ಮೈಸೂರು: ಹೆಬ್ಬೆಟ್ಟು ಗುರುತು ಪಡೆಯುವ ನೆಪ ಹೇಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯ ಮೇಲೆ ಕಂಪ್ಯೂಟರ್ ಆಪರೇಟರ್ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ನಂಜನಗೂಡು ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ, ಕಾಮುಕ ಕಂಪ್ಯೂಟರ್ ಆಪರೇಟರ್ ಸುರೇಶ್ ಎಂಬಾತನ ಬಲಾತ್ಕಾರಕ್ಕೆ ಒಳಗಾದ ಮಹಿಳೆ. ಮನೆಯಲ್ಲಿ ಅಧ್ಯಕ್ಷೆ ಒಬ್ಬಂಟಿಯಾಗಿರುವುದನ್ನು ಮನಗಂಡ ಆಪರೇಟರ್ ಕ್ಷುಲ್ಲಕ ನೆಪ ಹೇಳಿ ಮನೆಗೆ ತೆರಳಿ ಬಲಾತ್ಕಾರಕ್ಕೆ ಯತ್ನಿಸಿದ್ದಾನೆ.
Advertisement
ಗ್ರಾಮ ಪಂಚಾಯ್ತಿ ಅಧ್ಯಕ್ಷೆಗೆ ಅಕ್ಷರ ಜ್ಞಾನ ಇಲ್ಲ. ಮೂರು ವರ್ಷಗಳಿಂದ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿ ಅಧಿಕಾರ ನಡೆಸುತ್ತಿದ್ದಾರೆ. ಇದೇ ಗ್ರಾಮ ಪಂಚಾಯ್ತಿಯಲ್ಲಿ ಕೆಲವು ವರ್ಷಗಳಿಂದಲೂ ಕಂಪ್ಯೂಟರ್ ಆಪರೇಟರ್ ಆಗಿ ಕಾಮುಕ ಸುರೇಶ್ ಕಾರ್ಯ ನಿರ್ವಹಿಸುತ್ತಿದ್ದಾನೆ. ಕೆಲವು ಶೌಚಾಲಯಗಳಿಗೆ ಬಿಲ್ ಪಾವತಿಯಾಗದ ಕಾರಣ ತಂಬು ಪಡೆಯುವ ಸಲುವಾಗಿ ಅಧ್ಯಕ್ಷೆ ಒಬ್ಬಂಟಿಯಾಗಿ ಮನೆಯಲ್ಲಿದ್ದ ವೇಳೆ ಮನೆಗೆ ತೆರಳಿರುವ ಸುರೇಶ್, ಬಲಾತ್ಕಾರಕ್ಕೆ ಮುಂದಾಗಿದ್ದಾನೆ. ಆಗ ಅವರು ಕಿರುಚಾಟದಿಂದ ಅಕ್ಕಪಕ್ಕದ ಮನೆಯವರು ಬಂದು ಅವರನ್ನು ರಕ್ಷಿಸುವಲ್ಲಿ ಮುಂದಾಗಿದ್ದಾರೆ.
Advertisement
ಕಾಮುಕ ಸುರೇಶ ಅವಿವಾಹಿತನಾಗಿದ್ದು, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಆತನ ತಾಯಿಯ ವಯಸ್ಸಿನವರಾಗಿದ್ದರೂ ಸಹ ಇಂತಹ ಕೃತ್ಯಕ್ಕೆ ಕಾಮುಕ ಸುರೇಶ್ ಮುಂದಾಗಿದ್ದಾನೆ. ಘಟನೆಯ ಬಳಿಕ ಸುರೇಶ್ ಪರಾರಿಯಾಗಿದ್ದಾನೆ.
Advertisement
ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.