ಬೆಂಗಳೂರು: ಸಿಲಿಕಾನ್ ಸಿಟಿಯ ರೌಡಿಗಳಿಗೆ ಸಿಂಹ ಸ್ವಪ್ನವಾಗಿರುವ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ವಿರುದ್ಧವೇ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.
ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರು ಸಾರ್ವಜನಿಕರ ಬಳಿ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ ಎಂದು ವಕೀಲ ಮುರುಳಿಧರ್ ರಾವ್ ಎಂಬವರು ಆರೋಪಿಸಿದ್ದಾರೆ. ಈ ಸಂಬಂಧ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಮುಖ್ಯಕಾರ್ಯದರ್ಶಿಗೆ ದೂರು ನೀಡಿದ್ದಾರೆ.
Advertisement
ಅಲೋಕ್ ಕುಮಾರ್ ಅವರು ಕ್ರಿಮಿನಲ್ ಹಿನ್ನಲೆ ಹೊಂದಿದ್ದಾರೆ. ಅವರನ್ನು ಭೇಟಿ ಮಾಡಲು ಹೋದಾಗ ಅವಕಾಶ ನೀಡದೇ ಹೀಯ್ಯಾಳಿಸಿದ್ದಾರೆ. ಅವರೊಬ್ಬ ಭ್ರಷ್ಟ ಅಧಿಕಾರಿಯಾಗಿದ್ದು, ಈ ಕೂಡಲೇ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಸ್ಥಾನದಿಂದ ಅವರನ್ನು ವಜಾ ಮಾಡುವಂತೆ ಮುರುಳಿಧರ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಅಲೋಕ್ ಕುಮಾರ್ ಖದರ್‌ಗೆ ಬೆಂಗಳೂರು ಮಹಿಳೆಯರು ಫಿದಾ!
Advertisement
Advertisement
ಅಲೋಕ್ ಕುಮಾರ್ ದಕ್ಷಿಣ ವಯದ ಡಿಸಿಪಿ ಆಗಿದ್ದಾಗ ಜಯನಗರದ ಮನೆಯೊಂದನ್ನು ತಾವೇ ಪ್ರೋತ್ಸಾಹ ನೀಡಿ ಕಳ್ಳತನ ಮಾಡಿಸಿದ್ದಾರೆ. ಕ್ರಿಮಿನಲ್ ಪ್ರಕರಣ ಸಂಬಂಧಿಸಿದಂತೆ ಭೇಟಿ ಆಗಲು ನಾನು ಭೇಟಿ ಮಾಡಲು ಹೋಗಿದ್ದೆ. ಸಿಸಿಬಿ ಕಚೇರಿಯಲ್ಲಿ ಕುಳಿತ್ತಿದ್ದಾಗ ಅಟೆಂಡರ್ ಒಳಗೆ ಹೋಗಿ ಅಂತ ಹೇಳಿದ್ದರು. ಆದರೆ ನಾನು ಕೊಠಡಿಯ ಒಳಗೆ ಹೋಗಿದೇ ತಡ, ಗೆಟ್ ಔಟ್ ಅಂತಾ ಹೇಳಿ, ನಾನು 7 ಗಂಟೆಗೆ ನಂತರ ಯಾರನ್ನು ಭೇಟಿಯಾವುದಿಲ್ಲ ಎಂದು ಹೇಳಿದರು ಎಂಬುದಾಗಿ ಮುರುಳಿಧರ್ ಆರೋಪಿಸಿದ್ದಾರೆ. ಇದನ್ನೂ ಓದಿ: ಅಲೋಕ್ ಕುಮಾರ್ ಎಚ್ಚರಿಕೆಗೂ ಡೋಂಟ್ ಕೇರ್ – ನಡುರಸ್ತೆಯಲ್ಲಿ ಲಾಂಗ್ ಹಿಡಿದು ಪುಡಿ ರೌಡಿ ಅವಾಜ್
Advertisement
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತಪ್ಪು ಮಾಹಿತಿ ಸಿಕ್ಕಿದ್ದರಿಂದ ಅಲೋಕ್ ಕುಮಾರ್ ಹೆಚ್ಚುವರಿ ಪೊಲೀಸ್ ಆಯುಕ್ತ ಸ್ಥಾನಕ್ಕೆ ಬಂದಿದ್ದಾರೆ. ಸಿಎಂಗೆ ಇವರ ಬಗ್ಗೆ ಮಾಹಿತಿ ಗೊತ್ತಾದರೆ, ಅವರನ್ನು ಸ್ಥಾನದಿಂದ ಕೆಳಗೆ ಇಳಿಸುತ್ತಾರೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv