ಭೋಪಾಲ್: ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರ ನೇತೃತ್ವದಲ್ಲಿ ನಡೆದ ಸಾಮೂಹಿಕ ವಿವಾಹ ಮಹೋತ್ಸವ ಸಮಾರಂಭದಲ್ಲಿ ವಧು-ವರರಿಗೆ ಕಾಂಡೋಮ್‌ಗಳು, ಗರ್ಭನಿರೋಧಕ ಮಾತ್ರೆಗಳು (Contraceptive Pills) ಮತ್ತು ಮೇಕಪ್ ಬಾಕ್ಸ್‌ಗಳಿರುವ ಕಿಟ್‌ಗಳನ್ನು ನೀಡಲಾಗಿದೆ.
ಹೌದು. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕನ್ಯಾ ವಿವಾಹ/ನಿಕಾಹ್ ಯೋಜನೆ ಅಡಿಯಲ್ಲಿ ಆರ್ಥಿಕ ದುರ್ಬಲ ವರ್ಗದ ಮಹಿಳೆಯರಿಗಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ (Wedding Event) ಆಯೋಜಿಸಿದ್ದರು. ಈ ವೇಳೆ ನೂತನ ವಧುವರರಿಗೆ ವಿತರಿಸಲಾದ ಕಿಟ್‌ನಲ್ಲಿ ಕಾಂಡೋಮ್ ಹಾಗೂ ಗರ್ಭನಿರೋಧಕ ಮಾತ್ರೆಗಳೂ ಇತ್ತು. ಆದ್ರೆ ಈ ಬಗ್ಗೆ ಕೇಳಿದಾಗ ಜಿಲ್ಲಾ ಹಿರಿಯ ಅಧಿಕಾರಿ ಭೂರಸಿಂಗ್ ರಾವತ್, ಕುಟುಂಬ ಯೋಜನೆಗೆ ಸಂಬಂಧಿಸಿದ ಜಾಗೃತಿ ಕಾರ್ಯಕ್ರಮದ ಭಾಗವಾಗಿ ಆರೋಗ್ಯಾಧಿಕಾರಿಗಳು ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳನ್ನ ವಿತರಿಸಿರಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಂಡ ಕಂಡಲ್ಲಿ ಉಗೀಬೇಡಿ – ಎಂಜಲು ರಸ ಮಾರಿಯೇ ತಿಂಗಳಿಗೆ 40 ಲಕ್ಷ ಸಂಪಾದಿಸ್ತಾಳೆ ಈ ಮಹಿಳೆ
ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳನ್ನು ವಿತರಿಸಿರೋದಕ್ಕೆ ನಾವು ಜವಾಬ್ದಾರರಲ್ಲ. ಇದು ಆರೋಗ್ಯ ಇಲಾಖೆ ಕುಟುಂಬ ಯೋಜನೆಯ ಜಾಗೃತಿ ಕಾರ್ಯಕ್ರಮ ಆಗಿರಬಹುದು. ನಾವು ನೇರವಾಗಿ 49 ಸಾವಿರ ರೂ.ಗಳನ್ನ ಫಲಾನುಭವಿಗಳ ಖಾತೆಗೆ ವರ್ಗಾಯಿಸುತ್ತೇವೆ. ಜೊತೆಗೆ ಅವರ ಆಹಾರ, ನೀರು ಹಾಗೂ 6 ಸಾವಿರ ಮೌಲ್ಯದ ಟೆಂಟ್ ವಸತಿ ಕಲ್ಪಿಸುವ ವ್ಯವಸ್ಥೆ ಜವಾಬ್ದಾರಿ ತೆಗೆದುಕೊಂಡಿದ್ದೇವೆ. ಆದ್ರೆ ವಧು-ವರರಿಗೆ ವಿತರಿಸಿದ ಮೇಕಪ್ ಬಾಕ್ಸ್ಗಳಲ್ಲಿ ಏನಿತ್ತು ಎಂಬುದು ನಮಗೆ ಗೊತ್ತೇ ಇಲ್ಲ ಎಂದು ರಾವತ್ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಕಾಮೋತ್ತೇಜಕ ಮಾತ್ರೆ ಸೇವಿಸಿ 24 ಗಂಟೆ ನಿರಂತರ ಸೆಕ್ಸ್, 50ರ ವೃದ್ಧ ಸೀದಾ ಆಸ್ಪತ್ರೆಗೆ – ಆಮೇಲೆ ಏನಾಯ್ತು?
2006ರ ಏಪ್ರಿಲ್‌ನಲ್ಲಿ ಮಧ್ಯಪ್ರದೇಶ ಸರ್ಕಾರವು ಕನ್ಯಾ ವಿವಾಹ/ನಿಹಾಕ್ ಯೋಜನೆಯನ್ನ ಆರಂಭಿಸಿತು. ಆರ್ಥಿಕ ದುರ್ಬಲ ವರ್ಗದ ಮಹಿಳೆಯರ ವಿವಾಹಗಳಿಗೆ ಹಣಕಾಸು ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆ ಅಡಿಯಲ್ಲಿ ಸರ್ಕಾರವು ವಧುವಿನ ಕುಟುಂಬಕ್ಕೆ 55 ಸಾವಿರ ರೂ. ನೆರವು ನೀಡುತ್ತದೆ.