ಹೀರಾಬೆನ್ ಅಗಲಿಕೆಗೆ ಗಣ್ಯರ ಸಂತಾಪ

Public TV
6 Min Read
heeraben Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ತಾಯಿ (Mother) ಹೀರಾಬೆನ್ ಮೋದಿ (Heeraben Modi) ಅವರು ಶುಕ್ರವಾರ ಬೆಳಗ್ಗೆ ತಮ್ಮ 100 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಬೆಳಗ್ಗಿನ ಜಾವ 3.39ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾಳೆ. ಆರೋಗ್ಯ ಸಮಸ್ಯೆಗಳಿಂದಾಗಿ ಅವರನ್ನು 2 ದಿನಗಳ ಹಿಂದೆ ಅಹಮದಾಬಾದ್‌ನ ಯುಎನ್ ಮೆಹ್ತಾ ಕಾರ್ಡಿಯಾಲಜಿ ಮತ್ತು ಸಂಶೋಧನಾ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಅವರ ನಿಧನದ ಸುದ್ದಿ ಹೊರಹೊಮ್ಮುತ್ತಿದ್ದಂತೆಯೇ, ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಪ್ರಧಾನಿ ಮೋದಿ ಅವರ ತಾಯಿಯ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. ಹೀರಾಬೆನ್ ಅವರು ಎಲ್ಲರಿಗೂ ಮಾದರಿ ಎಂದು ಶಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ನಿಧನದ ಬಗ್ಗೆ ತಿಳಿದು ತುಂಬಾ ದುಃಖವಾಗಿದೆ. ತಾಯಿ ಒಬ್ಬ ವ್ಯಕ್ತಿಯ ಜೀವನದ ಮೊದಲ ಸ್ನೇಹಿತೆ ಹಾಗೂ ಶಿಕ್ಷಕಿಯಾಗಿರುತ್ತಾರೆ. ಇಂತಹವರನ್ನು ಕಳೆದುಕೊಂಡಾಗ ಉಂಟಾಗುವ ನೋವು ನಿಸ್ಸಂದೇಹವಾಗಿ ವಿಶ್ವದಲ್ಲೇ ದೊಡ್ಡ ನೋವಾಗಿರುತ್ತದೆ ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ. ಇದನ್ನೂ ಓದಿ: ಹೀರಾಬೆನ್ ವಿಧಿವಶ- ತಾಯಿ ಮಾತುಗಳನ್ನು ಸ್ಮರಿಸಿಕೊಂಡು ಮೋದಿ ಭಾವುಕ ಟ್ವೀಟ್

ಹೀರಾಬೆನ್ ನಿಧನಕ್ಕೆ ಸಂತಾಪ ಸೂಚಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ದೇಶಕ್ಕೆ ಜನನಾಯಕ ಪ್ರಧಾನಿ ನರೇಂದ್ರ ಮೋದಿಯವರಂತಹ ಮಗನನ್ನು ನೀಡಿ, ಶತಾಯುಷಿಯಾಗಿ ಬದುಕಿ ಬಾಳಿ ದೇವರ ಚರಣ ಸೇರಿದ ಹೀರಾಬೆನ್ ಅವರಿಗೆ ಗೌರವಪೂರ್ವಕ ವಿದಾಯಗಳು. ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಹಾಗೂ ಪ್ರಧಾನಿಯವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಗೃಹಸಚಿವ ಅರಗ ಜ್ಞಾನೇಂದ್ರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಮೋದಿ ಅವರು ದೈವಾಧೀನರಾದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ವಿಶ್ವದ ಅತ್ಯಂತ ಬಲಿಷ್ಠ ನಾಯಕನಿಗೆ ಜನ್ಮ ನೀಡಿದ ಆ ದಿವ್ಯ ಚೇತನಕ್ಕೆ ದೇವರು ಚಿರ ಶಾಂತಿ ಕರುಣಿಸಲಿ, ಅವರ ಕುಟುಂಬದ ದುಃಖದಲ್ಲಿ ನಾನು ಸಹ ಭಾಗಿಯಾಗಿದ್ದೇನೆ ಎಂದಿದ್ದಾರೆ.

