Districts
ಅನಂತ್‍ಕುಮಾರ್ ಹೆಗ್ಡೆ ನಿಂದಿಸುವ ಭರದಲ್ಲಿ ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್- ಪಿಎಚ್‍ಡಿ ವಿದ್ಯಾರ್ಥಿ ವಿರುದ್ಧ ದೂರು

-ಕೃಷ್ಣ, ರಾಮ, ಸೀತೆ, ಲಕ್ಷ್ಮಣನ ಬಗ್ಗೆ ಅವಹೇಳನ
ಮೈಸೂರು: ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಅವರನ್ನ ನಿಂದಿಸುವ ಭರದಲ್ಲಿ ಹಿಂದೂ ದೇವರುಗಳ ಬಗ್ಗೆ ಬಾಯಿಗೆ ಬಂದಂತೆ ಒದರಿದ ಫೇಸ್‍ಬುಕ್ ಪುಡಾರಿ ವಿರುದ್ಧ ದೂರು ನೀಡಲಾಗಿದೆ.
ಮೈಸೂರಿನ ಹಾರೋಹಳ್ಳಿ ರವೀಂದ್ರ ಹಿಂದೂ ದೇವರು ಹಾಗೂ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ ಬರೆದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾನೆ. ರಾಮ, ಲಕ್ಷ್ಮಣ, ಸೀತೆ, ಕೃಷ್ಣನ ಬಗ್ಗೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಈತ ಮೈಸೂರು ವಿಶ್ವವಿದ್ಯಾಲಯದ ಪ್ರೊ. ಮಹೇಶ್‍ಚಂದ್ರ ಗುರು ಮಾರ್ಗದರ್ಶನದಲ್ಲಿ ಪಿಎಚ್.ಡಿ ಮಾಡುತ್ತಿದ್ದಾನೆ.
ಫೇಸ್‍ಬುಕ್ ಪೋಸ್ಟ್ ನಲ್ಲಿ ಏನಿದೆ?: ಸೀತೆಗೂ ಲಕ್ಷ್ಮಣನಿಗೂ ಅಕ್ರಮ ಸಂಬಂಧವಿತ್ತು. ಸೀತೆ ತಾನಾಗಿಯೇ ರಾವಣನ ಬಳಿ ಲೈಂಗಿಕ ಸುಖಕ್ಕಾಗಿ ಹೋಗಿದ್ದಳು. ರಾವಣನ ಜೊತೆಗಿನ ಲೈಂಗಿಕ ಸಂಪರ್ಕದ ನಂತರವೇ ಲವಕುಶ ಹುಟ್ಟಿದ್ದು. ಹೀಗೆ ರಾಮ, ಲಕ್ಷಣ ಸೀತೆ ಕುರಿತು ಅವಹೇಳನಕಾರಿಯಾಗಿ ಬರೆದಿದ್ದಾನೆ. ಅಷ್ಟೇ ಅಲ್ಲದೇ ಅನಂತ್‍ಕುಮಾರ್ ಹೆಗ್ಡೆ ಹಾಗೂ ಯೋಗಿ ಆದಿತ್ಯನಾಥ್‍ರನ್ನ ಟೀಕಿಸಿ ಪೋಸ್ಟ್ ಹಾಕಿದ್ದಾನೆ.
ಶ್ರೀಕೃಷ್ಣ ತನ್ನ ತಂಗಿ ಸುಭದ್ರೆ ಜೊತೆ ಲೈಂಗಿಕ ಸಂಪರ್ಕ ಇಟ್ಟುಕೊಂಡಿದ್ದ. ಕೃಷ್ಣ 16 ಸಾವಿರ ಗೋಪಿಕಾಸ್ತ್ರೀಯರ ಜೊತೆ ತನ್ನ ತಂಗಿಯ ಜೊತೆಯೂ ಲೈಂಗಿಕ ಸುಖ ಪಡೆದಿದ್ದಾನೆ. ಈಶ್ವರ ದಲಿತ ಸಮುದಾಯಕ್ಕೆ ಸೇರಿದವ. ಪಾರ್ವತಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಎಂದು ಶಿವ, ಪಾರ್ವತಿ, ಅಗ್ನಿದೇವನ ಕುರಿತು ಅಸಹ್ಯ ಪದಗಳ ಬಳಸಿ ಬರೆದಿದ್ದಾನೆ. ಗಣೇಶ, ಸುಬ್ರಮಣ್ಯ ಸೇರಿದಂತೆ ಬಹುತೇಕ ಹಿಂದೂ ದೇವರುಗಳ ಬಗ್ಗೆ ಅವಹೇಳನ ಮಾಡಿದ್ದಾನೆ.
ಈತನ ಪೋಸ್ಟ್ ಗೆ ಆಕ್ರೋಶಭರಿತ ಕಾಮೆಂಟ್‍ಗಳು ಬಂದಿದ್ದು, ಫೇಸ್‍ಬುಕ್‍ನಲ್ಲೇ ಆತನ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮೈಸೂರಿನ ಸಮಗ್ರ ರಕ್ಷಣಾ ವೇದಿಕೆ ವತಿಯಿಂದ ಡಿಸಿಪಿ ವಿಷ್ಣುವರ್ಧನ ಅವರಿಗೆ ದೂರು ನೀಡಲಾಗಿದೆ.
