ಬೆಂಗಳೂರು: ರಾಜ್ಯ ಬಿಜೆಪಿ ಸಾರಥ್ಯ ವಹಿಸಿಕೊಂಡಿರುವ ವಿಜಯೇಂದ್ರ (BY Vijayendra) ನೇತೃತ್ವದ ತಂಡಕ್ಕೆ ಹಿರಿಯ ಬಿಜೆಪಿ (BJP) ನಾಯಕರು ಶುಭಕೋರಿ ಮಾರ್ಗದರ್ಶನ ಮಾಡಿ ಒಗ್ಗಟ್ಟಿನ ಮಂತ್ರ ಬೋಧಿಸಿದರು. ಬಿಜೆಪಿಗೆ ಹೊಸ ನಾಯಕತ್ವ ಸಿಕ್ಕ ಹಿನ್ನೆಲೆ ಮತ್ತು ಮುಂಬರುವ ಲೋಕಸಭೆ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಇಂದು ರಾಜ್ಯ ಬಿಜೆಪಿ ಹಿರಿಯ ನಾಯಕರ ಸಭೆ ನಡೆಸಲಾಯಿತು.
ಬೆಂಗಳೂರು (Bengaluru) ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವಿಜಯೇಂದ್ರ ನೇತೃತ್ವದ ತಂಡಕ್ಕೆ ಹಿರಿಯ ನಾಯಕರು ಒಂದಷ್ಟು ಸಲಹೆ ಸೂಚನೆಗಳ ಮೂಲಕ ಮಾರ್ಗದರ್ಶನ ನೀಡಿದರು. ಹೊಂದಾಣಿಕೆ, ಸಮನ್ವಯತೆ, ಪರಸ್ಪರರ ಸಹಕಾರ ತತ್ವದಡಿ ಒಗ್ಗಟ್ಟಿನಿಂದ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವಂತೆ ವಿಜಯೇಂದ್ರಗೆ ಹಿರಿಯ ನಾಯಕರು ಕಿವಿ ಮಾತು ಹೇಳಿದ್ದಾರೆ. ಇದನ್ನೂ ಓದಿ: ಚುನಾವಣಾ ರಣತಂತ್ರದ ಮಾರ್ಗಸೂಚಿ ಬಗ್ಗೆ ಚರ್ಚೆಯಾಗಿದೆ: ಸಿ.ಟಿ.ರವಿ
Advertisement
ಹಿರಿಯರಾದ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಬೊಮ್ಮಾಯಿ, ಸಂಸದ ಡಿವಿ ಸದಾನಂದ ಗೌಡ, ಮಾಜಿ ಡಿಸಿಎಂ ಈಶ್ವರಪ್ಪ, ಮಾಜಿ ಸಚಿವ ಕಾರಜೋಳ, ಮಾಜಿ ಸಚಿವ ಶ್ರೀರಾಮುಲು, ಮಾಜಿ ಸ್ಪೀಕರ್ ಕೆಜಿ ಬೋಪಯ್ಯ, ಮಾಜಿ ಸ್ಪೀಕರ್ ಕಾಗೇರಿ, ಮಾಜಿ ಸಚಿವ ಸಿಟಿ ರವಿ, ಶಾಸಕ ಅಶ್ವಥ್ ನಾರಾಯಣ್ ಮೊದಲಾದ ಹಿರಿಯರು ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಹೊಸ ತಂಡಕ್ಕೆ ಉತ್ಸಾಹ ತುಂಬಿ ಬೆಂಬಲ ಸೂಚಿಸಿದರು. ಸಭೆಯಲ್ಲಿ ಚುನಾವಣಾ ತಂತ್ರಗಾರಿಕೆ, ಕಾಂಗ್ರೆಸ್ ವೈಫಲ್ಯಗಳ ವಿರುದ್ಧ ಪರಿಣಾಮಕಾರಿ ಹೋರಾಟ, ರಾಜ್ಯ ಪ್ರವಾಸ, ಪಕ್ಷ ಸಂಘಟನೆ, ಆಂತರಿಕ ಸಂಘರ್ಷಕ್ಕೆ ತೆರೆ ಎಳೆಯುವುದು ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಇದನ್ನೂ ಓದಿ: ಅಂಗಡಿ, ಮಾಲ್‌ಗಳಲ್ಲಿ ಕನ್ನಡ ಭಾಷೆಯಲ್ಲಿ ನಾಮಫಲಕ – ಶೀಘ್ರವೇ ಸುಗ್ರೀವಾಜ್ಞೆ
Advertisement
Advertisement
ಹೈಕಮಾಂಡ್‌ಗೆ ದೂರು:
ಯಡಿಯೂರಪ್ಪ ಕಾಲದಲ್ಲಿ ಕೋವಿಡ್ ಅಕ್ರಮ ನಡೆದಿದೆ ಎಂದ ಶಾಸಕ ಯತ್ನಾಳ್ (Basangouda Patil Yatnal) ವಿರುದ್ಧ ಹೈಕಮಾಂಡ್‌ಗೆ (High Command) ದೂರು ಕೊಡಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರ ಪ್ರಸ್ತಾಪ ಮಾಡಿದ ಸಂಸದ ಡಿವಿಎಸ್, ವರಿಷ್ಠರು ಯತ್ನಾಳ್ ಅವರನ್ನು ಕರೆದು ಮಾತನಾಡಬೇಕು. ಪಕ್ಷಕ್ಕೆ ಮುಜುಗರ ಆಗುತ್ತಿದೆ. ಪದೇಪದೇ ಮಾತನಾಡುವುದು ಇತ್ಯರ್ಥ ಆಗಬೇಕು ಎಂದು ಒತ್ತಾಯಿಸಿದರು. