ಬೆಂಗಳೂರು: ಸರ್ಕಾರದ ಮತ್ತೊಂದು ಇಲಾಖೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಸಮಾಜ ಕಲ್ಯಾಣ ಇಲಾಖೆಯ ಟೆಂಡರ್‌ನಲ್ಲಿ ಗೋಲ್ಮಾಲ್ ನಡೆಯುತ್ತಿದೆ ಎಂದು ಇಲಾಖೆ ಸಚಿವರ ವಿರುದ್ಧವೇ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಸಿಎಂ ಕಚೇರಿಗೂ ಟೆಂಡರ್ ಗೋಲ್ಮಾಲ್ ಸೀಕ್ರೆಟ್ ರವಾನೆಯಾಯ್ತ ಎಂಬ ಪ್ರಶ್ನೆ ಮೂಡಿದೆ. ಸಮಾಜ ಕಲ್ಯಾಣ ಇಲಾಖೆಯ ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರದ ಟೆಂಡರ್‌ನಲ್ಲಿ ಗೋಲ್ಮಾಲ್ ಆಗಿದೆ ಎನ್ನಲಾಗಿದೆ.

ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗ ಸ್ಫರ್ಧಾತ್ಮಕ ಪರೀಕ್ಷೆಯ ತರಬೇತಿ ಕೇಂದ್ರ ಬಿಡ್‌ನಲ್ಲಿ ಭ್ರಷ್ಟಾಚಾರ ನಡೆದಿದೆ. ಅನರ್ಹ ಬಿಡ್‌ದಾರರಿಗೆ ಟೆಂಡರ್ ನೀಡಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಸಚಿವರ ವಿರುದ್ಧವೂ ಲೋಕಾಯಕ್ತಕ್ಕೆ ದೂರು ನೀಡಿ ತನಿಖೆಗೆ ಮನವಿ ಮಾಡಲಾಗಿದೆ. ಸಿಎಂ ಕಚೇರಿಗೂ ದೂರು ಕೊಡಲಾಗಿದೆ.
ಏನಿದು ಸಮಾಜ ಕಲ್ಯಾಣ ಇಲಾಖೆಯಲ್ಲಿ ಗೋಲ್ಮಾಲ್ ಆರೋಪ?
* ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ 125 ಕೋಟಿ ಹಣ ಟೆಂಡರ್ ಗೋಲ್ಮಾಲ್ ಆರೋಪ
* ಪರಿಶಿಷ್ಟ ಜಾತಿ, ಪಂಗಡಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಐಎಎಸ್, ಕೆಎಎಸ್, ಎಫ್‌ಡಿಎ ಗಳಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡೋದು
* 30 ಕೋಟಿ ಅಧಿಕ ಮೊತ್ತದ ಟೆಂಡರ್ ಅನ್ನು ಅನುಭವವಿಲ್ಲದ, ಟೆಂಡರ್ ನಿಯಮಗಳಿಗೆ ಒಳಪಡೆದ ಇರುವ ಸಂಸ್ಥೆಗಳಿಗೆ ಟೆಂಡರ್ ಆರೋಪ.
* ಐದು ವರ್ಷ ಅನುಭವ ಇರುವ ತರಬೇತಿ ಸಂಸ್ಥೆಗಳಿಗೆ ಟೆಂಡರ್ ನೀಡಬೇಕು ಅಂತಾ ಇದ್ರೂ, 3 ವರ್ಷ, 4 ವರ್ಷ ಆಗಿರುವ ಸಂಸ್ಥೆಗಳಿಗೆ ನೀಡಿದ ಆರೋಪ
* ತರಬೇತಿ ಸಂಸ್ಥೆಗಳು ಸುಳ್ಳು ದಾಖಲೆ ನೀಡಿದ್ದಾವೆ ಅಂತಾ ಆರೋಪ
* ಇನ್ನೂ ಅನರ್ಹ ಬಿಡ್‌ದಾರ ತರಬೇತಿ ಸಂಸ್ಥೆಗಳಿಗೆ ಚೆಕ್ ಮೂಲಕ ಹಣ ಪಾವತಿಯ ಆರೋಪ
* ಈ ಅಕ್ರಮದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆ ಅಂತಾ ಆರೋಪಿಸಿ ದೂರು
* ಸಚಿವರ ವಿರುದ್ಧವೂ ಲೋಕಾಯುಕ್ತದಲ್ಲಿ ದೂರು
* ಈ ದಾಖಲೆಯನ್ನು ಸಿಎಂ ಕಚೇರಿಗೂ ರವಾನಿಸಿ ದೂರು. ನಿಷ್ಪಕ್ಷಪಾತವಾಗಿ ತನಿಖೆ ಮಾಡುವಂತೆ ಮನವಿ

