ಕಲಬುರಗಿ: ಚಲಿಸುತ್ತಿದ್ದ ಸಾರಿಗೆ ಬಸ್ನಲ್ಲೇ (Bus) ಹೃದಯಾಘಾತದಿಂದ (Heart Attack) ಕಂಡಕ್ಟರ್ ಸಾವನ್ನಪ್ಪಿದ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಫರಹತಾಬಾದ್ ಬಳಿ ನಡೆದಿದೆ.
ಮೃತರನ್ನು ಯಡ್ರಾಮಿ ತಾಲೂಕಿನ ಜವಳಗಾ ಗ್ರಾಮದ ಕಾಶೀನಾಥ್ (50) ಎಂದು ಗುರುತಿಸಲಾಗಿದೆ. ಕಲಬುರಗಿಯಿಂದ ಜೇವರ್ಗಿಗೆ ಬಸ್ ಹೊರಟಿತ್ತು. ಈ ವೇಳೆ ಫರಹತಾಬಾದ್ ಬಳಿ ಏಕಾಏಕಿಯಾಗಿ ಅವರು ಕುಸಿದು ಬಿದ್ದದ್ದಾರೆ. ತಕ್ಷಣ ಚಾಲಕ ಹಾಘೂ ಪ್ರಯಾಣಿಕರು ಸೇರಿ ಬಸ್ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಭದ್ರಾ ಅಭಯಾರಣ್ಯದಲ್ಲಿ ಆಹಾರ ಸಿಗದೆ ಸಲಗ ಸಾವು
ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: Myanmar Earthquake | ಭೀಕರ ಭೂಕಂಪಕ್ಕೆ 1,600ಕ್ಕೂ ಹೆಚ್ಚು ಮಂದಿ ಬಲಿ – 3,000ಕ್ಕೂ ಅಧಿಕ ಮಂದಿಗೆ ಗಾಯ