್ಟುಹಾಕಿದ್ದರು. ಪದೇ ಪದೇ ಐಟಿ ಇಲಾಖೆ ಅಧಿಕಾರಿಗಳ ದಾಳಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಇಂದು ಕೂಡ IT ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಪಿಸ್ತೂಲ್​​ನಿಂದ ಎದೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

IT ಇಲಾಖೆ ಅಧಿಕಾರಿಗಳು ಇಂದು ಬೆಳಗ್ಗೆ ಕೂಡ ದಾಳಿ ಮಾಡಿದ್ದರು. ಎರಡು ಇನ್ನೋವಾ ಕಾರುಗಳಲ್ಲಿ 8 ಜನರ ಅಧಿಕಾರಿಗಳ ತಂಡ ಬಂದಿತ್ತು. ಮಧ್ಯಾಹ್ನ ಕಚೇರಿಗೆ ಬಂದಿದ್ದ ಉದ್ಯಮಿ ಸಿ.ಜೆ.ರಾಯ್, 1 ಗಂಟೆ ಐಟಿ ವಿಚಾರಣೆ ಎದುರಿಸಿದ್ದಾರೆ. ಅಧಿಕಾರಿಗಳಿಗೆ ಕೆಲ ದಾಖಲೆ ಸಹ ಕೊಟ್ಟಿದ್ದಾರೆ. ಮತ್ತಷ್ಟು ದಾಖಲೆ ತರಲು ರೂಮ್‌ಗೆ ಹೋಗಿದ್ದಾರೆ. ಈ ವೇಳೆ ಪಿಸ್ತೂಲ್​ನಿಂದ ಎದೆಗೆ ಗುಂಡು ಹಾರಿಸಿಕೊಂಡಿದ್ದಾರೆ. ಒಂದು ಸುತ್ತು ಗುಂಡು ಹಾರಿಸಿಕೊಳ್ಳುತ್ತಿದ್ದಂತೆ ಗನ್‌ ಕಿತ್ತುಕೊಂಡಿರುವ ಐಟಿ ಅಧಿಕಾರಿಗಳು, ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಸಾವನ್ನಪ್ಪಿದ್ದಾರೆ ರಾಯ್‌. ಹೆಚ್‌ಎಸ್‌ಆರ್ ಲೇಔಟ್ ನಾರಾಯಣ ಆಸ್ಪತ್ರೆಗೆ ಮೃತದೇಹ ಶಿಫ್ಟ್ ಮಾಡಲಾಗಿದೆ.

income

ಘಟನೆ ಬೆನ್ನಲ್ಲೇ ಹಲವು ಅನುಮಾನಗಳು ಮೂಡಿವೆ. ಸಹಜವಾಗಿ ಐಟಿ ಅಧಿಕಾರಿಗಳು ದಾಳಿ ನಡೆಸುವ ವೇಳೆ ಅಗತ್ಯವಿರುವ ಎಲ್ಲಾ ವಸ್ತುಗಳನ್ನ ವಶಕ್ಕೆ ಪಡೆಯುತ್ತಾರೆ. ಆದ್ರೆ ರಾಯ್‌ ಬಳಿಯಿದ್ದ ಗನ್‌ ವಶಕ್ಕೆ ಪಡೆಯದಿರುವ ಬಗ್ಗೆ ಅನುಮಾನ ಹುಟ್ಟುಹಾಕಿದೆ.

ಘಟನೆ ಬಳಿಕ ಬೆಂಗಳೂರು ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ಅವರು ಐಟಿ ಅಧಿಕಾರಿಗಳ ವಿಚಾರಣೆ ನಡೆಸಿದ್ದಾರೆ. ನಂತರ ಅಧಿಕಾರಿಗಳು ದಾಳಿ ವೇಳೆ ಸಿಕ್ಕ ದಾಖಲೆಗಳನ್ನ ವಶಕ್ಕೆ ಪಡೆದು ತೆರಳಿದ್ದಾರೆ. ಮುಂದಿನ ತನಿಖೆ ಪ್ರಗತಿಯಲ್ಲಿದೆ.

