ಬಾರ್ ಲೈಸೆನ್ಸ್ ನೀಡಲು 20 ಲಕ್ಷಕ್ಕೆ ಬೇಡಿಕೆ ಆರೋಪ – ಅಬಕಾರಿ ಡಿಸಿ ವಿರುದ್ಧ ಲೋಕಾಯುಕ್ತಕ್ಕೆ ದೂರು

Public TV
2 Min Read
Mandya 4

– ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಬಗ್ಗೆಯೂ ಪ್ರಸ್ತಾಪ

ಮಂಡ್ಯ:‌ ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ (Mandya Excise Department) ಕರ್ಮಕಾಂಡ ಬಟಾಬಯಲಾಗಿದೆ. ಲಕ್ಷ ಲಕ್ಷ ಲಂಚ ಕೊಟ್ಟರೆ ಮಾತ್ರ ಬಾರ್‌ ಲೈಸೆನ್ಸ್‌ ಸಿಗುತ್ತದೆ, ಲಂಚ ಕೊಡದಿದ್ದರೆ, ದಾಖಲೆ ಸರಿಯಿದ್ದರೂ ಅರ್ಜಿ ತಿರಸ್ಕೃತ ಆಗುತ್ತದೆ ಅನ್ನೋ ಆರೋಪ ಕೇಳಿಬಂದಿದೆ. ಬಾರ್‌ ಲೈಸೆನ್ಸ್‌ (Bar License) ಪಡೆಯಲು ಅಬಕಾರಿ ಡಿಸಿ, ಇನ್ಸ್‌ಪೆಕ್ಟರ್‌ ಸೇರಿ ಕೇಸ್‌ ವರ್ಕರ್‌ ಜೇಬಿಗೂ ಹಣ ಇಳಿಸಬೇಕಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತ ಮಂಡ್ಯದ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಕೈ ಕಾರ್ಯಕರ್ತ ಪುನೀತ್ ಅಬಕಾರಿ ಡಿಸಿ ರವಿಶಂಕರ್, ಮದ್ದೂರು ಅಬಕಾರಿ ಇನ್ಸ್‌ಪೆಕ್ಟರ್ ಶಿವಶಂಕರ್ ವಿರುದ್ಧ ಆಡಿಯೋ, ವಿಡಿಯೋ ಸಹಿತ ದೂರು ಸಲ್ಲಿಸಿದ್ದಾರೆ. ಸಿಎಲ್‌ 7 ಬಾರ್ ಲೈಸೆನ್ಸ್‌ಗೆ ಅಧಿಕಾರಿಗಳು ಲಂಚಕ್ಕೆ ಬೇಡಿಕೆಯಿಟ್ಟಿರುವುದಾಗಿ ಆರೋಪಿಸಿದ್ದಾರೆ. ಇದನ್ನೂ ಓದಿ: ಮೀಸಲಾತಿ ಲಾಭಕ್ಕಾಗಿ ಮರು ಮತಾಂತರ ಆಗೋದು ಸಂವಿಧಾನಕ್ಕೆ ಮಾಡುವ ವಂಚನೆ: ಸುಪ್ರೀಂ

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬಾರ್‌ ಅಂಡ್‌ ರೆಸ್ಟೋರೆಂಟ್‌ಗೆ ಅನುಮತಿ ಪಡೆಯಲು ಅರ್ಜಿ ಸಲ್ಲಿಸಿದ್ದೆ. ನನ್ನ ತಾಯಿ ಲಕ್ಷ್ಮಮ್ಮ ಹೆಸರಲ್ಲಿ ಬಾರ್‌ ಲೈಸೆನ್ಸ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದ್ದೆ. ಆದ್ರೆ ಲಂಚ ಕೊಡದಿದ್ದಕ್ಕೆ ಅಧಿಕಾರಿಗಳು 4 ಬಾರಿಯೂ ಅರ್ಜಿ ವಜಾ ಮಾಡಿದ್ದಾರೆ ಎಂದು ಪುನೀತ್‌ ಲೋಕಾಯುಕ್ತಕ್ಕೆ (Mandya Lokayukta) ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅಬಕಾರಿ ಡಿಸಿ ರವಿಶಂಕರ್, ಮದ್ದೂರು ಅಬಕಾರಿ ಇನ್ಸ್‌ಪೆಕ್ಟರ್ ಶಿವಶಂಕರ್ ವಿರುದ್ಧ ಆಡಿಯೋ, ವಿಡಿಯೋ ಸಹಿತ ದೂರು ನೀಡಿದ್ದಾರೆ. ವಿಡಿಯೋ ಸಾಕ್ಷ್ಯದಲ್ಲಿ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಬಗ್ಗೆಯೂ ಪ್ರಸ್ತಾಪವಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಭೋವಿ ನಿಗಮ ಹಗರಣ: ಡಿವೈಎಸ್ಪಿ ಹೆಸರು ಬರೆದಿಟ್ಟರೂ ಬಂಧನ ಮಾಡಿಲ್ಲ ಯಾಕೆ – ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

ಪ್ರಾರಂಭದಲ್ಲಿ 40 ಲಕ್ಷ ರೂ. ಕೊಡಲು ಒಪ್ಪದಿದ್ದಾಗ ಫಿಫ್ಟಿ ಪರ್ಸೆಂಟ್ ಡಿಸ್ಕೌಂಟ್ ನೀಡಿ 20 ಲಕ್ಷಕ್ಕೆ ಡಿಸಿ ರವಿಶಂಕರ್‌ ಡಿಮ್ಯಾಂಡ್‌ ಮಾಡಿದ್ದರು. ಮೃಷ್ಟಾನ್ನ ಬೇಡ, ಗೃಹಲಕ್ಷ್ಮಿ ಆದರೂ ಕೊಡು, ಅಧೀನ ಅಧಿಕಾರಿಗಳು, ಸಿಬ್ಬಂದಿಗೂ ಕೊಡಬೇಕು. ಇಲ್ಲ ಅಂದ್ರೆ ನಾನೇ ಪಾಟ್ನರ್ ಅಂದುಕೊಳ್ತಾರೆ ಎಂದು ಹೇಳಿದ್ದಾರೆ ಎಂದು ಪುನೀತ್‌ ನೀಡಿದ ದೂರಿನಲ್ಲಿ ಇದೆ. ಅಲ್ಲದೇ ಲಂಚ ಕೇಳುವ ಆಡಿಯೋವನ್ನು ಸಹ ರೆಕಾರ್ಡ್‌ ಮಾಡಿಕೊಂಡು ಲೋಕಾಯುಕ್ತಕ್ಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share This Article