ಸಂತಾಪ ಸೂಚಿಸಿರುವ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ, ಹೀರಾಬೆನ್‌ ಅವರು ಶತಾಯುಷಿಯಾಗಿ ಅವರು ತಮ್ಮ ಪೂರ್ಣ ಜೀವನವನ್ನು ನಡೆಸಿದ್ದಾರೆ. ಆದರೆ ಒಬ್ಬ ತಾಯಿಯಾಗಿ ತನ್ನ ಸುತ್ತಲೂ ಶಾಶ್ವತವಾಗಿ ಶಕ್ತಿ ತುಂಬಲು ಬಯಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇವರು ತಮಗಾದ ನಷ್ಟವನ್ನು ಭರಿಸುವ ಶಕ್ತಿ ಕೊಡಲಿ ಎಂದಿದ್ದಾರೆ. ಇದನ್ನೂ ಓದಿ: ಇಂದೇ ಮೋದಿ ತಾಯಿ ಹೀರಾಬೆನ್ ಅಂತ್ಯಕ್ರಿಯೆ

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಮೋದಿ ತಾಯಿ ನಿಧನಕ್ಕೆ ಸಂತಾಪ ಸೂಚಿಸಿ, ಮಗನಿಗೆ ತಾಯಿಯೇ ಇಡೀ ಜಗತ್ತು. ಅವರ ಸಾವು ತುಂಬಲಾಗದ ನಷ್ಟ ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರ ನಿಧನದಿಂದ ನನಗೆ ತುಂಬಾ ನೋವಾಗಿದೆ. ತಾಯಿಯ ಸಾವು ಒಬ್ಬರ ಜೀವನದಲ್ಲಿ ತುಂಬಲು ಅಸಾಧ್ಯವಾದ ಶೂನ್ಯವನ್ನು ಉಂಟುಮಾಡುತ್ತದೆ. ಈ ದುಃಖದ ಸಮಯದಲ್ಲಿ ಪ್ರಧಾನಮಂತ್ರಿ ಮತ್ತು ಅವರ ಇಡೀ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

ಪಂಜಾಬ್ ಸಿಎಂ ಭಗವಂತ್ ಮಾನ್ ಈ ಬಗ್ಗೆ ಟ್ವೀಟ್ ಮಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ತಾಯಿಯ ನಿಧನದ ದುಃಖದ ಸುದ್ದಿಯನ್ನು ಸ್ವೀಕರಿಸಿದೆ. ತಾಯಿಯ ಮರಣವು ಜೀವನದ ಅತಿದೊಡ್ಡ ಪೂರೈಸಲಾಗದ ಕೊರತೆಯಾಗಿದೆ. ಈ ದುಃಖದ ಸಮಯದಲ್ಲಿ ನಾನು ಪ್ರಧಾನಮಂತ್ರಿ ಮತ್ತು ಅವರ ಇಡೀ ಕುಟುಂಬಕ್ಕೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಅಮ್ಮನ ಅಂತಿಮ ಯಾತ್ರೆಗೆ ಹೆಗಲು ಕೊಟ್ಟ ಪ್ರಧಾನಿ ಮೋದಿ

ಹೀರಾಬೆನ್ ಅವರ ನಿಧನದ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಅವರ ಸರಳತೆ ಮತ್ತು ಪ್ರೀತಿಯ ಸ್ವಭಾವದಿಂದ ಅವರು ಯಾವಾಗಲೂ ನೆನಪಿನಲ್ಲಿ ಉಳಿಯುತ್ತಾರೆ ಎಂದು ಹೇಳಿದ್ದಾರೆ.

heeraben Modi 1

ಮೋದಿ ತಾಯಿ ಹೀರಾಬೆನ್ ಅವರ ಅಂತ್ಯಕ್ರಿಯೆ ಇಂದೇ ನಡೆಯಲಿದೆ. ಸದ್ಯ ಗಾಂಧಿನಗರದ ಪಂಕಜ್ ಮೋದಿ ನಿವಾಸದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇತ್ತ ಪ್ರಧಾನಿಯವರು ಕೂಡ ಅಹಮದಾಬಾದ್‌ಗೆ ಭೇಟಿ ನೀಡಿದ್ದು, ಯೂಎನ್ ಮೆಹ್ತಾ ಆಸ್ಪತ್ರೆಗೆ ತೆರಳಿ ತಾಯಿಯ ಅಂತಿಮ ದರ್ಶನ ಪಡೆದಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *