ಮೈಸೂರು: ಚುನಾವಣೆ ಹಿನ್ನೆಲೆಯಲ್ಲಿ ನಡೆಸಿದ ಜೆಡಿಎಸ್ ಪಂಚರತ್ನ ಯಾತ್ರೆಗೆ (JDS Pancharatna Yatra) ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅದ್ದೂರಿ ತೆರೆ ಬಿದ್ದಿದೆ.
ಉತ್ತನಹಳ್ಳಿ ಗ್ರಾಮದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ದರು. ಸಮಾರೋಪದಲ್ಲಿ ಆಕರ್ಷಣಾ ಕೇಂದ್ರಬಿಂದುವಾಗಿದ್ದು ಮಾಜಿ ಪ್ರಧಾನಿ ದೇವೇಗೌಡರು. ಅನಾರೋಗ್ಯದ ಕಾರಣ ಟ್ರಾಲಿಯಲ್ಲಿ ಕೂತೇ ಕಾರ್ಯಕರ್ತರಿಗೆ ಚೈತನ್ಯ ತುಂಬಿದರು. ಈ ವೇಳೆ ದೇವೇಗೌಡರಿಗೆ (HD Deve Gowda) ಮಕ್ಕಳು-ಮೊಮ್ಮಕ್ಕಳು ಸಾಥ್ ನೀಡಿದರು.
Advertisement
Advertisement
ದೇವೇಗೌಡರಿಗೆ ಇಮ್ಮಡಿ ಪುಲಕೇಶಿ ಮಾದರಿ ಕಿರೀಟ, ಚಿನ್ನದ ಲೇಪನದ ನೇಗಿಲು-ನೊಗ ಕೊಡಲಾಯಿತು. ದೇವೇಗೌಡರು ಮಾತಾಡಿ, ನಿಮ್ಮೆಲ್ಲರ ಹಾರೈಕೆಯಿಂದ ನಿಮ್ಮ ಮುಂದೆ ಬಂದಿದ್ದೇನೆ. ಜಾತಿ-ಧರ್ಮ ಆಧಾರದ ಮೇಲೆ ಮತ ಕೇಳಬೇಡಿ. ಕೇವಲ ಅಭಿವೃದ್ಧಿ ವಿಷಯದಲ್ಲಿ ಮತ ಕೇಳಲು ಸೂಚನೆ ನೀಡಿದ್ದೇನೆ. ನಮ್ಮನ್ನು ನಂಬಿ ನಮ್ಮ ಪಕ್ಷಕ್ಕೆ ಮತ ನೀಡಿ ಗೆಲುವು ನೀಡಿಯೆಂದು ಮನವಿ ಮಾಡ್ತೇನೆ ಅಂದರು. ಇದನ್ನೂ ಓದಿ: ಗೋ ಬ್ಯಾಕ್ ಅಭಿಯಾನ – ನನ್ನನ್ನು ಸುಳ್ಳುಗಾರ ಅಂತಾ ಕರೆಯೋದು ಎಷ್ಟು ಸರಿ?: ಸೋಮಣ್ಣ ಭಾವುಕ
Advertisement
Advertisement
ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮಾತಾಡಿ, ಸ್ವತಂತ್ರ ಜೆಡಿಎಸ್ ಸರ್ಕಾರ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದರು. ಗ್ರಾಮೀಣ ಮಟ್ಟದ ರೈತರಿಗೆ ಉಚಿತ ಚಿಕಿತ್ಸೆ ಕಲ್ಪಸಲು ವ್ಯವಸ್ಥೆ ಮಾಡುತ್ತೇನೆ ಎಂದು ವಾಗ್ದಾನ ಕೊಟ್ಟರು. ಇದನ್ನೂ ಓದಿ: ಮುಸ್ಲಿಮರು 3 ಕಡೆ ಲಾಭ ಪಡೆಯುತ್ತಿದ್ದಾರೆ; ಮೀಸಲಾತಿ ಇವರಪ್ಪನ ಮನೆಯದ್ದಾ – ಯತ್ನಾಳ್ ಪ್ರಶ್ನೆ