– 11 ಕಾಂಡೋಮ್‍ಗಳನ್ನು ನುಂಗಿದ್ದ ಚಾಲಾಕಿ
– 2 ಕಾಂಡೋಮ್ ಗುಪ್ತಾಂಗದಲ್ಲಿ ಸಾಗಾಟ
ಮುಂಬೈ: ಮಹಿಳೆ ಕಾಂಡೋಮ್ ಮೂಲಕ ಗುಪ್ತಾಂಗದಲ್ಲಿ ಸುಮಾರು 1.55 ಕೋಟಿ ರೂ. ಮೌಲ್ಯದ 312 ಗ್ರಾಂ. ಡ್ರಗ್ಸ್ ಸಾಗಿಸುತ್ತಿದ್ದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಮಹಿಳೆ ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟಲಿಜೆನ್ಸ್(ಡಿಆರ್‍ಐ) ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದು, ಮಾಹಿಳೆಯನ್ನು ರಿಬೆರಾ ಅನೆಜ್ ಡೆಲಿಸಿಯಾ(55) ಎಂದು ಗುರುತಿಸಲಾಗಿದೆ. ಮಹಿಳೆ ಬೊಲಿವಿಯಾ ಮೂಲದವಳಾಗಿದ್ದಾಳೆ. ಈಕೆ ಬ್ರೆಜಿಲ್ ನ ಸಾವೊ ಪಾಲೊದಿಂದ ಇಥಿಯೋಪಿಯಾದ ಅಡಿಸ್ ಬಾಬಾಗೆ ತೆರಳುತ್ತಿದ್ದಳು.
Advertisement
Advertisement
ವರದಿಯ ಪ್ರಕಾರ ಮಹಿಳೆ ತನ್ನ ಗುಪ್ತಾಂಗದಲ್ಲಿ 2 ಕಾಂಡೋಮ್‍ಗಳು ಹಾಗೂ ದೇಹದಲ್ಲಿ 11 ಕಾಂಡೋಮ್‍ಗಳ ಮೂಲಕ ಸುಮಾರು 312 ಗ್ರಾಂ. ಹೈ ಕ್ವಾಲಿಟಿಯ ಕೋಕೇನ್ ಸಾಗಿಸುತ್ತಿದ್ದಳು. ಸೆಮಿಲಿಕ್ವಿಡ್ ರೂಪದಲ್ಲಿ ಡ್ರಗ್ಸ್ ತುಂಬಿದ 11 ಕಾಂಡೋಮ್‍ಗಳನ್ನು ನುಂಗಿ, ಇನ್ನೂ ಎರಡನ್ನು ತನ್ನ ಗುಪ್ತಾಂಗದಲ್ಲಿ ಸಾಗಿಸುತ್ತಿದ್ದಳು. ಇದೀಗ ಮಹಿಳೆಯಿಂದ ಯಾರು ಡ್ರಗ್ಸ್ ಪಡೆಯುತ್ತಿದ್ದರು ಎಂಬ ಜಾಲವನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಮಹಿಳೆಯ ಗುಪ್ತಾಂಗದಲ್ಲಿ 8.31 ಕೋಟಿ ಮೌಲ್ಯದ ಕೊಕೇನ್ ಪತ್ತೆ
Advertisement
ಮಹಿಳೆ ಡ್ರಗ್ಸ್ ಸಾಗಿಸುತ್ತಿರುವ ಕುರಿತು ಇಂಟಲಿಜೆನ್ಸ್ ಅಧಿಕಾರಿಗಳು ಮಾಹಿತಿ ನೀಡಿದ ನಂತರ ಆಕೆಯ ಪಾಸ್‍ಪೋರ್ಟ್ ನಂಬರ್ ಆಧರಿಸಿ ಪತ್ತೆ ಹಚ್ಚಲಾಗಿದೆ. ಸೋಮವಾರ ಬೆಳಗ್ಗೆ ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. ನಂತರ ವಿಚಾರಣೆ ನಡೆಸಲಾಗಿದ್ದು, ಮಹಿಳೆ ಬಾಯ್ಬಿಟ್ಟಿಲ್ಲ.
Advertisement
ನಂತರ ತನಿಖಾಧಿಕಾರಿಗಳು ನ್ಯಾಯಾಲಯದಿಂದ ಅನುಮತಿ ಪಡೆದಿದ್ದು, ಗುಪ್ತಚರ ಅಧಿಕಾರಿಗಳು ಖಚಿತ ಮಾಹಿತಿ ನೀಡಿದ್ದರಿಂದ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಸರ್ ಜೆಜೆ ಆಸ್ಪತ್ರೆಗೆ ಮಹಿಳೆಯನ್ನು ಕರೆದೊಯ್ದಿದ್ದು, ಸ್ಕ್ಯಾನಿಂಗ್ ಸೇರಿದಂತೆ ಇತರೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಮಹಿಳೆಯ ಹೊಟ್ಟೆಯೊಳಗೆ ವಸ್ತುಗಳು ಕಂಡಿರುವುದು ಪತ್ತೆಯಾಗಿದೆ. ನಂತರ ಮಹಿಳೆ ಕಾಂಡೋಮ್ ಮೂಲಕ ಕೋಕೇನ್ ಇಟ್ಟುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಕೊಕೇನ್ ತುಂಬಿದ 13 ಕಾಂಡೋಮ್‍ಗಳನ್ನು ತನ್ನ ದೇಹದೊಳಗೆ ಇಟ್ಟುಕೊಂಡಿರುವುದಾಗಿ ತಿಳಿಸಿದ್ದಾಳೆ. ನಂತರ ಆಕೆಯ ದೇಹದಿಂದ ಕಾಂಡೋಮ್‍ಗಳನ್ನು ಹೊರಗೆ ತೆಗೆಯಲಾಗಿದೆ.