TAGGED:bengaluruCJ RoyConfident Groupincome taxit raidಐಟಿ ದಾಳಿಐಟಿ ವಿಚಾರಣೆಕಾನ್ಫಿಡೆಂಟ್ ಗ್ರೂಪ್ಬೆಂಗಳೂರುಸಿ.ಜೆ ರಾಯ್‌
Share This Article
Facebook Whatsapp Whatsapp Telegram

Cinema news

Hansika Motwani Sohael Khaturiya
ಉದ್ಯಮಿ‌ ಸೊಹೇಲ್‌ ಜೊತೆಗಿನ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯಹಾಡಿದ ‘ಬಿಂದಾಸ್‌’ ನಟಿ
Cinema Latest South cinema Top Stories
d53acfe5 1562 41db 9d81 d5b390041c73
ಪ್ರಿಯಕರ ಫರ್ಮಾನ್‌ ಖಾನ್‌ ಜೊತೆ ಕುಂಭಮೇಳದ ವೈರಲ್‌ ತಾರೆ ಮೊನಾಲಿಸಾ ಮದುವೆ
Cinema Latest Main Post
Monalisa Viral Video
ಮದುವೆಗೆ ಬಲವಂತ ಆರೋಪ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ‘ಕುಂಭಮೇಳ ಚೆಲುವೆ’ ಮೊನಾಲಿಸಾ
Cinema Latest Main Post
Yelahanka House Theft Arrest
ಸಿನಿಮೀಯ ಶೈಲಿಯಲ್ಲಿ ಮನೆ ಕಳ್ಳತನ – 3.5 ಕೋಟಿ ಮೌಲ್ಯದ ಚಿನ್ನಾಭರಣ ಸೀಜ್
Bengaluru City Cinema Crime Karnataka Latest Top Stories

You Might Also Like

Terror Funding Case Shabir Shah
Court

ಉಗ್ರರಿಗೆ ಹಣಕಾಸು ನೆರವು ಕೇಸ್ – ಪ್ರತ್ಯೇಕತಾವಾದಿ ನಾಯಕ ಶಬ್ಬೀರ್ ಶಾಗೆ ಜಾಮೀನು

Public TV
By Public TV
14 minutes ago
Ballari Accident
Bellary

ಭೀಕರ ರಸ್ತೆ ಅಪಘಾತ – ಅಜ್ಜ, ಮೊಮ್ಮಗಳು ದಾರುಣ ಸಾವು

Public TV
By Public TV
29 minutes ago
WORK FROM HOME 2
Bengaluru City

ಐಟಿ ಬಿಟಿ ವಲಯಕ್ಕೂ ಗ್ಯಾಸ್‌ ಅಭಾವದ ಬಿಸಿ – ಪರಿಸ್ಥಿತಿ ಕೈಮೀರಿದ್ರೇ ವರ್ಕ್ ಫ್ರಂ ಹೋಮ್‌ಗೆ ಚಿಂತನೆ?

Public TV
By Public TV
42 minutes ago
LPG
Bengaluru City

ಬೆಂಗಳೂರಲ್ಲಿ LPG ದಾಸ್ತಾನು ಕೊರತೆ ಇಲ್ಲ: ಡಿಸಿ ಸ್ಪಷ್ಟನೆ

Public TV
By Public TV
1 hour ago
HDK 1
Bengaluru City

ಹೆಚ್‌ಡಿಕೆ ವಿರುದ್ಧ ಲೋಕಾಯುಕ್ತ ಎಡಿಜಿಪಿ ಎಫ್‌ಐಆರ್‌ – ಸಮಸ್ಯೆ ಇತ್ಯರ್ಥಕ್ಕೆ ಮಧ್ಯಸ್ಥಿಕೆದಾರರ ನೇಮಕಕ್ಕೆ ಹೈಕೋರ್ಟ್‌ ಸೂಚನೆ

Public TV
By Public TV
1 hour ago
Parappana Agrahara Jail
Belgaum

ಸನ್ನಡತೆ ಆಧಾರದ ಮೇಲೆ ರಾಜ್ಯದ 9 ಜೈಲಿನಿಂದ 31 ಕೈದಿಗಳ ಬಿಡುಗಡೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?