ಬೆಂಗಳೂರು: ರಾಜ್ಯ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ವಿರುದ್ಧ ಕರ್ನಾಟಕ ಭ್ರಷ್ಟಾಚಾರ ವಿರೋಧಿ ಕಚೇರಿ(ಎಸಿಬಿ)ಗೆ ದೂರು ನೀಡಲಾಗಿದೆ.
ಉದ್ಯೋಗ ಮತ್ತು ತರಬೇತಿ ಇಲಾಖೆಯ ಮಾಜಿ ನೌಕರ ಶಂಕರ್ ದೇವೇಗೌಡ ಅವರು ಎಸಿಬಿಗೆ ರತ್ನಪ್ರಭಾ ವಿರುದ್ಧ ದೂರು ನೀಡಿದ್ದಾರೆ. ರತ್ನಪ್ರಭಾ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿ ದೂರು ಸಲ್ಲಿಸಿದ್ದಾರೆ.
Advertisement
Advertisement
ಸುಪ್ರೀಂ ಕೋರ್ಟ್ ಉದ್ಯೋಗ ಮತ್ತು ತರಬೇತಿ ಇಲಾಖೆಯ ಒಟ್ಟು 62 ಜನರನ್ನು ಹಿಂಬಡ್ತಿ ನೀಡುವಂತೆ ಆದೇಶಿತ್ತು. ಆದರೆ ಸುಪ್ರೀಂ ಕೋರ್ಟ್ ನ ಆದೇಶವನ್ನು ಜಾರಿಗೊಳಿಸುವ ಕೊನೆಯ ಹಂತದಲ್ಲಿ ತಡೆ ಹಿಡಿದು ಜಾರಿಗೊಳಿಸದಂತೆ ಇಲಾಖಾ ಕಾರ್ಯದರ್ಶಿಗೆ ಒತ್ತಡ ಹೇರಿದ್ದಾರೆ ಎಂದು ದೂರಿನಲ್ಲಿ ಶಂಕರ್ ದೇವೇಗೌಡ ಉಲ್ಲೇಖಿಸಿದ್ದಾರೆ.
Advertisement