ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್(Mohammed Nalapad) ವಿರುದ್ದ ಸ್ನೇಹಿತನೇ ದೂರು ದಾಖಲಿಸಿದ್ದಾರೆ.
ಉದ್ಯಮಿ ನಜೀರ್ ದೂರು ನೀಡಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಗಂಭೀರ ಸ್ವರೂಪವಲ್ಲದ ಪ್ರಕರಣ(NCR) ದಾಖಲಾಗಿದೆ. ಇದನ್ನೂ ಓದಿ: ಹಿಜಬ್ ಸೂಚನೆ ಕಡೆಗಣನೆ, ಮಹಿಳೆಯರು ಮದುವೆಗೆ ಹೋಗುವ ಉಡುಪು ಧರಿಸಿ ವಿವಿಗೆ ಬರುತ್ತಾರೆ: ತಾಲಿಬಾನ್ ಸಮರ್ಥನೆ
Advertisement
Advertisement
Advertisement
Advertisement
ಏನಿದು ಪ್ರಕರಣ?
ಯೂತ್ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ(Youth Congress Election) ನಲಪಾಡ್ ಸ್ನೇಹಿತ ನಜೀರ್ ಅವರಿಂದ ಫಾರ್ಚೂನರ್ ಕಾರು ಪಡೆದಿದ್ದರು. ಸ್ನೇಹಿತ ಎಂಬ ಕಾರಣಕ್ಕೆ ನಜೀರ್ ಕಾರು ನೀಡಿದ್ದರು.
ಚುನಾವಣೆ ನಡೆದ ಬಳಿಕ ತನ್ನ ಕಾರನ್ನು ಮರಳಿ ಹಿಂದಿರುಗಿಸುವಂತೆ ನಜೀರ್ ಕೇಳಿದ್ದಾರೆ. ಆದರೆ ನಲಪಾಡ್ ಕಾರು ನೀಡುವ ಮನಸ್ಸನ್ನು ಮಾಡಿರಲಿಲ್ಲ. ಕಾರು ನೀಡದ ನಲಪಾಡ್ ಈಗ ಧಮ್ಕಿ ಹಾಕಿದ್ದಾರೆ.
ಈಗ ಕಾರು ಕೇಳಿದರೆ ಕೊಡಲ್ಲ. ಏನು ಬೇಕಾದರೂ ಮಾಡಿಕೋ ಹೋಗು. ನನ್ನ ಬಳಿ ಯೂತ್ ಹುಡುಗರು ಇದ್ದಾರೆ. ನಿನ್ನನ್ನು ನೋಡಿಕೊಳ್ಳುತ್ತಾರೆ. ಮತ್ತೆ ಕಾರು ಕೇಳಿದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.
ಕಾರು ಕೊಡದೇ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ನಲಪಾಡ್ ವಿರುದ್ಧ ನಜೀರ್ ದೂರು ನೀಡಿದ್ದಾರೆ.