ಬೆಂಗಳೂರು: ಲಕ್ಷಾಂತರ ರೂಪಾಯಿ, ಕೋಟ್ಯಂತರ ರೂಪಾಯಿ ಮೋಸ ಮಾಡಿದವರ ವಿರುದ್ಧ ನ್ಯಾಯಲಯದ ಮೆಟ್ಟಿಲು ಏರಿ ನ್ಯಾಯಲಯಗಳು ನೀಡಿದ್ದ ತೀರ್ಪನ್ನು ನೋಡಿದ್ವಿ. ಆದರೆ ಇಲ್ಲೊಬ್ಬ ಪ್ರಯಾಣಿಕ 1 ರೂ. ಚಿಲ್ಲರೆ ಹಣ ಕೊಡಲಿಲ್ಲ ಎಂದು ಬಿಎಂಟಿಸಿ (BMTC) ವಿರುದ್ಧ ಗ್ರಾಹಕರ ನ್ಯಾಯಲಯದ ಮೆಟ್ಟಿಲೇರುವ ಮೂಲಕ ಇಲಾಖೆ ಮತ್ತು ಸಿಬ್ಬಂದಿಗೆ ದಂಡದ ಬಿಸಿ ಮುಟ್ಟಿಸಿದ್ದಾರೆ.
2019ರ ಸೆ. 11ರಂದು ವಕೀಲ ರಮೇಶ್ ನಾಯಕ್ ಎಂಬುವವರು ಬಿಎಂಟಿಸಿ ವೋಲ್ವೋ ಬಸ್ಸಿನಲ್ಲಿ ಶಾಂತಿನಗರದಿಂದ ಮೆಜೆಸ್ಟಿಕ್‍ಗೆ ತೆರಳುತ್ತಿದ್ದರು. ಬಸ್‍ನಲ್ಲಿದ್ದಂತಹ (Bus) ಲೇಡಿ ಕಂಡಕ್ಟರ್ 29 ರೂ.ಗಳ ಟಿಕೆಟ್ ನೀಡಿದ್ದಾರೆ. ಈ ವೇಳೆ ಪ್ರಯಾಣಿಕ (Passenger) 30 ರೂ. ನೀಡಿದ್ದರು. ಕೆಳಗೆ ಇಳಿಯುವ ಸಂದರ್ಭದಲ್ಲಿ 1 ರೂ. ಚಿಲ್ಲರೆ ಕೇಳಿದಾಗ ಕಂಡಕ್ಟರ್ (Conductor) ಚಿಲ್ಲರೆ ಇಲ್ಲ ಎಂದು ಹೇಳಿ ಉಳಿದ ಒಂದು ರೂ. ಹಣವನ್ನು ನೀಡಿಲ್ಲ.
Advertisement
Advertisement
ಈ ವೇಳೆ ಚಿಲ್ಲರೆ ನೀಡದ ಕಂಡಕ್ಟರ್ ವಿರುದ್ಧ ರಮೇಶ್ ನಾಯಕ್ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಜಿಲ್ಲಾ ಗ್ರಾಹಕರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ಮೂಲಕ, ತಮಗೆ 1 ರೂ. ಚಿಲ್ಲರೇ ಕೊಡದ ಬಿಎಂಟಿಸಿ ಕಂಡಕ್ಟರ್‌ನಿಂದ 1,5000 ರೂ. ಪರಿಹಾರ ಕೊಡಿಸುವಂತೆ ಮನವಿ ಮಾಡಿದರು. ಈ ಅರ್ಜಿಯ ವಿಚಾರಣೆ ನಡೆಸಿದಂತಹ ಜಿಲ್ಲಾ ಗ್ರಾಹಕರ ನ್ಯಾಯಾಲಯ ಅರ್ಜಿದಾರರಿಗೆ 1 ರೂ. ಮರುಪಾವತಿಸುವಂತೆ, ಅಲ್ಲದೇ ಸೇವಾ ನ್ಯೂನ್ಯತೆಗಾಗಿ 2 ಸಾವಿರ ರೂ. ಪರಿಹಾರ, ಅಲ್ಲದೇ ದಾವೆಯ ವೆಚ್ಚಕ್ಕಾಗಿ 1 ಸಾವಿರ ರೂ.ಗಳನ್ನು 45 ದಿನಗಳ ಒಳಗಾಗಿ ಪಾವತಿಸುವಂತೆ ನಿಗಮಕ್ಕೆ ನಿರ್ದೇಶನ ನೀಡಿದೆ. ಇದನ್ನೂ ಓದಿ: ಪೊಲೀಸ್ ಇಲಾಖೆಯಿಂದ BSNL ಗೆ ಗುಡ್ ಬೈ – ಜಿಯೋಗೆ ಹಾಯ್
Advertisement
Advertisement
ಘಟನೆ ಬಗ್ಗೆ ಬಿಎಂಟಿಸಿ ಸಹ ಪ್ರತಿಕ್ರಿಯೆ ನೀಡಿದ್ದು, ಚಿಲ್ಲರೆ ಇಲ್ಲದ ಕಾರಣ ಘಟನೆ ನಡೆದಿರಬಹುದು. ಈಗಾಗಲೇ ನ್ಯಾಯಾಲಯ ಈ ಸಂಬಂಧ ಇಲಾಖೆಗೆ ಸೂಚನೆ ನೀಡಿದೆ. ಜೊತೆಗೆ ಘಟನೆಗೆ ಕಾರಣ ಏನು ಎಂಬುವುದನ್ನು ತಿಳಿಯಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಚಿಲ್ಲರೆ ಸಮಸ್ಯೆಯಿಂದ ಇಂತಹ ಘಟನೆಗಳು ನಡೆಯುತ್ತವೆ. ಕೆಲವೊಮ್ಮೆ ಪ್ರಯಾಣಿಕರು ಕೂಡ ಸಹಕಾರ ನೀಡಬೇಕಾಗುತ್ತದೆ ಎಂದು ಬಿಎಂಟಿಸಿ ಎಂಡಿ ಸತ್ಯವತಿ ತಿಳಿಸಿದ್ದಾರೆ. ಇದನ್ನೂ ಓದಿ: ಕಲಬುರಗಿಯಲ್ಲಿ ಕಳ್ಳತನವಾದ ಬಸ್ ತೆಲಂಗಾಣದಲ್ಲಿ ಪತ್ತೆ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k