ಬೆಂಗಳೂರು: ಸ್ಯಾಂಡಲ್‍ವುಡ್‍ನ ದೊಡ್ಮನೆಯ ವಿನಯ್‍ರಾಜ್‍ಕುಮಾರ್ ನಟಿಸುತ್ತಿರುವ ‘ಅನಂತು ವರ್ಸಸ್ ನುಸ್ರತ್’ ಚಿತ್ರತಂಡದ ವಿರುದ್ಧ ವಕೀಲ ಅಮೃತೇಶ್ ಹೈಕೋರ್ಟ್ ಗೆ ದೂರು ಸಲ್ಲಿಸಿದೆ.
ಚಿತ್ರತಂಡ ಹೈಕೋರ್ಟ್ ಆವರಣದಲ್ಲಿ ನಾಯಕ ನಟ ವಿನಯ್‍ರಾಜ್‍ಕುಮಾರ್ ಅವರ ಫೋಟೋಶೂಟ್ ಮಾಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಕೀಲರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದ್ರೆ ಪೊಲೀಸರು ಮಾತ್ರ ಇದೂವರೆಗೂ ಯಾವುದೇ ಕ್ರಮಕೈಗೊಳ್ಳದ ಕಾರಣ ವಕೀಲ ಅಮೃತೇಶ್ ಎಫ್‍ಐಆರ್ ದಾಖಲಿಸುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಆಗಸ್ಟ್ 15ರಂದು ವಿನಯ್‍ರಾಜ್‍ಕುಮಾರ್ ಅವರ ಫೋಟೋಶೂಟ್ ಮಾಡಿಸಲಾಗಿತ್ತು. ಹೈಕೋರ್ಟ್ ಬಳಿಯಿರುವ ಗೃಂಥಾಲಯದ ಆವರಣದಲ್ಲಿ ಫೋಟೋಶೂಟ್ ನಡೆಸಿದ್ದು, ಅದಕ್ಕೆ ಸಂಬಂಧಪಟ್ಟಂತೆ ವಕೀಲರ ಸಂಘದ ಅಧ್ಯಕ್ಷರಿಂದ ಅನುಮತಿ ಪತ್ರವನ್ನು ಪಡೆಯಲಾಗಿದೆ. ನನ್ನ ಬಳಿ ವಕೀಲರ ಸಂಘ ನೀಡಿರುವ ಅನುಮತಿ ಪತ್ರವಿದೆ. ಇನ್ನೂ ದೂರು ಸಲ್ಲಿಸಿರುವ ವಕೀಲ ಅಮೃತೇಶ್ ಯಾರೆಂಬುದು ನನಗೆ ಗೊತ್ತಿಲ್ಲ. ಇದುವರೆಗೂ ನಾನು ಅವರನ್ನು ಒಮ್ಮೆಯೂ ಭೇಟಿಯೂ ಆಗಿಲ್ಲ. ಇಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ಬಳಿಕ ನನಗೆ ಈ ವಿಷಯ ಗೊತ್ತಾಗಿದೆ. ಅಂದು ನಡೆಸಿದ್ದ ಫೋಟೋಶೂಟ್ ನ್ನು ನಾವು ಆಗಸ್ಟ್ 22 ಮತ್ತು 23ರಂದು ಗಣೇಶ್ ಚತುರ್ಥಿ ಅಂಗವಾಗಿ ಪತ್ರಿಕೆಗಳಲ್ಲಿ ಪ್ರಕಟಿಸಲಾಗಿತ್ತು ಅಂತಾ ಚಿತ್ರದ ನಿರ್ದೇಶಕ ಸುಧೀರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಸುಧೀರ್ ನಿರ್ದೇಶನದಲ್ಲಿ ಅನಂತು ವರ್ಸಸ್ ನುಸ್ರತ್ ಸಿನಿಮಾ ಮೂಡಿ ಬರುತ್ತಿದೆ. ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಸುಪುತ್ರ ವಿನಯ್ ರಾಜ್‍ಕುಮಾರ್ ವಕೀಲರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿನಯ್‍ರಾಜ್‍ಕುಮಾರ್ ಗೆ ಜೊತೆಯಾಗಿ ಲತಾ ಹೆಗಡೆ ಬಣ್ಣ ಹಚ್ಚಿದ್ದಾರೆ. ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಪರಿಚಿತರಾಗಿರುವ ನಟಿ ನಯನ ಕಾಣಿಸಿಕೊಂಡಿದ್ದಾರೆ. ನಯನಾ ಸಿನಿಮಾದಲ್ಲಿ ವಿನಯ್ ರಾಜ್‍ಕುಮಾರ್ ಸಹದ್ಯೋಗಿ ಶಾಂತಲಕ್ಷ್ಮೀ ಪಾತ್ರದಲ್ಲಿ ನಟಿಸುತ್ತಿದ್ದಾರೆ.