ಸಾಮಾನ್ಯವಾಗಿ ಪಿಜ್ಜಾ ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲಿಯೂ ಇಂದಿನ ಪೀಳಿಗೆಯವರಿಗೆ ಪಿಜ್ಜಾ ಫೇವರೆಟ್ ಫುಡ್ ಎಂದೇ ಹೇಳಬಹುದು. ಪಿಜ್ಜಾದಲ್ಲಿ ಹಲವಾರು ರೀತಿಯ ರುಚಿಕರವಾದ ಪಿಜ್ಜಾ ಇರುವುದನ್ನು ನಾವು ನೋಡಿದ್ದೇವೆ. ಆದರೆ ಎಲ್ಲವೂ ಅಗಲದ ಶೇಪ್‍ನಲ್ಲಿಯೇ ಇರುತ್ತದೆ. ಆದರೆ ವ್ಯಕ್ತಿಯೊಬ್ಬ ಕೋನ್‍ನಲ್ಲಿ ಪಿಜ್ಜಾ ತಯಾರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.
ಹೌದು, ಲಾರೆನ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಕೇವಲ 40 ಸೆಕೆಂಡ್ ಇರುವ ಈ ವೀಡಿಯೋವನ್ನು ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ವೀಡಿಯೋದಲ್ಲಿ ವ್ಯಕ್ತಿ, ಪಿಜ್ಜಾ ಹಿಟ್ಟಿನಿಂದ ಕೋನ್ ಅನ್ನು ತಯಾರಿಸಿ, ಅದಕ್ಕೆ ಕೆಂಪು ಸಾಸ್ ಮತ್ತು ಚೀಸ್ ನನ್ನು ತುಂಬಿಸಿ ತಯಾರಿಸಿದರೆ, ಮತ್ತೊಂದು ಪಿಜ್ಜಾ ಕೋನ್‍ಗೆ ತರಕಾರಿಗಳನ್ನು ತುಂಬಿಸುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಕಲ್ಲಂಗಡಿ ಹಣ್ಣಿನ ಪಿಜ್ಜಾ ವೀಡಿಯೋ ವೈರಲ್
ಒಟ್ಟಾರೆ ವಿಭಿನ್ನವಾಗಿ ಪಿಜ್ಜಾ ತಯಾರಿಸಿರುವ ವೀಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಕಾಮೆಂಟ್‍ಗಳ ಸುರಿ ಮಳೆಯೇ ಹರಿದು ಬರುತ್ತಿದೆ. ಇದನ್ನೂ ಓದಿ: ರುಚಿರುಚಿಯಾದ ಬ್ರೆಡ್ ಪಿಜ್ಜಾ ಮಾಡೋ ಸರಳ ವಿಧಾನ
every couple of years someone tries to make the pizza cone a thing. i don’t think they’re ever going to really pull off making the pizza cone a thing pic.twitter.com/i2j3jQk1vR
— lauren (@ActNormalOrElse) August 30, 2021