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಇಲ್ಲವೇ ಬಹಿರಂಗ ಹೇಳಿಕೆಗೆ ಫುಲ್ ಸ್ಟಾಪ್ ಹಾಕಿಸಬೇಕು. ವರಿಷ್ಠರ ಗಮನಕ್ಕೆ ಇದನ್ನು ತಂದು ವರಿಷ್ಠರೇ ಕರೆದು ಮಾತನಾಡುವಂತೆ ಮಾಡಬೇಕು ಎಂದು ಸಭೆಯಲ್ಲಿ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಅವರ ದನಿಗೆ ಮತ್ತಷ್ಟು ಸದಸ್ಯರು ಪ್ರಸ್ತಾಪಿಸಿದರು. ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ತಲುಪುವಂತೆ ಮಾಡಲು ಇಲಾಖೆ ವತಿಯಿಂದ ವಿಶೇಷ ಶಿಬಿರ: ಪ್ರಿಯಾಂಕ್ ಖರ್ಗೆ
Advertisement
ಶಾಸಕ ಯತ್ನಾಳ್ ಹೇಳಿಕೆ ಪಕ್ಷದ ಇಮೇಜ್‌ಗೆ ಭಾರೀ ಧಕ್ಕೆ ತಂದಿದೆ. ಪಕ್ಷದ ನಾಯಕರನ್ನು, ಹಿಂದಿನ ಬಿಜೆಪಿ ಸರ್ಕಾರಕ್ಕೆ ಯತ್ನಾಳ್ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್‌ಗೆ ಪಕ್ಷ ಆಹಾರ ಆಗುವಂತೆ ಮಾಡಿದ್ದಾರೆ ಎಂದು ಸಭೆಯಲ್ಲಿ ಯತ್ನಾಳ್ ಹೇಳಿಕೆ ಬಗ್ಗೆ ಹಿರಿಯರು ಚರ್ಚೆ ನಡೆಸಿದರು. ಯತ್ನಾಳ್ ಹೇಳಿಕೆಗಳಿಗೆ ಬ್ರೇಕ್ ಹಾಕಲು ಹೈಕಮಾಂಡ್ ಮೊರೆ ಹೋಗುವುದು ಒಳಿತು ಎನ್ನುವ ತೀರ್ಮಾನಕ್ಕೆ ಬರಲಾಯಿತು. ಶಿಸ್ತುಕ್ರಮ ಕೈಗೊಳ್ಳುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟಿದ್ದು. ಆದರೆ ಯತ್ನಾಳ್ ಇನ್ನುಮುಂದೆ ಆ ರೀತಿಯ ಹೇಳಿಕೆಗಳನ್ನು ಕೊಡದಂತೆ ಹೈಕಮಾಂಡ್ ಕ್ರಮವಹಿಸಲಿ ಎಂಬ ಮನವಿ ಸಲ್ಲಿಸುವ ಬಗ್ಗೆ ತೀರ್ಮಾನಿಸಲಾಯ್ತು. ಶಾಸಕ ಯತ್ನಾಳ್ ಹೇಳಿಕೆ ಸಭೆಯಲ್ಲಿದ್ದ ಡಿವಿಎಸ್, ರೇಣುಕಾಚಾರ್ಯ, ಮುರುಗೇಶ್ ನಿರಾಣಿ ಖಂಡನೆ ವ್ಯಕ್ತಪಡಿಸಿದರು. ಸಭೆಯಲ್ಲಿ ಸದಸ್ಯರ ಚರ್ಚೆ, ಅಭಿಪ್ರಾಯಗಳಿಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಹಮತ ವ್ಯಕ್ತಪಡಿಸಿದರು. ಇದನ್ನೂ ಓದಿ: ದೇಶದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕೊಡುವುದು ಕಾಂಗ್ರೆಸ್ ಪಕ್ಷ ಮಾತ್ರ: ಸಿದ್ದರಾಮಯ್ಯ
ಇದೇವೇಳೆ ಸಂಸದ ಡಿವಿಎಸ್ ಅವರು ಹೊಸ ಪದಾಧಿಕಾರಿಗಳ ನೇಮಕ ಬಗ್ಗೆ ಹಿರಿಯ ಬಿಜೆಪಿ ನಾಯಕರ ಗಮನಕ್ಕೆ ತಂದಿಲ್ಲ ಎಂದು ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ. ಈಗಲಾದರೂ ಸಭೆ ಕರೆದು ಎಲ್ಲರ ಗಮನಕ್ಕೆ ತಂದಿರೋದು ಉತ್ತಮ ಬೆಳವಣಿಗೆ. ಹೊಸ ತಂಡಕ್ಕೆ ಸದಾ ಬೆಂಬಲ ಕೊಡುವುದಾಗಿ ಡಿವಿಎಸ್ ಹೇಳಿದ್ದಾರೆ ಎನ್ನಲಾಗಿದೆ. ಇನ್ನು ವಿಧಾನಸಭೆ ಚುನಾವಣೆಯಲ್ಲಿ ಸೋತವರ ಸಭೆ ನಡೆಸಿ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸಭೆಯಲ್ಲಿ ಕೆಲವರು ರಾಜ್ಯಾಧ್ಯಕ್ಷರಿಗೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಇಂಗ್ಲಿಷ್ ಬೋರ್ಡ್ ಹರಿದು, ಕಲ್ಲು ತೂರಾಟ ಮಾಡಿ ಆಕ್ರೋಶ- ಕರವೇ ಕಾರ್ಯಕರ್ತರ ಮೇಲೆ FIR