ಬೆಂಗಳೂರು: ನಗರದ ಹೊರಮಾವು ವಾರ್ಡ್‍ನ ದೊಡ್ಡಯ್ಯ ಬಡಾವಣೆ ಏರಿಯಾದಲ್ಲಿ ನಾಯಿಗಳಿಗೆ ಹೆದರಿಕೊಂಡು ಜನ ಮನೆ ಮುಂದೆ ತಿರುಗಾಡುವುದಕ್ಕೆ ಭಯಭೀತರಾಗಿದ್ದಾರೆ. ಅಲ್ಲದೆ ಮಕ್ಕಳನ್ನು ಶಾಲೆಗೆ ಕಳಿಸೋದು ಇರಲಿ, ರಸ್ತೆಯಲ್ಲಿ ಆಟವಾಡಲು ಬಿಡೋಕು ಹಿಂದೇಟು ಹಾಕುತ್ತಿದ್ದಾರೆ.
ಕಳೆದ ವರ್ಷ ಅಂದರೆ 2018ರ ಜೂನ್ 27ರಲ್ಲಿ ಹೊರಮಾವು ವಾರ್ಡ್ ನ ದೊಡ್ಡಯ್ಯ ಬಡಾವಣೆಯಲ್ಲಿ ನಾಯಿಯೊಂದು ಮಗುವನ್ನು ಎಳೆದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. 5 ನಾಯಿಗಳ ವಿರುದ್ಧ ಸ್ಥಳೀಯರು ಹೆಣ್ಣೂರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.
Advertisement
Advertisement
ಈ ಬಗ್ಗೆ ಪೊಲೀಸರು ಎಫ್‍ಐಆರ್ ದಾಖಲಿಸಿಲ್ಲ. ಕನಿಷ್ಠ ಪಕ್ಷ ಸ್ಥಳಕ್ಕೆ ಭೇಟಿ ಸಹ ಕೊಟ್ಟಿಲ್ಲ. ಇದರಿಂದಾಗಿ ಬಾಬಾಸ್‍ಪಾಳ್ಯ ಅಥವಾ ಹೊರಮಾವು ವಾರ್ಡ್ ನ ದೊಡ್ಡಯ್ಯ ಬಡಾವಣೆ ಈ ಡೆಡ್ಲಿ ಗ್ಯಾಂಗ್ ನ ಅಡ್ಡವಾಗಿದೆ. ಹೀಗಾಗಿ ಇಲ್ಲಿನ ಜನ ಬೀದಿ ನಾಯಿಗಳ ಕಾಟದಿಂದ ಬೇಸತ್ತಿದ್ದಾರೆ. ಅದರಲ್ಲೂ ತಾಯಂದಿರು ಭಯದಲ್ಲೇ ಕಾಲ ಕಳೆಯುತ್ತಿದ್ದಾರೆ.
Advertisement
Advertisement
ಈ ನಾಯಿಗಳ ಹಿಂದೆ ದೊಡ್ಡ ಕಹಾನಿಯೇ ಇದ್ದು, ಯಾರದ್ದೋ ಇಬ್ಬರ ದ್ವೇಷಕ್ಕೆ ಸಾರ್ವಜನಿಕರು, ಮಕ್ಕಳು ಬಲಿಯಾಗುತ್ತಿದ್ದಾರೆ. ಸುಮಾರು 10 ವರ್ಷದ ಹಿಂದೆ, ಮಾಂಸದ ವ್ಯಾಪಾರಿಗಳಿಗೂ ಹಾಗೂ ಸ್ಥಳೀಯರಿಗೂ ಜಗಳವಾಗಿತ್ತು. ಇದರಿಂದ ಬೇಸತ್ತ ಮಾಂಸದ ವ್ಯಾಪಾರಿ ಅವನ ನಾಯಿಗಳನ್ನು ಸ್ಥಳೀಯರ ಮೇಲಿನ ದ್ವೇಷದಿಂದ ಇಲ್ಲೇ ಬಿಟ್ಟು ಹೋಗಿದ್ದಾನೆ. ಅದೇ ನಾಯಿಗಳೇ ಈಗ ಈ ಕೃತ್ಯ ಎಸಗುತ್ತಿವೆ.
ನಾಯಿಗಳ ಅಟ್ಟಹಾಸದಿಂದ ಈಗಾಗಲೇ 10ಕ್ಕೂ ಹೆಚ್ಚು ಜನರಿಗೆ ಮಾರಣಾಂತಿಕ ಗಾಯಗಳಾಗಿವೆ. ಈ ಬಗ್ಗೆ ಬಿಬಿಎಂಪಿಗೆ ದೂರು ಕೊಟ್ಟರೆ, ಪ್ರಾಣಿ ದಯಾ ಸಂಘದ ನಿಯಮಗಳ ಪ್ರಕಾರ ನಾಯಿಗಳನ್ನು ಬಂಧಿಸಲ್ಲ ಎನ್ನುತ್ತಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.