ವಾಷಿಂಗ್ಟನ್: ಅನೇಕ ದೇಶಗಳಲ್ಲಿ ಸರ್ಕಾರ ಕಾಂಡೋಮ್ಗಳನ್ನು ಉಚಿತವಾಗಿ ಪೂರೈಸುತ್ತದೆ. ಇನ್ನೂ ಅನೇಕ ದೇಶಗಳಲ್ಲಿ ಗರ್ಭಪಾತವನ್ನು ನಿಷೇಧಿಸಲಾಗಿದೆ. ಈ ವಿಚಾರವಾಗಿ ವಿವಿಧ ರೀತಿಯ ಕಾನೂನುಗಳಿವೆ. ಆದರೆ ಇತ್ತೀಚೆಗೆ ವೆನೆಜುವೆಲಾದಲ್ಲಿ ಕಾಂಡೋಮ್ ಬೆಲೆ ವಿಶ್ವಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಈ ದೇಶದಲ್ಲಿ ಒಂದು ಪ್ಯಾಕ್ ಕಾಂಡೋಮ್ ಬೆಲೆ ಸುಮಾರು 60,000 ರೂಪಾಯಿ ಎಂದು ತಿಳಿದು ಬಂದಿದೆ.
Advertisement
ಕಾಂಡೋಮ್ಗಳಲ್ಲಿ ವಿವಿಧ ರೀತಿಯ ಹೆಸರಾಂತ ದುಬಾರಿ ಬ್ರ್ಯಾಂಡ್ಗಳಿದೆ. ಎಂದಾದರೂ ಕಾಂಡೋಮ್ ಬೆಲೆ 60,000 ರೂಪಾಯಿ ಎಂದು ನೀವು ಕೇಳಿದ್ದೀರಾ? ಆದರೆ ವೆನೆಜುವೆಲಾದ ಸಾಮಾನ್ಯ ಕಾಂಡೋಮ್ಗಳ ಬೆಲೆಯು ಪ್ರತಿಷ್ಠಿತ ಬ್ರ್ಯಾಂಡ್ನ ಟಿವಿ ಬೆಲೆಗಿಂತಲೂ ಹೆಚ್ಚಾಗಿದೆ. ಕಾಂಡೋಮ್ಗೆ ನೀಡುವ ಬೆಲೆಗೆ ಟಿವಿಯನ್ನೇ ಖರೀದಿಸಬಹುದು.
Advertisement
Advertisement
ವೆನೆಜುವೆಲಾದ ಅಂಗಡಿಯೊಂದರಲ್ಲಿ ಒಂದು ಪ್ಯಾಕ್ ಕಾಂಡೋಮ್ 60,000 ರೂ.ಗೆ ಮಾರಾಟವಾಗುತ್ತಿದೆ. ಪ್ರಪಂಚಾದ್ಯಂತ ಈ ಸುದ್ದಿ ಜನರನ್ನು ದಿಗ್ಭ್ರಮೆಗೊಳಿಸಿದೆ. ಇದೀಗ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ. ಇದನ್ನೂ ಓದಿ: ಮನೆಗೆ ಕರೆಸಿ ನವಜೋಡಿಯನ್ನು ಹತ್ಯೆ ಮಾಡಿದ ನವವಧು ಪೋಷಕರು
Advertisement
ವೆನೆಜುವೆಲಾ ಲ್ಯಾಟಿನ್ ಅಮೆರಿಕದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದ್ದು, ಈ ದೇಶದಲ್ಲಿ ಗರ್ಭಪಾತವನ್ನು ನಿಷೇಧಿಸಲಾಗಿದೆ. ಯುಎನ್ನ ಸ್ಟೇಟ್ ಆಫ್ ವರ್ಲ್ಡ್ ಪಾಪ್ಯುಲೇಶನ್ ರಿಪೋರ್ಟ್ 2015ರ ಪ್ರಕಾರ, ವೆನೆಜುವೆಲಾ ಅತಿ ಹೆಚ್ಚು ಅಪ್ರಾಪ್ತರು ಗರ್ಭಧಾರಣೆ ಮಾಡಿರುವ ಪ್ರಕರಣಗಳು ವರದಿಯಾಗಿದೆ.
ವೆನೆಜುವೆಲಾದಂತಹ ಇತರೆ ದೇಶಗಳಲ್ಲಿ ಅಪ್ರಾಪ್ತರು ಹೆಚ್ಚಾಗಿ ಗರ್ಭಧಾರಣೆ ಮಾಡುತ್ತಿದ್ದಾರೆ. ಇದೇ ವೇಳೆ ಗರ್ಭಪಾತ ಮಾಡಿಸುವುದರ ಮೇಲೆ ನಿಷೇಧ ಹೇರಲಾಗಿದ್ದು, ಕಾಂಡೋಮ್ಗಳ ಬೆಲೆಯನ್ನು ಗಗನಕ್ಕೇರಿಸಲಾಗಿದೆ. ಇದರಿಂದ ಆ ದೇಶದ ಜನ ಸಾಮಾನ್ಯರು ತಲೆ ಮೇಲೆ ಕೈ ಹೊತ್ತುಕೊಂಡಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಸರ್ಕಾರ ಸರಿಯಾದ ಕ್ರಮ ಕೈಗೊಂಡಿಲ್ಲ. ಇದನ್ನೂ ಓದಿ: ಮೊದಲಬಾರಿಗೆ ಟ್ವಿಟ್ಟರ್ ಉದ್ಯೋಗಿಗಳ ಜೊತೆ ಮಾತನಾಡಲಿದ್ದಾರೆ ಮಸ್ಕ್