ವಿಜಯಪುರ: ಬಸ್‍ನಲ್ಲಿ ಪ್ರಯಾಣಿಸುವಾಗ ಮನುಷ್ಯರಿಗೆ ಹಾಗೂ ಇತರೆ ವಸ್ತುಗಳಿಗೆ ಬಸ್ ಟಿಕೆಟ್ ಕೊಡುವುದನ್ನ ನೋಡಿರ್ತೀರಿ. ಆದ್ರೆ ವಿಜಯಪುರ ನಗರ ಸಾರಿಗೆ ನಿರ್ವಾಹಕಿಯೊಬ್ಬರು ಬೆಕ್ಕಿಗೆ ಟಿಕೆಟ್ ಕೊಟ್ಟಿದ್ದಾರೆ.
ಹೌದು. ನಗರದ ಮೌಲಾಲಿ ಎಂಬವರು ರೈಲು ನಿಲ್ದಾಣದಿಂದ ಚೀಲದಲ್ಲಿ ಬೆಕ್ಕು ತೆಗೆದುಕೊಂಡು ನಗರ ಸಾರಿಗೆ ಬಸ್ ಹತ್ತಿದ್ದಾರೆ. ಟಿಕೆಟ್ ಪಡೆಯೋವಾಗ ಬೆಕ್ಕು ಚೀರಿದೆ. ಈ ವೇಳೆ ಬಸ್ಸಿನ ನಿರ್ವಾಹಕಿ ಬೆಕ್ಕಿಗೆ ಟಿಕೆಟ್ ತೆಗೆದುಕೊಳ್ಳಬೇಕು ಅಂತ ಹೇಳಿದ್ದಾರೆ. ಇದನ್ನೂ ಓದಿ: KSRTC ಬಸ್‍ಗಳಲ್ಲಿ ಇನ್ಮುಂದೆ ನಾಯಿಗಳಿಗೂ ಟಿಕೆಟ್!
Advertisement
Advertisement
ನಿರ್ವಾಹಕಿಯ ಮಾತು ಕೇಳಿದ ಇತರ ಪ್ರಯಾಣಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಿರ್ವಾಹಕಿ ಬೆಕ್ಕಿಗೂ ಸಹಿತ ಪೂರ್ಣ ಟಿಕೆಟ್ ಕೊಟ್ಟಿದ್ದಾರೆ. ನಗರದ ಗಾಂಧಿ ಚೌಕದವರೆಗೆ ಬೆಕ್ಕಿಗೂ 6 ರೂ. ಟಿಕೆಟ್ ನೀಡಿದ್ದಾರೆ. ಬಸ್ ನಲ್ಲಿ ಕೆಲಕಾಲ ಬೆಕ್ಕಿಗೂ ಬಸ್ ಚಾರ್ಜ್ ಅಂತ ಪ್ರಯಾಣಿಕರು ಮಾತನಾಡಿಕೊಂಡಿದ್ದಾರೆ.
Advertisement
ಕೆಲವರು ಬೆಕ್ಕಿಗೆ ಯಾಕೆ ಬಸ್ ಚಾರ್ಜ್ ಕೊಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಮನುಷ್ಯರಿಗೆ, ಇತರೆ ವಸ್ತುಗಳಿಗೆ ಟಿಕೆಟ್ ತೆಗೆದುಕೊಳ್ಳುವುದು ಸಾಮಾನ್ಯ. ಆದ್ರೆ ಸಾಕುಪ್ರಾಣಿ ಬೆಕ್ಕಿಗೂ ಬಸ್ ಚಾರ್ಜ್ ಕೊಡಬೇಕಲ್ಲಾ ಎಂದು ಪ್ರಯಾಣಿಕರು ಚರ್ಚಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಸಾಕು ಪ್ರಾಣಿ, ಪಕ್ಷಿಗಳ ಪ್ರಯಾಣಕ್ಕೆ KSRTC ಗ್ರೀನ್ ಸಿಗ್ನಲ್!
Advertisement
ಆದ್ರೆ ಕೆಎಸ್‍ಆರ್‍ಟಿಸಿ ಬಸ್ ಗಳಲ್ಲಿ ಸಾಕುಪ್ರಾಣಿಗಳನ್ನ ಜೊತೆಯಲ್ಲಿ ಕೊಂಡೊಯ್ಯಲು ಟಿಕೆಟ್ ಪಡೆಯಲೇಬೇಕು. ಸಾಕುಪ್ರಾಣಿಗಳನ್ನ ಜೊತೆಯಲ್ಲಿ ಕೊಂಡೊಯ್ಯಲು ಗ್ರೀನ್ ಸಿಗ್ನಲ್ ನೀಡಿದ್ದ ಸರ್ಕಾರ ಮನುಷ್ಯರಿಗೆ ಪಡೆಯುವ ಬೆಲೆಯಷ್ಟೇ ಟಿಕೆಟ್ ಪಡೆಯಬೇಕೆಂದು ನಿಯಮ ಜಾರಿಗೆ ತಂದಿತ್ತು.