ಕೋಲ್ಕತ್ತಾ: ಕಾಂಡೋಮ್‍ಗಳ ಮಾರಾಟ ಹೆಚ್ಚಾಗುತ್ತಿರುವ ಬಗ್ಗೆ ಆಗಾಗಾ ಸುದ್ದಿಯಾಗುತ್ತಲೇ ಇರುತ್ತದೆ. ಆದರೆ ಪಶ್ಚಿಮ ಬಂಗಾಳದಲ್ಲಿ ದಿಢೀರನೇ ಕಾಂಡೋಮ್ ಮಾರಾಟ ಹೆಚ್ಚಳವಾಗಿರುವ ವಿಚಾರ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಹೌದು, ಪಶ್ಚಿಮ ಬಂಗಾಳದ ದುರ್ಗಾಪುರದ ವಿದ್ಯಾರ್ಥಿಗಳು ಹೆಚ್ಚಾಗಿ ಕಾಂಡೋಮ್‍ಗಳನ್ನು ಖರೀದಿಸುತ್ತಿದ್ದಾರೆ. ಆದರೆ ಗರ್ಭನಿರೋಧಕವಾಗಿ ಬಳಸಲು ಅಲ್ಲ. ಬದಲಿಗೆ ಅದನ್ನು ಮಾದಕತೆಯಾಗಿ ಬಳಸುತ್ತಿದ್ದಾರೆ. ಈ ವಿಲಕ್ಷಣ ಪ್ರವೃತ್ತಿಯು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅವುಗಳಲ್ಲಿ ಹಲವಾರು ವಿದ್ಯಾರ್ಥಿಗಳ ಆರೋಗ್ಯದ ಮೇಲಿನ ಪರಿಣಾಮದ ಬಗ್ಗೆ ಆಂತಕ ಮೂಡಿಸುತ್ತಿದೆ.
Advertisement
Advertisement
ಈ ಕುರಿತಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಮೆಡಿಕಲ್ ಶಾಪ್ ವ್ಯಾಪಾರಿ, ಪ್ರತಿನಿತ್ಯ ಮಾರಾಟವಾಗುವ ಕಾಂಡೋಮ್ ಪ್ಯಾಕೆಟ್‍ಗಳ ಸಂಖ್ಯೆ ಇದೀಗ ಹಲವು ಪಟ್ಟು ಹೆಚ್ಚಾಗಿದೆ. ದುರ್ಗಾಪುರದ ಹಲವಾರು ಭಾಗಗಳಾದ ದುರ್ಗಾಪುರ ಸಿಟಿ ಸೆಂಟರ್, ಬಿಧಾನನಗರ, ಬೆನಚಿಟಿ ಮತ್ತು ಮುಚಿಪಾರದಲ್ಲಿ ಸುವಾಸನೆಯ ಕಾಂಡೋಮ್‍ಗಳ ಮಾರಾಟವು ಬಹಳ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
Advertisement
ಕಾಂಡೋಮ್ ಮಾರಾಟ ಮತ್ತು ಖರೀದಿ ಹೆಚ್ಚಾಗಿರುವುದರ ಹಿಂದಿನ ಕಾರಣವೇನು ಎಂದು ಪ್ರಶ್ನಿಸಿದಾಗ, ಅಂಗಡಿಯವರು ಕಾಂಡೋಮ್ ಅನ್ನು ಹೆಚ್ಚಾಗಿ ಖರೀದಿಸುತ್ತಿರುವವರು ಯುವಕರು ಎಂದು ಪ್ರತಿಕ್ರಿಸಿದ್ದಾರೆ. ಇದನ್ನೂ ಓದಿ: ರಾಖಿ ಕಟ್ಟಿದ ಸಹೋದರಿಗೆ ಎಲೆಕ್ಟ್ರಿಕ್ ಸ್ಕೂಟರ್ ಗಿಫ್ಟ್ ಕೊಡಲು ಕಳ್ಳತನ ಮಾಡುತ್ತಿದ್ದ ಯುವಕನ ಬಂಧನ
Advertisement
ಕಾಂಡೋಮ್‍ಗಳನ್ನು ಬಿಸಿ ನೀರಿನಲ್ಲಿ ದೀರ್ಘಕಾಲ ನೆನೆಸುವುದರಿಂದ ಆಲ್ಕೋಹಾಲ್ ಸಂಯುಕ್ತಗಳನ್ನು ರಚಿಸುತ್ತದೆ. ಇದು ಯುವಕರನ್ನು ನಶೆಯಲ್ಲಿಡುತ್ತಿದೆ ಎಂದು ರಸಾಯನಶಾಸ್ತ್ರದ ಶಿಕ್ಷಕರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಈತನ ಹೊಟ್ಟೆಯಲ್ಲಿತ್ತು 1 ರೂಪಾಯಿಯ 63 ನಾಣ್ಯಗಳು – ಎಕ್ಸ್‌ರೇ ನೋಡಿ ವೈದ್ಯರೂ ಶಾಕ್
ಕಾಂಡೋಮ್‍ನಲ್ಲಿರುವ ಆರೊಮ್ಯಾಟಿಕ್ ಸಂಯುಕ್ತವು ಅಮಲೇರಿಸುವ ಅಂಶವಿದ್ದು, ಈ ಸಂಯುಕ್ತವು ಡೆಂಡ್ರೈಟ್‍ಗಳಲ್ಲಿಯೂ ಸಹ ಇರುತ್ತದೆ. ಇದು ಮಾದಕತೆಗಾಗಿ ಸಾಮಾನ್ಯವಾಗಿ ಬಳಸುವ ಉತ್ಪನ್ನವಾಗಿದೆ.
ಅಮಲು ಬಂದಾಗ ಜನರು ವಿಚಿತ್ರವಾದ ಆಯ್ಕೆಗಳನ್ನು ಹೊಂದಿರುತ್ತಾರೆ. ಕೆಲವು ವಿಲಕ್ಷಣವಾದವುಗಳಲ್ಲಿ ಕೆಮ್ಮು ಸಿರಪ್ ಕುಡಿಯುವುದು, ಅಂಟು ಉತ್ಪನ್ನಗಳನ್ನು ಸ್ನಿಫಿಂಗ್ ಮಾಡುವುದು, ಬಣ್ಣ, ನೇಲ್ ಪಾಲಿಷ್ ಮತ್ತು ವೈಟ್‌ನರ್‌ಗಳ ವಾಸನೆಯ ಉಸಿರು ತೆಗೆದುಕೊಳ್ಳುವುದನ್ನು ಕಾಣಬಹುದಾಗಿದೆ.
ಈ ಸಂಯುಕ್ತಗಳೊಂದಿಗೆ ನಿಯಮಿತವಾಗಿ ಅಮಲೇರಿದ ಯುವಕರು ಎದೆ ನೋವು ಹಾಗೂ ದೀರ್ಘಕಾಲದ ತಲೆನೋವಿನಂತಹ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದು ವ್ಯಸನಗಳ ಮೇಲೆ ಅವರ ಅವಲಂಬನೆಯನ್ನು ಹೆಚ್ಚಿಸುತ್ತದೆ.