Kalaburagi | ಆಧಾರ್ ಕಾರ್ಡ್ ಕೇಳಿದ್ದಕ್ಕೆ ಮಹಿಳೆಯ ಸಂಬಂಧಿಕರಿಂದ ಕಂಡಕ್ಟರ್ ಮೇಲೆ ಹಲ್ಲೆ

Public TV
1 Min Read
Kalaburagi KKRTC Conductor Attack Aadhar Card

ಕಲಬುರಗಿ: ಆಧಾರ್ ಕಾರ್ಡ್ (Aadhar Card) ಕೇಳಿದ್ದಕ್ಕೆ ಮಹಿಳೆಯ ಸಂಬಂಧಿಕರು ಸರ್ಕಾರಿ ಬಸ್ ಕಂಡಕ್ಟರ್ (Conductor) ಮೇಲೆ ಹಲ್ಲೆ ಮಾಡಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಎರಡು ದಿನಗಳ ಹಿಂದೆ ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.

ಕೆಕೆಆರ್‌ಟಿಸಿ (KKRTC) ಕಂಡಕ್ಟರ್ ಅರ್ಜುನ್ ಕಟ್ಟಿಮನಿ ಹಲ್ಲೆಗೆ ಒಳಗಾಗಿದ್ದಾರೆ. ಯಾದಗಿರಿಯಿಂದ ಕಲಬುರಗಿಗೆ ಬಸ್ ಬರುವಾಗ, ವಾಡಿಯ ರಾವೂರ್ ಬಳಿ ಮಹಿಳೆಯೊಬ್ಬರು ಬಸ್ ಹತ್ತಿದ್ದು, ಬೇರೆಯವರ ಆಧಾರ್ ಕಾರ್ಡ್ ತೋರಿಸಿ ಟೆಕೆಟ್ ಪಡೆಯಲು ಮುಂದಾಗಿದ್ದಾರೆ. ಇದನ್ನು ಕಂಡ ನಿರ್ವಾಹಕ ನಿಮ್ಮ ಆಧಾರ್ ಕಾರ್ಡ್ ಕೊಡಿ, ಇದು ಬೇರೆಯವರ ಆಧಾರ್ ಕಾರ್ಡ್ ಎಂದು ಹೇಳಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದನ್ನೂ ಓದಿ: ಹಾಸನದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಸಾವು – ಒಂದು ತಿಂಗಳ ಅಂತರದಲ್ಲಿ 17 ಮಂದಿ ಬಲಿ

ಈ ವೇಳೆ ಮಹಿಳೆ ತನ್ನ ಸಂಬಂಧಿಕರಿಗೆ ಕರೆ ಮಾಡಿದ್ದಾಳೆ. ವಾಡಿ ಪಟ್ಟಣ ಆಗಮಿಸುತ್ತಿದ್ದಂತೆ ಮಹಿಳೆಯ ಸಂಬಂಧಿಕರು ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಕೆಲಕಾಲ ಪ್ರಜ್ಞೆ ತಪ್ಪಿದ ನಿರ್ವಾಹಕ ಬಳಿಕ ಎಚ್ಚೆತ್ತುಕೊಂಡು ಬಳಿಕ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್‌ ಡ್ಯಾಂ ಐತಿಹಾಸಿಕ ದಾಖಲೆಗೆ 1 ಅಡಿಯಷ್ಟೇ ಬಾಕಿ

Share This Article